Kitchen Recipe : ಸರಳವಾಗಿ ಮನೆಯಲ್ಲೇ ರುಚಿಕರವಾದ ಆಲೂ ಕಬಾಬ್ ಮಾಡುವ ವಿಧಾನ ಇಲ್ಲಿದೆ. ತಕ್ಷಣ ಮಾಡುವ ಸ್ನ್ಯಾಕ್, ಸ್ಟಾರ್ಟರ್ ಹಾಗೂ ಟೀಟೈಮ್ಗೆ ಸೂಪರ್ ಆಯ್ಕೆ

ಬೇಕಾಗುವ ಪದಾರ್ಥಗಳು (Ingredients)
- ಆಲೂಗಡ್ಡೆ – 3
- ಅಚ್ಚ ಖಾರದ ಪುಡಿ – 2 ಚಮಚ
- ಕಬಾಬ್ ಪುಡಿ – 1 ಚಮಚ
- ಮೈದಾ ಹಿಟ್ಟು – 4 ಚಮಚ
- ಅಕ್ಕಿ ಹಿಟ್ಟು – 2 ಚಮಚ
- ಕಾರ್ನ್ ಫ್ಲೋರ್ – 1 ಚಮಚ
- ಅರಿಶಿಣ – ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಕರಿಯಲು
MUST READ : Kitchen Recipe : ನವಣೆ ಪಾಯಸ | Foxtail Millet Payasam Recipe in Kannada
🍽️ ಮಾಡುವ ವಿಧಾನ (How to Make Aloo Kabab)
1. ಆಲೂಗಡ್ಡೆ ಬೇಯಿಸುವುದು
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸ್ಲೈಸ್ ಅಥವಾ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.
ಒಲೆಯ ಮೇಲೆ ಪಾತ್ರ ಇಟ್ಟು ನೀರು ಹಾಕಿ, ಆಲೂಗಡ್ಡೆಗಳನ್ನು ಸೇರಿಸಿ 2–3 ನಿಮಿಷ ಬೇಯಿಸಿ.
ನಂತರ ನೀರಿನಿಂದ ತೆಗೆದು ಬದಿಯಲ್ಲಿ ಇಡಿ.
2. ಮಸಾಲೆ ಮಿಶ್ರಣ ತಯಾರಿ
ಮತ್ತೊಂದು ಪಾತ್ರೆಯಲ್ಲಿ ಮೈದಾ, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಕಬಾಬ್ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
ಅದಕ್ಕೆ ಸ್ವಲ್ಪಸ್ವಲ್ಪವಾಗಿ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿ.
3. ಆಲೂ ಕಬಾಬ್ ಕರಿಯುವುದು
ಆಲೂ ಸ್ಲೈಸ್ಗಳನ್ನು ಈ ಮಸಾಲೆ ಪೇಸ್ಟ್ನಲ್ಲಿ ಮುಕ್ಕಿಸಿ.
ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಆಲೂ ತುಂಡುಗಳನ್ನು ಒಂದೊಂದಾಗಿ ಹಾಕಿ.
ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ.
✔️ ಸವಿಯಲು ಸಿದ್ಧ!
ಬೆಚ್ಚಗಿನ ಆಲೂ ಕಬಾಬ್ ಅನ್ನು ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆಗೆ ಸವಿಯಿರಿ.
MUST WATCH: ಸಿನಿಮಾ ಪ್ರಮೋಷನ್ಗೆ ತುಮಕೂರಿಗೆ EKKA MOVIE ತಂಡ ಎಂಟ್ರಿ | TUMAKURU NEWS |




