Nandini Parlour : ನಂದಿನಿ ಪಾರ್ಲರ್ಗಳಲ್ಲಿ ಬೇರೆ ಬೇರೆ ಬ್ರ್ಯಾಂಡ್ ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್ (KMF) ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಲೈಸೆನ್ಸ್ ರದ್ದು ಮಾಡೋದಾಗಿ ಖಡಕ್ ಎಚ್ಚರಿಕೆ ನೀಡಿದೆ.

Nandini Parlour : ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಸಿಕ್ಕಿಬಿದ್ದ ನಂತರ, ಕರ್ನಾಟಕ ಮಿಲ್ಕ್ ಫೆಡರೇಶನ್ (KMF) ಕಠಿಣ ಕ್ರಮಕ್ಕೆ ಮುಂದಾಗಿದೆ.
ನಂದಿನಿ ಪಾರ್ಲರ್ಗಳಲ್ಲಿ ಬೇರೆ ಬ್ರ್ಯಾಂಡ್ ನಿಷೇಧ
ನಂದಿನಿ ಪಾರ್ಲರ್ಗಳಲ್ಲಿ ಬೇರೆ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಪೂರ್ಣ ಬ್ರೇಕ್ ಹಾಕಲಾಗುತ್ತಿದ್ದು, ಉಲ್ಲಂಘನೆ ಮಾಡಿದಲ್ಲಿ ಲೈಸೆನ್ಸ್ ರದ್ದು ಮಾಡಲು ಕೆಎಂಎಫ್ ಖಡಕ್ ಎಚ್ಚರಿಕೆ ನೀಡಿದೆ.
ನಕಲಿ ತುಪ್ಪ ಜಾಲ ಬಯಲು
ಸಿಸಿಬಿ ಪೊಲೀಸರು ಮತ್ತು ಕೆಎಂಎಫ್ ಜಾಗೃತ ದಳ ನಡೆಸಿದ ಕಾರ್ಯಾಚರಣೆಯಲ್ಲಿ, ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಗ್ಯಾಂಗ್ ಹಿಡಿಯಲ್ಪಟ್ಟಿತ್ತು.
ಈ ಗ್ಯಾಂಗ್ ಕೆಎಂಎಫ್ ನಿಂದ ನಂದಿನಿ ತುಪ್ಪದ ಪ್ಯಾಕೆಟ್ ಖರೀದಿ ಮಾಡಿ, ತಮಿಳುನಾಡಿನ ತಿರುಪೂರ್ನ ಗೋದಾಮಿಗೆ ಸಾಗಾಟ ಮಾಡಿ ಅಲ್ಲಿ ಕಲಬೆರಕೆ ಮಾಡಿ ನಕಲಿ ತುಪ್ಪ ಸಿದ್ಧಪಡಿಸಿ ಪುನಃ ಮಾರುಕಟ್ಟೆಗೆ ಹರಿಬಿಡುತ್ತಿದ್ದರು. ಪ್ಯಾಕೇಟ್ಗಳು ಮೂಲ ಮಾದರಿಯಂತೆ ಇದ್ದುದರಿಂದ ಗ್ರಾಹಕರು ಸುಲಭವಾಗಿ ಮೋಸಕ್ಕೆ ಒಳಗಾಗುತ್ತಿದ್ದರು.

ಇದನ್ನೂ ಓದಿ : ಗ್ರಾಹಕರಿಗೆ ಶಾಕ್: KMF ನಂದಿನಿ ದೇಸಿ ಹಾಲಿನ ಬೆಲೆ ಏರಿಕೆ
ಕೆಎಂಎಫ್ನ ಕಠಿಣ ನಿರ್ಧಾರ
ಈ ಘಟನೆಯ ನಂತರ ಕೆಎಂಎಫ್ ಹಲವು ನಿಯಮಗಳನ್ನು ಕಠಿಣಗೊಳಿಸಲು ನಿರ್ಧರಿಸಿದೆ. ಮುಖ್ಯ ನಿಯಮ — ನಂದಿನಿ ಪಾರ್ಲರ್ಗಳಲ್ಲಿ ನಂದಿನಿ ಹೊರತುಪಡಿಸಿ ಬೇರೆ ಯಾವುದೇ ಬ್ರ್ಯಾಂಡ್ ಮಾರಾಟಕ್ಕೆ ಅನುಮತಿ ಇಲ್ಲ.
ಕಳಪೆ ತುಪ್ಪ ಪ್ರಕರಣದ ಬಳಿಕ ನಂದಿನಿ ಪಾರ್ಲರ್ಗಳ ಮೇಲೆ ಕಣ್ಣಿಟ್ಟ ಕೆಎಂಎಫ್
ಕೆಎಂಎಫ್ ಎಂಡಿ ಶಿವಸ್ವಾಮಿ ಅವರು ಈ ಕುರಿತು ಮಾತನಾಡಿ, “ನಂದಿನಿ ಬ್ರ್ಯಾಂಡ್ಗೆ ಕೆಟ್ಟ ಹೆಸರು ಬರುವಂತಿಲ್ಲ. ನಮ್ಮ ಪಾರ್ಲರ್ಗಳಲ್ಲಿ ಬೇರೆ ಬ್ರ್ಯಾಂಡ್ ಮಾರಾಟಕ್ಕೆ ಅವಕಾಶವಿಲ್ಲ. ಕೆಲವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ.
ಇನ್ನೂ ಉಲ್ಲಂಘನೆ ಮಾಡಿದರೆ ನೇರವಾಗಿ ಲೈಸೆನ್ಸ್ ರದ್ದುಪಡಿಸಲಾಗುತ್ತದೆ,” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೆಎಂಎಫ್ ನಿಯಮ ಬಲಪಡಿಸಿದ ಹಿನ್ನೆಲೆಯಲ್ಲಿ ನಂದಿನಿ ಪಾರ್ಲರ್ಗಳಲ್ಲಿ ಸ್ವಚ್ಛತೆ, ಗುಣಮಟ್ಟ ಮತ್ತು ಬ್ರ್ಯಾಂಡ್ ವಿಶ್ವಾಸ ಜಾಗೃತಿಗೊಳಿಸಲು ಮತ್ತಷ್ಟು ಕ್ರಮ ಜಾರಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
MUST WATCH: KMF SCAM | ಮೂಕ ಜೀವಿಗಳ ಜೊತೆ KMF ಚೆಲ್ಲಾಟ? – ಕಳಪೆ ಫೀಡ್ಸ್ ಮಹಾ ದಂಧೆ ಬಯಲು




