Kalaburagi Murder News: ಮೊಹರಂ ಹಬ್ಬ ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಭಾವೈಕ್ಯತೆ ಸಾರುವ ಹಬ್ಬವನ್ನಾಗಿ ಆಚರಿಸುತ್ತಾರೆ.
ಮೋಹರಂ ಹಬ್ಬದಲ್ಲಿ ಪೀರ್ ಹಿಡಿಯುವ ವಿಚಾರದಲ್ಲಿ ಶುರುವಾದ ಗಲಾಟೆ ಹಬ್ಬ ಮುಗಿದು ತಿಂಗಳುಗಳೆ ಕಳೆದ್ರು ಗಲಾಟೆ ಮಾತ್ರ ಮುಗಿದಿರಲಿಲ್ಲ.ಆದ್ರೆ ಈ ಬಾರಿ ಸ್ವಲ್ಪ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮೋಹರಂ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

Kalaburagi Murder News : ಮೊಹರಂ ಹಬ್ಬದಲ್ಲಿ ಪೀರ್ ಹಿಡಿಯುವ ವಿಚಾರದಲ್ಲಿ ಆರಂಭವಾದ ಗಲಾಟೆ ಮೌಲ್ವಿ ಕೊಲೆಯಲ್ಲಿ ಅಂತ್ಯವಾಯಿತು. ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಹನಿಫ್ಸಾಬ್ ಹತ್ಯೆಗೊಳಗಾದರು.
ಹಲವು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಪೀರ್ ಹಿಡಿಯುವ ಸಂಬಂಧ ದ್ವೇಷ ಹುಟ್ಟಿತ್ತು.
ಈ ಗಲಾಟೆ ಕ್ಷುಲ್ಲಕ ಕಾರಣಕ್ಕೆ ವಿಕೋಪಕ್ಕೆ ಹೋಗಿ, ರುಸ್ತಂ ಖುರೇಶಿ ಪುತ್ರ ರಿಜ್ವಾನ್ ಚಾಕುವಿನಿಂದ ಹನಿಫ್ಸಾಬ್ ಅವರನ್ನು ಹತ್ಯೆ ಮಾಡಿದರು. ನಂತರ ರಿಜ್ವಾನ್ ಸ್ವತಃ ಪೊಲೀಸರಿಗೆ ಶರಣಾಗಿದ್ದಾರೆ.
ಪೀರ್ ಹಿಡಿಯುವ ವಿಚಾರಕ್ಕೆ ಗಲಾಟೆ
ಕಮಲಾಪುರ ಪಟ್ಟಣದ ಹನಿಫ್ಸಾಬ್, 35 ವರ್ಷಗಳಿಂದ ಮೊಹರಂ ಸಂದರ್ಭದಲ್ಲಿ ಪೀರ್ ಹಿಡಿಯುವ ಧಾರ್ಮಿಕ ಕಾರ್ಯ ನಡೆಸುತ್ತಿದ್ದವರು. ಕೆಲವು ವರ್ಷಗಳಿಂದ ರುಸ್ತಂ ಖುರೇಶಿ ಕುಟುಂಬವು ಪೀರ್ ಹಿಡಿಯುವ ಹೊಣೆ ವಹಿಸುತ್ತಿದ್ದು, ಕಳೆದ ಅನೇಕ ವರ್ಷಗಳಿಂದ ಇಬ್ಬರ ಕುಟುಂಬಗಳ ನಡುವೆ ಗಲಾಟೆ ಇರುತ್ತಿತ್ತು.
ಇತ್ತೀಚೆ ದಿನಗಳಲ್ಲಿ ಹನಿಫ್ಸಾಬ್ ಕುಟುಂಬದವರು ದರ್ಗಾಕ್ಕೆ ಭೇಟಿ ನೀಡಿದಾಗ, ರುಸ್ತಂ ಖುರೇಶಿ ಕುಟುಂಬದವರು ಜಗಳ ಆರಂಭಿಸಿದರು.
ನಿನ್ನೆ, ದೂರು ನೀಡಲು ಪೊಲೀಸರಿಗೆ ಹೋಗುತ್ತಿದ್ದ ಹನಿಫ್ಸಾಬ್ ಬೈಕ್ಗೆ ರಿಜ್ವಾನ್ ಆಟೋದಿಂದ ಡಿಕ್ಕಿ ಹೊಡೆದಿದ್ದು, ನಂತರ ರಿಜ್ವಾನ್ ಚಾಕುವಿನಿಂದ ಹನಿಫ್ಸಾಬ್ ಅವರನ್ನು ಹತ್ಯೆ ಮಾಡಿದರು.
ಕಳೆದ ಅನೇಕ ವರ್ಷಗಳಿಂದ ರುಸ್ತಂ ಖುರೇಶಿ ಮತ್ತು ಹನಿಫ್ಸಾಬ್ ಕುಟುಂಬಗಳ ನಡುವೆ ಕಲಹ ಇರ್ತಿತ್ತು. ಡಿಸೆಂಬರ್ 6 ರಂದು ಕಮಲಾಪುರ ಪಟ್ಟಣದಲ್ಲಿ ರುಸ್ತಂ ಖುರೇಶಿ ಪುತ್ರ ರಿಜ್ವಾನ್ ಗುಟ್ಕಾ ಖರೀದಿ ಮಾಡುತ್ತಿದ್ದಾಗ ಹನಿಫ್ಸಾಬ್ ಅವರ ಕಾಲಿಗೆ ಕಾಲು ತಟ್ಟಿದ.
ಕೋಪಗೊಂಡ ಹನಿಫ್ಸಾಬ್ ರಿಜ್ವಾನ್ಗೆ ಎರಡು ಎರೆಡೆಟು ಬಾರಿಸಿ ಹೋಗಿದ್ದರು.
ನಂತರ ರಿಜ್ವಾನ್ ಪೊಲೀಸ್ ಠಾಣೆಗೆ ದೂರು ನೀಡಿದರು. ಹನಿಫ್ಸಾಬ್ ಬೈಕ್ನಲ್ಲಿ ಠಾಣೆಗೆ ಹೋಗುತ್ತಿದ್ದರು, ಈ ವೇಳೆ ರಿಜ್ವಾನ್ ಆಟೋ ಮೂಲಕ ಅವರನ್ನು ಗುದ್ದಿ, ನಂತರ ಚಾಕುವಿನಿಂದ ಹತ್ಯೆ ಮಾಡಿದರು. ಬಳಿಕ ರಿಜ್ವಾನ್ ಪೊಲೀಸರು ಶರಣಾಗಿದ್ದಾರೆ.
ಪೊಲೀಸರ ನಿರ್ಲಕ್ಷ್ಯವೇ ಕೊಲೆಗೆ ಕಾರಣ
ಕಮಲಾಪುರ ಪೊಲೀಸ್ ಠಾಣೆಯಲ್ಲಿ ರಿಜ್ವಾನ್ ಮತ್ತು ತಂದೆ ರುಸ್ತಂ ಖುರೇಶಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ರಿಜ್ವಾನ್ ಈಗ ಪೊಲೀಸರಿಗೆ ಶರಣಾಗಿದ್ದಾರೆ. ಹನಿಫ್ಸಾಬ್ ಕುಟುಂಬದವರು, ಪೊಲೀಸರು ಹಿಂದಿನ ಜಗಳ ಮತ್ತು ಹಲ್ಲೆಗಳ ಬಗ್ಗೆ ಕ್ರಮ ಕೈಗೊಂಡಿರಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಮೋಹರಂ ಹಬ್ಬವು ಹಿಂದೂ-ಮುಸ್ಲಿಂ ಸಮುದಾಯದ ನಡುವಿನ ಸಾಮರಸ್ಯದ ಹಬ್ಬವಾಗಿದ್ದರೂ, ಈ ಪ್ರಕರಣದಲ್ಲಿ ಮುಸ್ಲಿಂ ಮಧ್ಯೆ ಪೀರ್ ವಿಚಾರದ ಗಲಾಟೆ ಕೊಲೆಗೆ ತಲುಪಿದ್ದು ದುರಂತವಾಗಿದೆ.




