ಅನಾರೋಗ್ಯದಿಂದ ಬೇಸತ್ತು ಗುಂಡು ಹೊಡೆದುಕೊಂಡು Suicide

ಅನಾರೋಗ್ಯ ಸಮಸ್ಯೆಯಿಂದ ಬೇಸೆತ್ತು ವೃದ್ಧರೊಬ್ಬರು ತಮ್ಮದೇ ಬಂದೂಕಿನಿಂದ ಶೂಟ್ ಮಾಡಿಕೊಂಡು Suicide ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ ನಡೆದಿದೆ.
ಸಿಂಗಲ್ ಬ್ಯಾರಲ್ ಗನ್ನಿಂದ ಗುಂಡು ಹಾರಿಸಿಕೊಂಡು ಸಾವು
ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾರೆ. ನೆನ್ನೆ ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ತಮ್ಮ ಸಿಂಗಲ್ ಬ್ಯಾರಲ್ ಗನ್ನಿಂದ ಕುತ್ತಿಗೆಯ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದು, ಪರಿಣಾಮ ತಲೆ ಸಂಪೂರ್ಣವಾಗಿ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಘೋರ ಘಟನೆ – ಗುಂಡು ಹಾರಿಸಿಕೊಂಡು ಸರ್ಕಾರಿ ಶಾಲೆ ಶಿಕ್ಷಕಿ ಸಾವು!

ಆಗಿದ್ದೇನು..?
ರಾಮಚಂದ್ರ ರಾವ್ ಅವರು ಕಳೆದ ಕೆಲವು ದಿನಗಳ ಹಿಂದೆ ಮನೆಯಲ್ಲಿ ಕುಸಿದು ಬಿದ್ದಿದ್ದರು. ಅಂದಿನಿಂದ ಮಲಗುವ ವೇಳೆ ತೀವ್ರ ತಲೆನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆದಿದ್ದರು. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಮನನೊಂದಿದ್ದ ಅವರು ಎಂದಿನಂತೆ ಮೇ 31ರ ರಾತ್ರಿಯೂ ಕೂಡ ಮಕ್ಕಳೊಂದಿಗೆ ಮಾತನಾಡಿದ್ದಾರೆ. ಬಳಿಕ ಎಲೆ-ಅಡಿಕೆ ಹಾಕಿಕೊಂಡು ತಮ್ಮ ಕೋಣೆಗೆ ಮಲಗಲು ತೆರಳಿದ್ದರು. ಇನ್ನು ಮಧ್ಯರಾತ್ರಿ ವೇಳೆ ಕೋಣೆಯೊಳಗಿಂದ ಭಾರೀ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಓಡಿ ಬಂದು ನೋಡಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ವಿಷಯ ಪೊಲೀಸರಿಗೆ ತಿಳಿಸಲಾಗಿದೆ.
Suicide – ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ನಿಖರ ಕಾರಣ ಹಾಗೂ ಇತರ ಅಂಶಗಳ ಕುರಿತು ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ರಾಜ್ಯದಲ್ಲಿ ಮತ್ತೆ 2 ದಿನಗಳ ಕಾಲ ಮಳೆ ಪೂರ್ವ ಮುಂಗಾರಿಗೆ ಜನರು ತತ್ತರ




