Tungabhadra ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ…

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದಲ್ಲಿ ದುಃಖದ ಘಟನೆ ನಡೆದಿದೆ. Tungabhadra ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ. ಮೃತರನ್ನು ಮನು (19) ಮತ್ತು ಪ್ರಜ್ವಲ್ (18) ಗುರುತಿಸಲಾಗಿದೆ..

ತಂದೆ ಮಂಜಪ್ಪ ಅವರ ಕಣ್ಣೆದುರೇ ಇಬ್ಬರು ಅಣ್ಣ-ತಮ್ಮ ಪ್ರಾಣ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಇಬ್ಬರ ಜೊತೆಗೆ ಕೊನೆಯ ಮಗ ಚಿರಂಜೀವಿ ನದಿಯಲ್ಲಿ ಸುರಕ್ಷಿತವಾಗಿ ಪಾರಾದರು. ಎರಡು ಜೀವಗಳ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..
MUST READ : Bengaluru-Mysuru ಹೆದ್ದಾರಿಯಲ್ಲಿ ಭೀಕರ ಅಪಘಾತ – ನಾಲ್ವರು ಸ್ಥಳದಲ್ಲೇ ಸಾವು..!!

ಘಟನೆ ಬಗ್ಗೆ ಸ್ಥಳೀಯ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಸಹೋದರರು ನೀರಿನ ಹರಿವನ್ನು ಅಂದಾಜಿಸದೆ ಈಜಲು ಹೋಗಿದ್ದರೂ, ತಕ್ಷಣವೇ ಸಹಾಯಕ್ಕೆ ಹೋಗಲಾದರೂ ತಡವಾಗಿದೆ.
MUST WATCH : ಕಾಡುಗೊಲ್ಲ ಯುವ ಸೇನೆಯಿಂದ ಸಮಾಜ ಸೇವೆ ಶ್ರೀರಾಮ ನವಮಿ ಪ್ರಯುಕ್ತ ಕಿಟ್ ವಿತರಣೆ




