Mann Ki Baat: Mann Ki Baat 128ರಲ್ಲಿ ಪ್ರಧಾನಿ ಮೋದಿ ನವೆಂಬರ್ ತಿಂಗಳ ಮಹತ್ವ, ಅಯೋಧ್ಯಾ ರಾಮ ಮಂದಿರ ಧ್ವಜಾರೋಹಣ, ಸಂವಿಧಾನ ದಿನ, 2030 ಕಾಮನ್ವೆಲ್ತ್ ಗೇಮ್ಸ್ ಹಾಗೂ ಕೃಷಿ ದಾಖಲೆಯ ಕುರಿತು ಮಾತನಾಡಿದರು.

Mann Ki Baat : ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 30 ರಂದು ಪ್ರಸಾರವಾದ ತಮ್ಮ ‘ಮನ್ ಕಿ ಬಾತ್’ 128ನೇ ಆವೃತ್ತಿಯ ಸಂದರ್ಭದಲ್ಲಿ ನವೆಂಬರ್ ತಿಂಗಳ ಮಹತ್ವವನ್ನು ವಿವರಿಸಿದರು.
ರಾಷ್ಟ್ರಭಕ್ತಿ, ಸಂವಿಧಾನ ದಿನ, ಕೃಷಿ ಕ್ಷೇತ್ರದ ಪ್ರಗತಿ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ರಾಮ ಮಂದಿರದ ಧ್ವಜಾರೋಹಣ ಕುರಿತು ಅವರು ವಿಶೇಷವಾಗಿ ಮಾತನಾಡಿದರು.
ವಂದೇ ಮಾತರಂ 150ನೇ ವಾರ್ಷಿಕೋತ್ಸವ
ಮೋದಿಯವರು ತಮ್ಮ ಭಾಷಣದಲ್ಲಿ ನವೆಂಬರ್ 7 ರಂದು ವಂದೇ ಮಾತರಂ ಗೀತೆಯ 150ನೇ ವರ್ಷದ ಆಚರಣೆ ರಾಷ್ಟ್ರದ ಹೆಮ್ಮೆಯ ಕ್ಷಣ ಎಂದು ಹೇಳಿದರು. “ವಂದೇ ಮಾತರಂ” ದೇಶದ ಸ್ವಾತಂತ್ರ್ಯ ಚಳವಳಿಯ spine ಎಂದು ಅವರು ನೆನಪಿಸಿದರು.
ಸಂವಿಧಾನ ದಿನದ ವಿಶೇಷ ಕಾರ್ಯಕ್ರಮ
ನವೆಂಬರ್ 26 – ಸಂವಿಧಾನ ದಿನದಂದು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದ ಬಗ್ಗೆ ಮೋದಿ ಹೇಳಿದರು.
ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಸಂವಿಧಾನದ ಪಾತ್ರವನ್ನು ಅವರು ಹಿರಿಮೆಯಿಂದ ಗಮನಿಸಿದರು.
ಅಯೋಧ್ಯಾ ರಾಮ ಮಂದಿರದಲ್ಲಿ ಧರ್ಮಧ್ವಜಾರೋಹಣ
ನವೆಂಬರ್ 25 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿದ ವಿಷಯವನ್ನು ಮೋದಿ ವಿವರಿಸಿದರು.
ಅದೇ ದಿನ, ಕುರುಕ್ಷೇತ್ರದ ಜ್ಯೋತಿಸರ್ನಲ್ಲಿ ಪಾಂಚಜನ್ಯ ಸ್ಮಾರಕ ಉದ್ಘಾಟನೆಯೂ ನಡೆದಿತ್ತು ಎಂದು ಅವರು ಹೇಳಿದರು.
2030ರ ಕಾಮನ್ವೆಲ್ತ್ ಕ್ರೀಡಾಕೂಟ – ಅಹಮದಾಬಾದ್ ಆತಿಥ್ಯ
ಮೋದಿಯವರು ಘೋಷಿಸಿದ ಪ್ರಮುಖ ಮಾಹಿತಿಗಳಲ್ಲಿ – 2030ರ ಕಾಮನ್ವೆಲ್ತ್ ಗೇಮ್ಸ್ಗೆ ಅಹಮದಾಬಾದ್ ಆತಿಥ್ಯ ನೀಡಿದ ನಿರ್ಧಾರ.
ಕ್ರೀಡಾ ಕ್ಷೇತ್ರದಲ್ಲಿ ಭಾರತ ಎರಡು ಹೆಜ್ಜೆ ಮುಂದೆ ನಡೆಯುತ್ತಿದೆ, ಎಂದು ಅವರು ಹೇಳಿದರು.
ಇದು ಭಾರತದ ಜಾಗತಿಕ ಕ್ರೀಡಾ ಪಯಣಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಪ್ರಧಾನಿಯವರು ಅಭಿಪ್ರಾಯಪಟ್ಟರು.
ಕೃಷಿ ವಲಯ: 357 ಮಿಲಿಯನ್ ಟನ್ ಐತಿಹಾಸಿಕ ದಾಖಲೆ
ಭಾರತದ ಕೃಷಿ ವಲಯದ ದಾಖಲೆಯ 357 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆಯ ಬಗ್ಗೆ ಮಾತನಾಡಿದ ಮೋದಿ,ಇದು ಕಳೆದ 10 ವರ್ಷಗಳಿಗಿಂತ 100 ಮಿಲಿಯನ್ ಟನ್ ಹೆಚ್ಚಳ ಎಂದು ಹೇಳಿದರು.
“ಭಾರತೀಯ ರೈತರು ದೇಶದ ಶಕ್ತಿ,” ಎಂದು ಅವರು ಶ್ಲಾಘಿಸಿದರು.
ಸಶಸ್ತ್ರ ಪಡೆಗಳಿಗೆ ಪ್ರಶಂಸೆ
ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ನಮ್ಮ ಸೈನ್ಯದ ಕಾರ್ಯಪಟುತೆಯನ್ನು ಮೋದಿ ಪ್ರಶಂಸಿಸಿದರು.
ನಕ್ಸಲ್ ವಿರುದ್ಧದ ಕಾರ್ಯಾಚರಣೆಗಳಲ್ಲಿ ಸಾಧನೆ ಗಳಿಸಿರುವುದನ್ನು ನೆನಪಿಸಿ —
“ಒಮ್ಮೆ ಮಾವೋವಾದಿ ಭೀತಿಯಿಂದ ಬಳಲುತ್ತಿದ್ದ ಪ್ರದೇಶಗಳಲ್ಲಿಯೂ ಇಂದು ಬೆಳಕು ಕಾಣುತ್ತಿದೆ” ಎಂದು ಹೇಳಿದರು.




