Basavaraj Bommai : ಸಿಎಂ, ಡಿಸಿಎಂ ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

CM, DCM ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗ್ ಬರೀ ಟೀಸರ್, ಸಿನೆಮಾ ಇನ್ನೂ ಬಾಕಿ ಇದೆ. ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗೊಂದಲಗಳು ಹೊರಬೀಳಲಿದೆಯಾ..?
ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ Basavaraj Bommai ರಾಜ್ಯ ಕಾಂಗ್ರೆಸ್ ಸರ್ಕಾರದ ಒಳಗಿರುವ ಗೊಂದಲಗಳು ಶೀಘ್ರದಲ್ಲೇ ಹೊರಬೀಳಲಿದೆ. “ಇವರಿಬ್ಬರೂ ಪರಸ್ಪರ ಬ್ರೇಕ್ಫಾಸ್ಟ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದರೆ, ರಾಜ್ಯದ ಜನರ ಶ್ರೇಯೋಭಿವೃದ್ಧಿಯನ್ನು ಯಾರು ನೋಡಿಕೊಳ್ಳಬೇಕು ಎಂಬುದು ನಮ್ಮ ಕಾಳಜಿ,” ಎಂದು ಟೀಕಿಸಿದರು.
ಇದನ್ನು ಓದಿ : ಡಿವೈಡರ್ಗೆ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ- ಓರ್ವ ಮಹಿಳೆ ಸಾವು..!

ಕರ್ನಾಟಕದಲ್ಲಿ ನಡೆಯುತ್ತಿರುವ ನಾಟಕ ನಿಲ್ಲಬೇಕು – ಬೊಮ್ಮಾಯಿ
ಮುಂದುವರಿದು ಮಾತನಾಡಿದ ಬೊಮ್ಮಾಯಿ ಅವರು “ಒಬ್ಬರು ಕುರ್ಚಿ ಕಸಿಯಲು ಪ್ರಯತ್ನಿಸುತ್ತಿದ್ದಾರೆ, ಮತ್ತೊಬ್ಬರು ಅದನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಈ ನಾಟಕ ನಿಲ್ಲಬೇಕು ಎನ್ನುವುದು ಜನರ ಆಶಯ,” ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಇದೆಯೇ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿರುವ ಸಂದರ್ಭದಲ್ಲಿ ಹೈಕಮಾಂಡ್ ಗೊಂದಲ ಪರಿಹರಿಸಲು ವಿಫಲವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಕಾಂಗ್ರೆಸ್ಗೆ ನಿಜವಾಗಿಯೂ ಹೈಕಮಾಂಡ್ ಇದೆಯೆ? ಯಾರು ಹೈಕಮಾಂಡ್? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮೇಲೆಯೇ ಹೈಕಮಾಂಡ್ ಇದೆ ಎಂದು ಹೇಳಿಕೊಂಡ ನಂತರ ಹೈಕಮಾಂಡ್ ಎಂಬುದಕ್ಕೆ ಅರ್ಥವೇನು? ಇದು ಒಂದು ಕುಟುಂಬದ ವಿಷಯವಾಗಿಬಿಟ್ಟಿದೆ,” ಎಂದು ಆರೋಪಿಸಿದರು.

ಇದನ್ನು ನೋಡಿ : ಮನೆಯಲ್ಲಿದ್ದ ವೃದ್ಧ ದಂಪತಿ ನಿಗೂಢ ಸಾ* – ದಂಪತಿ ಕೊಲೆಯೋ ಆತ್ಮಹತ್ಯೆಯೋ




