Vijayanagar : ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲ್ಲೂಕಿನ ಬಂಡಿಹಳ್ಳಿಯಲ್ಲಿ ನಡೆದಿದೆ.

Vijayanagar : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಂಡಿಹಳ್ಳಿಯಲ್ಲಿ ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಬಾಲಕ ದುರಂತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ನೇಹಿತರೊಂದಿಗೆ ಕೆರೆಗೆ ಹೋದ ಪೃಥ್ವಿ ನೀರುಪಾಲು
ಮೃತ ಬಾಲಕ ಪೃಥ್ವಿ (10), ಸ್ಥಳೀಯ ಶಿಕ್ಷಕ ಯು. ಗೋಣಿಬಸಪ್ಪ ಅವರ ಪುತ್ರನಾಗಿದ್ದು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್ಇ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.
ಕುರಿಗಾಹಿಗಳು ಒಬ್ಬರನ್ನು ರಕ್ಷಿಸಿ… ಮತ್ತೊಬ್ಬ ಬಾಲಕ ಜೀವ ಕಳೆದುಕೊಂಡ ಘಟನೆ
ಭಾನುವಾರ ತರಗತಿಯ ಐದು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋದಾಗ, ಪೃಥ್ವಿ ಹಾಗೂ ಮತ್ತೊಬ್ಬ ಬಾಲಕ ಆಕಾಶ್ ಇಬ್ಬರೂ ನೀರಿನಲ್ಲಿ ಮುಳುಗಲು ಆರಂಭಿಸಿದ್ದರು. ಈ ವೇಳೆ ಅಲ್ಲಿ ಇದ್ದ ಕುರಿಗಾಹಿಗಳು ಗಮನಿಸಿ ಆಕಾಶ್ನ್ನು ರಕ್ಷಿಸಿದರೂ, ಪೃಥ್ವಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಶಿರಾದ ದೊಡ್ಡಕೆರೆಯಲ್ಲಿ ಅಪರಿಚಿತ ಶವ ಪತ್ತೆ..!
ಸದ್ಯ ಘಟನೆಯ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
MUST WATCH: ಈಜಲು ಹೋಗಿ ಯುವಕ ಸಾ* ಮುಗಿಲು ಮುಟ್ಟಿದ ಪೋಷಕರ, ಗೆಳೆಯರ ಆಕ್ರಂದನ




