CM ವಿಜಯ್ ಕುಟುಂಬದಲ್ಲಿ ಬೀಸಲಿದೆಯಾ ತಂಗಾಳಿ?

ವಿಜಯ್ ಅವರು ಮೊದಲ ಪ್ರಯತ್ನದಲ್ಲೇ ಚುನಾವಣೆಯಲ್ಲಿ ಗೆದ್ದು ತಮಿಳುನಾಡು ಮುಖ್ಯಮಂತ್ರಿಯಾಗಿ ಪೀಠ ಅಲಂಕರಿಸುವ ಮೂಲಕ ರಾಜಕೀಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ, ರಾಜಕೀಯ ಯಶಸ್ಸಿನ ಬೆನ್ನಲ್ಲೇ ಅವರಿಗೆ ವೈಯಕ್ತಿಕ ಜೀವನದಲ್ಲಿ ದೊಡ್ಡ ಸವಾಲೊಂದು ಎದುರಾಗಿದ್ದು, ಇಡೀ ದೇಶದ ಗಮನವೀಗ ಅವರತ್ತ ನೆಟ್ಟಿದೆ.
ಜೂನ್ 15ಕ್ಕೆ ವಿಜಯ್ಗೆ ಬಿಗ್ ಡೇ
ವಿಜಯ್ ಮತ್ತು ಸಂಗೀತ ದಂಪತಿಯ ವೈವಾಹಿಕ ಜೀವನದ ಕುರಿತು ಕಳೆದ ಕೆಲವು ತಿಂಗಳುಗಳಿಂದ ನಿರಂತರ ಚರ್ಚೆಗಳು ನಡೆಯುತ್ತಿವೆ. ವಿಚ್ಛೇದನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂಬ ವರದಿಗಳು ಹರಿದಾಡುತ್ತಿದ್ದು, ಜೂನ್ 15 ರಂದು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಈ ದಿನ ಅತ್ಯಂತ ಕುತೂಹಲ ಮೂಡಿಸಿದೆ.
ಇದನ್ನು ಓದಿ : ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ CM Vijay..!!

ಮತ್ತೆ ಒಂದಾಗ್ತಾರಾ CM ವಿಜಯ್ – ಸಂಗೀತ?
ಇದೇ ವೇಳೆ, ದಂಪತಿ ಮತ್ತೆ ಒಂದಾಗುವ ಸಾಧ್ಯತೆಗಳ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಕುಟುಂಬ ಹಾಗೂ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಮತ್ತೆ ಒಂದಾಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.
ವಾಸ್ತವದ ಪರಿಸ್ಥಿತಿಯೇ ಬೇರೆ
ಇತ್ತೀಚಿನ ದಿನಗಳಲ್ಲಿ ನಟಿ ತ್ರಿಶಾ ಕೃಷ್ಣನ್ ಜೊತೆಗೆ ಸಿಎಂ ವಿಜಯ್ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಬೇರೆಯದೇ ಸೂಚನೆ ನೀಡುತ್ತಿದೆ. ಹೀಗಾಗಿ, ಜೂನ್ 15 ರಂದು ನ್ಯಾಯಾಲಯದಲ್ಲಿ ಇಬ್ಬರ ಪರ ವಕೀಲರು ಮಂಡಿಸಲಿರುವ ವಾದಗಳು ಮತ್ತು ತೆಗೆದುಕೊಳ್ಳುವ ನಿರ್ಧಾರಗಳ ಆಧಾರದ ಮೇಲಷ್ಟೇ ಈ ಪ್ರಕರಣಕ್ಕೆ ಅಧಿಕೃತ ಸ್ಪಷ್ಟನೆ ಸಿಗಲಿದೆ.

ಇದನ್ನು ನೋಡಿ : ಬಡವರಿಗೆ ಸಿಗಬೇಕಿದ್ದ ಅನ್ನಕ್ಕೆ ಕನ್ನ – 22 ಕಡೆ LOKA ಭರ್ಜರಿ RAID




