IND vs SA : ಏಕದಿನ ಸರಣಿಯಲ್ಲಿ ಭಾರತ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli), ವೈಜಾಗ್ನ ಸಿಂಹಾಚಲಂ ದೇವಸ್ಥಾನದಲ್ಲಿ ವರಾಹ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

IND vs SA : ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಗೆಲುವಿನ ನಂತರ, ಆಟಗಾರ ವಿರಾಟ್ ಕೊಹ್ಲಿ ವೈಜಾಗ್ನ ಪ್ರಸಿದ್ಧ ಸಿಂಹಾಚಲಂ ವರಾಹ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ
ಸರಣಿ ಯುದ್ದಕ್ಕೂ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿ ಮೆರೆದಿದ್ದು, ಎರಡು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ ಒಟ್ಟು 302 ರನ್ ಗಳಿಸಿ ಮರುಬಾರಿಯೂ ತನ್ನ ಕ್ಲಾಸ್ ಅನ್ನು ಸಾಬೀತುಪಡಿಸಿದರು.
ಇದನ್ನೂ ಓದಿ : Ind vs SA | ODI Final | ಆಫ್ರಿಕಾ ಆಲೌಟ್ – ಭಾರತಕ್ಕೆ 271 ರನ್ಗಳ ಗುರಿ!

ಸರಣಿಯ ಅಂತಿಮ ಪಂದ್ಯದಲ್ಲಿ ಅಜೇಯ 65 ರನ್ ಗಳಿಸಿದ ಕೊಹ್ಲಿ, 271 ರನ್ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತಕ್ಕೆ ಸ್ಥಿರತೆ ನೀಡಿದರು ಹಾಗೂ ಗೆಲುವಿನತ್ತ ಕೊಂಡೊಯ್ದರು. ಯಶಸ್ವಿ ಜೈಸ್ವಾಲ್ (116 ರನ್) ಹಾಗೂ ನಾಯಕ ರೋಹಿತ್ ಶರ್ಮಾ (75 ರನ್) ಸೇರಿ ಭಾರತದ ಟಾಪ್ ಆರ್ಡರ್ ಸುಲಭ ಗೆಲುವಿಗೆ ಮಹತ್ವದ ಕೊಡುಗೆ ನೀಡಿತು.
ಸಿಂಹಾಚಲಂ ದೇವಸ್ಥಾನಕ್ಕೆ ಕೊಹ್ಲಿ ಭೇಟಿ
ಇದೇ ವೇಳೆ, ವೈಜಾಗ್ನಲ್ಲಿ ನಡೆದ ಪಂದ್ಯದ ಮೊದಲು ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡಾ ಸಿಂಹಾಚಲಂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅಂತಿಮ ಪಂದ್ಯದಲ್ಲಿ ಗಂಭೀರ್ ರೂಪಿಸಿದ ಕಾರ್ಯತಂತ್ರವು ತಂಡಕ್ಕೆ ಭರ್ಜರಿ ಯಶಸ್ಸು ತರಲು ನೆರವಾಯಿತು, ಭಾರತವು 9 ವಿಕೆಟ್ಗಳ ಭಾರೀ ಗೆಲುವು ದಾಖಲಿಸಿತು.
MUST WATCH: ಗಬ್ಬೆದ್ದಿವೆ MARALUR DINNEಯ ಚರಂಡಿಗಳು – ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ




