Vaibhav Suryavanshi Century : ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ್ದ ವೈಭವ್ ಇದೀಗ ಮತ್ತೊಂದು ಶತಕ ಬಾರಿಸಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೈಯ್ದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ಬಿಹಾರ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Suryavanshi) ಅದ್ಭುತ ಶತಕ ಸಿಡಿಸಿದ್ದಾರೆ. ಟಾಸ್ ಗೆದ್ದ ಮಹಾರಾಷ್ಟ್ರ ತಂಡದ ನಾಯಕ ಪೃಥ್ವಿ ಶಾ ಬೌಲಿಂಗ್ ಆಯ್ದುಕೊಂಡರು.
ಬಿಹಾರ ಪರ ಇನಿಂಗ್ಸ್ ಆರಂಭ
ಬಿಹಾರ ಪರ ಇನಿಂಗ್ಸ್ ಆರಂಭಿಸಿದ ವೈಭವ್, ಅರ್ಧಶತಕ ಪೂರೈಸಲು 34 ಎಸೆತಗಳನ್ನು ತೆಗೆದುಕೊಂಡರು. ಹಾಫ್ ಸೆಂಚುರಿ ಪೂರ್ಣವಾದ ನಂತರ ಯುವ ದಾಂಡಿಗ ಶತಕದ ಪವಾಡ ಆರಂಭವಾಯಿತು.
ಇದನ್ನು ಓದಿ : Haveri|ಆಕಸ್ಮಿಕ ಬೆಂಕಿಗೆ 4 ಲಕ್ಷ ಮೌಲ್ಯದ ಮೆಕ್ಕೆಜೋಳದ ರಾಶಿ ಭಸ್ಮ

58 ಎಸೆತಗಳಲ್ಲಿ ಶತಕ
ವೈಭವ್ 58 ಎಸೆತಗಳಲ್ಲಿ ಶತಕ ತಲುಪಿದರು. 61 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಮತ್ತು 7 ಫೋರ್ಗಳೊಂದಿಗೆ ಅಜೇಯ 108 ರನ್ ಗಳಿಸಿದರು. ವೈಭವ್ ಶತಕದ ನೆರವಿನಿಂದ, ಬಿಹಾರ ತಂಡ 20 ಓವರ್ಗಳಲ್ಲಿ 176 ರನ್ ಕಲೆಹಾಕಿತು.
ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಶತಕ
ಈಗಾಗಲೇ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ 32 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್, UAE ವಿರುದ್ಧದ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ 144 ರನ್ ಗಳಿಸಿ, ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ದಾಖಲಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ವೈಭವ್ ಬ್ಯಾಟ್ನಿಂದ ಸಿಡಿಲಬ್ಬರ ಶತಕ ಮೂಡಿದ್ದು, ಯುವ ಬ್ಯಾಟರ್ಗಳ ಭವಿಷ್ಯದ ಮಹತ್ವವನ್ನು ತೋರಿಸಿದೆ.

ಇದನ್ನು ನೋಡಿ : ಮಂಡ್ಯ ಲೋಕಾಸಭಾ ಚುನಾವಣೆಯಲ್ಲಿ ಡಿಕೆಶಿ ಕತ್ತು ಕುಯ್ಯೋ ಕೆಲ್ಸ ಮಾಡಿದ್ರು




