Brat OTT Release : ಈ ವರ್ಷ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿದ್ದು ಬಹಳಷ್ಟು ಸಿನಿಮಾಗಳು ಹಿಟ್ ಆಗಿವೆ.

ಈ ವರ್ಷ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿದ್ದು ಬಹಳಷ್ಟು ಸಿನಿಮಾಗಳು ಹಿಟ್ ಆಗಿವೆ.‘ಸು ಫ್ರಮ್ ಸೋ’ ಸಿನಿಮಾ ಸಣ್ಣ ಬಜೆಟ್ ಚಿತ್ರವಾದರೂ ನೂರು ಕೋಟಿ ರೂಪಾಯಿ ಕ್ಲಬ್ ಸೇರಿತು.
ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್
ಅದೇ ರೀತಿ ಕಳೆದ ಅಕ್ಟೋಬರ್ ಅಂತ್ಯಕ್ಕೆ ತೆರೆಗೆ ಬಂದ ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಈಗ ಒಟಿಟಿಗೆ ಕಾಲಿಟ್ಟಿದೆ. ಬ್ರ್ಯಾಟ್ ಸಿನಿಮಾ ಅಮೇಜಾನ್ ಪ್ರೈಮ್ ವೀಡಿಯೋ (Amazon Prime Video) ದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಶಶಾಂಕ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನು ಓದಿ : ಮಂತ್ರಾಲಯಕ್ಕೆ ಹೊರಟಿದ್ದ ವೇಳೆ ಭೀಕರ ಅಪಘಾತ – ಒಂದೇ ಕುಟುಂಬದ ಐವರು ಸಾವು

ಈ ಚಿತ್ರದಲ್ಲಿ ಡ್ರ್ಯಾಗನ್ ಮಂಜು ವಿಲನ್ ಪಾತ್ರ
ಕ್ರಿಸ್ಟಿ (ಕೃಷ್ಣ) ನಿಷ್ಠಾವಂತ ಪೊಲೀಸ್ ಕಾನ್ಸ್ಟೆಬಲ್ ಮಹದೇವಯ್ಯ (ಅಚ್ಯುತ್ ಕುಮಾರ್) ಮಗ. ಆದರೆ, ಈತನಿಗೆ ಒಳ್ಳೆಯ ರೀತಿಯಲ್ಲಿ ಹಣ ಮಾಡಿ ಅಭ್ಯಾಸವೇ ಇಲ್ಲ. ಅಡ್ಡ ದಾರಿ ಹಿಡಿಯುವ ಈತ ಸಾಕಷ್ಟು ಹಣ ಮಾಡುತ್ತಾನೆ. ನಂತರ ಹಣ ಆತನ ಕೈಯಲ್ಲಿ ಉಳಿಯುತ್ತಾ? ಕೊನೆಯಲ್ಲಿ ಏನಾಗುತ್ತದೆ ಎಂಬುದು ಸಿನಿಮಾದ ಕಥೆ. ಡ್ರ್ಯಾಗನ್ ಮಂಜು ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.
ಕ್ಲೈಮ್ಯಾಕ್ಸ್
‘ಬ್ರ್ಯಾಟ್’ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ಅದರಲ್ಲೂ ಕ್ಲೈಮ್ಯಾಕ್ಸ್ನಲ್ಲಿ ದೊಡ್ಡ ಟ್ವಿಸ್ಟ್ ಕೊಡಲಾಗುತ್ತದೆ. ಅಷ್ಟಕ್ಕೂ ಏನು ಆ ಟ್ವಿಸ್ಟ್? ಅದನ್ನು ಸಿನಿಮಾ ನೋಡಿಯೇ ಎಂಜಾಯ್ ಮಾಡಬೇಕು. ವೀಕೆಂಡ್ನಲ್ಲಿ ಕನ್ನಡದ್ದೇ ಒಂದು ಸಿನಿಮಾ ನೋಡಿ ಆನಂದಿಸಬೇಕು ಎಂದರೆ ‘ಬ್ರ್ಯಾಟ್’ ಉತ್ತಮ ಆಯ್ಕೆ.

ಇದನ್ನು ನೋಡಿ : ರಾತ್ರೋರಾತ್ರಿ ಫುಟ್ಪಾತ್ ತೆರವುಗೊಳಿಸಿದ ಪುರಸಭೆ – ಬೀದಿಗೆ ಬಿತ್ತು ವ್ಯಾಪಾರಿಗಳ ಬದುಕು..!




