Koppala: ಹನುಮ ಹುಟ್ಟಿದ ನಾಡಲ್ಲಿ ಹನುಮಮಾಲೆ ವಿಸರ್ಜನೆ ನಡೆಯಲಿದ್ದು, ಅಂಜನಾದ್ರಿ ಬೆಟ್ಟ (Anjanadre Hills) ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

Koppala: ಹನುಮ ಹುಟ್ಟಿದ ನಾಡೆಂದು ಕರೆಯಲ್ಪಡುವ ಅಂಜನಾದ್ರಿ ಬೆಟ್ಟ (Anjanadri Hills) ಇಂದು ಮತ್ತು ನಾಳೆ ನಡೆಯುವ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮದ ಸಂಭ್ರಮದಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಸಾವಿರಾರು ಭಕ್ತರು ಈಗಾಗಲೇ ಅಂಜನಾದ್ರಿಗೆ ಹರಿದು ಬರುತ್ತಿದ್ದು, ಈ ಬಾರಿ ಸುಮಾರು ಒಂದು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಜಿಲ್ಲಾಡಳಿತದಿಂದ ಭಾರೀ ಸಿದ್ಧತೆ
ಭಕ್ತರ ಸೌಕರ್ಯಕ್ಕಾಗಿ ಜಿಲ್ಲಾಡಳಿತವು ವಸತಿ, ಶೌಚಾಲಯ, ಕುಡಿಯುವ ನೀರು, ವೈದ್ಯಕೀಯ ನೆರವು ಹಾಗೂ ಉಚಿತ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಬರುವ ಭಕ್ತರಿಗಾಗಿ ಎಂಟು ಕಡೆ ತಂಗುವ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲಾಡಳಿತದ ಜೊತೆಗೆ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಕೂಡ ಕಾರ್ಯಕ್ರಮಕ್ಕಾಗಿ ಕೈಜೋಡಿಸಿದ್ದು, ಭಕ್ತರ ಸೌಲಭ್ಯಕ್ಕಾಗಿ ವಿವಿಧ ಸೇವಾ ಉಪಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ : ಡಿಸೆಂಬರ್ 3 ಹನುಮ ಜಯಂತಿ – ಆಚರಣೆಯ ವಿಧಾನ, ಮಹತ್ವ ಮತ್ತು ಪೂಜೆ ವಿಧಿ

ಹನುಮ ಮಾಲೆ ವಿಸರ್ಜನೆ
ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜನ್ಮಕ್ಕೆ ಸಂಬಂಧಿಸಿದ ಕೆಲ ಪೌರಾಣಿಕ ಕುರುಹುಗಳು ದೊರಕಿರುವ ಹಿನ್ನೆಲೆಯಲ್ಲಿ, ಹನುಮ ಮಾಲೆ ವೃತಕ್ಕೆ ಭಕ್ತಿ ದಿನೇದಿನೇ ಹೆಚ್ಚುತ್ತಿದೆ. ಕೇವಲ 13 ಭಕ್ತರು ಆರಂಭಿಸಿದ್ದ ಈ ವೃತವನ್ನು ಇಂದಿಗೆ ಲಕ್ಷಾಂತರ ಜನರು ಆಚರಿಸುತ್ತಿದ್ದಾರೆ. 45 ದಿನ, 30 ದಿನ, 15 ದಿನ, 9 ದಿನ ಅಥವಾ 3 ದಿನ ಮಾಲೆ ಧರಿಸುವ ಪದ್ಧತಿಗಳು ಮುಂದುವರಿದಿವೆ.
ಭದ್ರತೆಗೆ 2,000 ಪೊಲೀಸರ ನಿಯೋಜನೆ
ನಾಳೆ ಸಾಗರೋಪಾದಿಯಲ್ಲಿ ಹನುಮ ಮಾಲಾಧಾರಿಗಳು ಆಗಮಿಸುವ ಹಿನ್ನೆಲೆಯಲ್ಲಿ, ಭದ್ರತೆಗಾಗಿ ಕೊಪ್ಪಳದಿಂದ ಅಂಜನಾದ್ರಿವರೆಗೆ ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ನಡೆದಿದೆ.

ಸಿಎಸ್ಆರ್ ಅನುದಾನ ಬಳಕೆ ವಿವಾದಕ್ಕೆ ಕಾರಣ
ಇದೀಗ ಕಾರ್ಯಕ್ರಮದಲ್ಲಿ ಹೊಸ ವಿವಾದ ತಲೆದೋರಿದೆ. ಕಳೆದ 39 ದಿನಗಳಿಂದ, ಜಿಲ್ಲೆಯಲ್ಲಿ ಹಲವು ಕಾರ್ಖಾನೆಗಳ ವಿರುದ್ಧ ಪರಿಸರ ಹೋರಾಟ ನಡೆಯುತ್ತಿದ್ದರೂ, ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಕಿರ್ಲೋಸ್ಕರ್, ಮುಕುಂದ ಸುಮಿ, ಅಲ್ಟಾ ಟೆಕ್, ಹೊಸಪೇಟೆ ಸ್ಟೀಲ್ಸ್ ಸೇರಿದಂತೆ ಆನೆಕ ಕಾರ್ಖಾನೆಗಳ ಸಿಎಸ್ಆರ್ ನಿಧಿ ಪಡೆದುಕೊಂಡಿದೆ.
ಧಾರ್ಮಿಕ ಕಾರ್ಯಕ್ರಮಕ್ಕೆ ಕಾರ್ಖಾನೆಗಳ ಸಿಎಸ್ಆರ್ ಹಣ ಬಳಕೆ ಮಾಡುತ್ತಿರುವ ಬಗ್ಗೆ ಇದೀಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
MUST WATCH : ಕಮನೀಯ ಕ್ಷೇತ್ರದಲ್ಲಿ ಅದ್ದೂರಿ ಹನುಮ ಜಯಂತಿ ಸಂಭ್ರಮ




