ಭಾರತದ ಕಳಸ, ಸಮಾನತೆಯ ಹರಿಕಾರ Ambedkar ಎಂದೆಂದಿಗೂ ಅಜರಾಮರ..!

ಭಾರತ ಇತಿಹಾಸದ ಮಹಾನ್ ಚಿಂತಕ, ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಾಪರಿ ನಿರ್ವಾಹಣ ದಿನವನ್ನು ಇವತ್ತು. ದೇಶದ ಉದ್ದಗಲಕ್ಕೂ ಆಚರಿಸುತ್ತಿದ್ದೇವೆ. ಇದು ಕೇವಲ ಸ್ಮರಣೆಯ ದಿನವಲ್ಲ.ಇದು ಆತ್ಮಚಿಂತನೆ ಮಾಡುವ, ಅವರ ಕನಸುಗಳನ್ನು ಮತ್ತೆ ನೆನಪಿಸಿಕೊಳ್ಳುವ, ನಮ್ಮ ಕರ್ತವ್ಯಗಳನ್ನು ಮರುಪರಿಶೀಲಿಸುವ ಒಂದು ಸುಸಂದರ್ಭ ಅಂದ್ರೆ ತಪ್ಪಾಗಲಿಕಿಲ್ಲ.
ಅಂದು ಡಿಸೆಂಬರ್ 6 1956 ಬೆಳಿಗ್ಗೆ ಸುಮಾರು 6:30 ರ ಸುಮಾರಿಗೆ, ಡಾ. ಅಂಬೇಡ್ಕರ್ ಅವರ ಪತ್ನಿ ಸವಿತಾ ಅಂಬೇಡ್ಕರ್ ಎಂದಿನಂತೆ ಎದ್ದು ಹಾಸಿಗೆಯನ್ನು ನೋಡಿದಾಗ ಡಾ. ಅಂಬೇಡ್ಕರ್ ಅವರ ಕಾಲು ಕುಶನ್ ಮೇಲೆ ವಿಶ್ರಾಂತಿ ಪಡೆಯುವುದನ್ನು ಕಂಡರು. ಅವರು ನಿಧನರಾಗಿದ್ದಾರೆಂದು ಅವರಿಗೆ ಶೀಘ್ರದಲ್ಲೇ ಅರಿವಾಯಿತು. ಕೂಡಲೇ ಅಂಬೇಡ್ಕರ್ ಅವರ ಸಹಾಯಕ ನಾನಕ್ ಚಂದ್ ರಟ್ಟುಗೆ ವಿಷಯ ತಿಳಿಸಿದ ಅಂಬೇಡ್ಕರವರ ಪತ್ನಿ ಸಹಾಯಕನನ್ನ ಮನೆಗೆ ಕರೆಸಿಕೊಂಡರು. ಬಾಬಾ ಸಾಹೇಬರ ಪ್ರೀತಿಯ ಸಹಾಯಕ ಬಂದ ಕ್ಷಣವೇ ಅಂಬೇಡ್ಕರ್ ಬಾಬಾಸಾಹೇಬರು ಇಹಲೋಕ ತ್ಯಜಿಸಿದ್ದಾರೆ ಎಂದು ಸೋಫಾದಲ್ಲಿ ಅಳುತ್ತಾ ಕುಳಿತುಬಿಟ್ಟರು.

Ambedkar ಅವರ ಪಾರ್ಥಿವ ಶರೀರವನ್ನು ಮುಂಬೈನ ದಾದರ್ ಚೌಪಟ್ಟಿಯಲ್ಲಿ ದಹನ
ಈ ಸುದ್ದಿ ಕೇಳಿದ ಸಹಾಕನಿಗೆ ತನ್ನ ಪ್ರೀತಿಯ ಯಜಮಾನ ಇನ್ನಿಲ್ಲವಲ್ಲ ಎಂಬ ಕೂರಗು ಶುರುವಾಯಿತು. ನಂತರ ಕೇಂದ್ರ ಸರ್ಕಾರದ ಮಂತ್ರಿಗಳಿಗೆ ಆಘಾತಕಾರಿ ಸುದ್ದಿಯನ್ನು ತಿಳಿಸಿಲಾಯಿತು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಅವರ ಅನೇಕ ಅಭಿಮಾನಿಗಳು, ಲೆಫ್ಟಿನೆಂಟ್ಗಳು ಮತ್ತು ಅನುಯಾಯಿಗಳು ರಸ್ತೆಯುದ್ದಕ್ಕೂ ಜಮಾಯಿಸಿದರು. ಶೀಘ್ರದಲ್ಲೇ ಅವರ ನಿವಾಸದ ಹೊರಗೆ ಆ ಮಹಾನ್ ವ್ಯಕ್ತಿಯ ಕೊನೆಯ ನೋಟವನ್ನು ಪಡೆಯಲು ಶೋಕತಪ್ತರ ಗುಂಪು ಜಮಾವಣೆಗೊಂಡಿತು. ಸಂವಿಧಾನ ಶಿಲ್ಪಿ ಭಾರತದ ಮೊದಲ ಕಾನೂನು ಮಂತ್ರಿ ಅಂಬೇಡ್ಕರವರನ್ನ ದೆಹಲಿಯಲ್ಲೇ ಸಮಾಧಿ ಮಾಡಲು ಅನುಮತಿ ಸಿಗದ ಕಾರಣ ಬಾಂಬೆ ಸಹಚರರಿಗೆ ಸಿದ್ಧಾರ್ಥ ಕಾಲೇಜಿನ ಮೂಲಕ ಮಾಹಿತಿ ನೀಡಲಾಯಿತು. ನಂತರ ಆ ರಾತ್ರಿ ಪಾರ್ಥಿವ ಶರೀರವನ್ನು ಬಾಂಬೆಗೆ ವಿಮಾನದಲ್ಲಿ ತರಲಾಯಿತು ಪಾರ್ಥಿವ ಶರೀರವನ್ನು ಮುಂಬೈನ ದಾದರ್ ಚೌಪಟ್ಟಿಯಲ್ಲಿ ದಹನ ಮಾಡಲಾಯಿತು.
ಜಾತಿ ಮನುಷ್ಯನ ಮೌಲ್ಯವನ್ನು ತೀರ್ಮಾನಿಸಬಾರದು
Ambedkar ಅವರು ಭಾರತೀಯ ಸಮಾಜಕ್ಕೆ ಬಿಟ್ಟ ಅಮೂಲ್ಯ ಕೊಡುಗೆ ಕೇವಲ ಸಂವಿಧಾನ ಬರೆಯುವುದಲ್ಲ. ಅವರು ಒಬ್ಬ ಚಳುವಳಿ, ಒಂದು ಚಿಂತನೆ, ಒಂದು ಧೈರ್ಯ, ಹೋರಾಟಕ್ಕೆ ಹೆಸರು. ಜಾತಿ ಮನುಷ್ಯನ ಮೌಲ್ಯವನ್ನು ತೀರ್ಮಾನಿಸಬಾರದು ಎಂಬ ಮುಖ್ಯ ಧ್ಯೇಯ ಅವರದ್ದಾಗಿತ್ತು. ಶಿಕ್ಷಣವೇ ಸಮಾನತೆಯ ಬಾಗಿಲು.ಸ್ವತಂತ್ರ, ಸಮಾನ, ನ್ಯಾಯಯುತ ಸಮಾಜವೇ ನಿಜವಾದ ಪ್ರಗತಿ ಎಂಬ ತತ್ವ ಸಿದ್ದಂತಗಳನ್ನ ಸಾರಿದ ಶಿಕ್ಷಣ ಭೀಷ್ಮ ಬಾಬಾ ಸಾಹೇಬ್ Ambedkar.
ಇದನ್ನು ಓದಿ : ಯಶ್ Toxic ಚಿತ್ರಕ್ಕೆ ರಣವೀರ್ ನೇರಾ ನೇರ ಸವಾಲು

ಅಂಬೇಡ್ಕರ್ ಬಯಸಿದ ಭಾರತವನ್ನು ನಾವು ನಿರ್ಮಿಸಿದ್ದೇವೆನೋ?
ಈಗ ಮುಖ್ಯವಾಗಿ ಅಂಬೇಡ್ಕರ್ ಅವರು ಬಯಸಿದ ಭಾರತವನ್ನು ನಾವು ನಿರ್ಮಿಸಿದ್ದೇವೆನೋ? ಎಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಹೌದು ಇವತ್ತಿನ ಕಾಲ ಘಟಕ್ಕೆ ಬದಲಾಗುತ್ತಿರುವ ವಿದ್ಯಾಮಾನಕ್ಕೆ ಅನುಸರವಾಗಿ, ಜಾತಿ ಬೇಧ, ಅಸಮಾನತೆ, ಅಂಧಶ್ರದ್ಧೆ, ಮಹಿಳೆಯರ ಮೇಲೆ ಅನ್ಯಾಯ. ಈ ಎಲ್ಲವುಗಳ ನಡುವೆ ನಾವು ಅವರ ಸಂದೇಶವನ್ನು ಮತ್ತೆ ಜಾಗೃತಗೊಳಿಸಬೇಕಿದೆ. “Be Educated, Be Organised, Be Agitated.” ಎಂಬ ಬಾಬಾ ಸಾಹೇಬರ ಘೋಷಣೆ ಕೇವಲ ಘೋಷಣೆ ಅಲ್ಲ ಇದು ಸಮಾಜವನ್ನು ಎಬ್ಬಿಸುವ ಅಲಾರಂ ಘಂಟೆ.
ಡಾ. ಅಂಬೇಡ್ಕರ್ ಅವರ ದೃಷ್ಟಿಯ ಭಾರತ ಸರ್ವರಿಗೂ ಸಮಾನ ನ್ಯಾಯ, ಸಮಾನ ಅವಕಾಶ ಮತ್ತು ಮಾನವೀಯತೆ ತುಂಬಿದ ಸಮಾಜ. ಅದು ನಮ್ಮ ಕೈಯಲ್ಲಿ, ನಮ್ಮ ನಡೆ-ನುಡಿಯಲ್ಲಿ, ನಮ್ಮ ಕಾರ್ಯದಲ್ಲಿ ನಿರ್ಮಾಣವಾಗಬೇಕು. ‘ಶಿಕ್ಷಣ ಪಡೆದುಕೊಳ್ಳಿ, ಸಂಘಟಿತರಾಗಿ, ಹೋರಾಡಿ’ ಸರಳವಾದ ಈ ಮೂರು ಮಾತುಗಳು ಭಾರತದಲ್ಲಿ ಯುಗಾಂತಕಾರಿ ಬದಲಾವಣೆ ತಂದವು ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸಮಾನ ಅವಕಾಶ ನೀಡುವುದು,ಅವರ ಕನಸು.ಆ ಕನಸಿನತ್ತ ಎಲ್ಲರೂ ಹೆಜ್ಜೆ ಹಾಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಜವಬ್ದಾರಿಯಾಗಿದೆ.

ಇದನ್ನು ನೋಡಿ : APMCಗೆ ಹೋಗುವವರಿಗೆ ಗುಡ್ ನ್ಯೂಸ್ – ಗುಂಡಿ ತುಂಬಿದ್ದ ರಸ್ತೆ ಕಾಮಗಾರಿಗೆ ಅಸ್ತು




