Bigg Boss K S12 : Bigg Boss Kannada 12 ನಲ್ಲಿ ಉಗ್ರಂ ಮಂಜು ಗಿಲ್ಲಿಗೆ ಬೇಕಾಬಿಟ್ಟಿ ಕೆಲಸ ಕೊಟ್ಟ ಪ್ರೋಮೋ ವೈರಲ್. ಗಿಲ್ಲಿಯನ್ನು ಕ್ಲಿನರ್ ಮಾಡಿಸಿದ ವರ್ತನೆಗೆ ಫ್ಯಾನ್ಸ್ ಕೆಂಡ.

Bigg Boss K S12 : ಉಗ್ರಂ ಮಂಜುವಿನ ಅತಿಯಾಗಿ ರಿಯಾಕ್ಷನ್ – ಗಿಲ್ಲಿಗೆ ‘ಕ್ಲಿನರ್’ ರೋಲ್
Gilli Nata ಮೇಲೆ ಉಗ್ರಂ ಮಂಜು ದಿನವಿಡೀ ಪ್ರತಿಯೊಂದು ಮಾತಿಗೂ ಪ್ರತಿಕ್ರಿಯಿಸುತ್ತಾ ಇದ್ದರು.ಪ್ರೋಮೋದಲ್ಲಿ ಕಂಡುದೇನೆಂದರೆ ಟೇಬಲ್ ಮೇಲ intentionally ನೀರು ಚೆಲ್ಲೋದು , ಕಾಫಿ ಚೆಲ್ಲೋದು , ಕಸ ಮಾಡೋದು , ಮತ್ತು ಅದನ್ನೆಲ್ಲ ಗಿಲ್ಲಿಯಿಂದಲೇ ಕ್ಲೀನ್ ಮಾಡಿಸುವುದು
ಗಿಲ್ಲಿಗೆ ವೈಟರ್ ಪಾತ್ರ ನೀಡಲಾಗಿದ್ದರೂ,ಉಗ್ರಂ ಮಂಜು ಅವರನ್ನು “ಕ್ಲಿನರ್” ಆಗಿ ಬಳಸುತ್ತಿದ್ದಂತೆ ಗೋಚರಿಸಿದೆ.
ಚೇರ್ ಎತ್ತಿ ಬಿಸಾಡಿದ ಉಗ್ರಂ ಮಂಜು – ಅತಿಯಾಗಿ ರಿಯಾಕ್ಟ್?
ಸನ್ನಿವೇಶ ಮತ್ತಷ್ಟು ತೀವ್ರವಾಗಿದ್ದು,ಉಗ್ರಂ ಮಂಜು ಗಿಲ್ಲಿ ವಿಷಯಕ್ಕೆ:
- ಚೇರ್ ಎತ್ತಿ ಬಿಸಾಡಿದ್ದಾರೆ
- ಅಭಿಯ ಮೇಲೂ ಕೂಗಿ ತರಾಟೆ ತೆಗೆದುಕೊಂಡಿದ್ದಾರೆ
- “ಮ್ಯಾನೇಜರ್ ಅಂತ ಪ್ರೀತಿ, ವಿಶ್ವಾಸ ಇದೆ. ನೀರು ಕೊಡ್ರಿ ಅಂದ್ರೆ ಕುಡಿದು ಕೊಡ್ತಾರೆ” ಎಂದು ಅಬ್ಬರಿಸಿದ್ದಾರೆ
ಈ ವರ್ತನೆಯಿಂದ ಮನೆಯೊಳಗಿನ ವಾತಾವರಣ ತೀವ್ರ ಉದ್ವಿಗ್ನವಾಗಿದೆ.
ಬಿಗ್ ಬಾಸ್ ಟಾಸ್ಕ್ ಗಿಲ್ಲಿಗೆ
ಈ ವಾರ Bigg Boss Kannada 12 ಮನೆಗೆ ಹಳೆಯ ಸೀಸನ್ ಸ್ಪರ್ಧಿಗಳು –
Ugram Manju, Mokshitha Pai, Rajath, Chaitra Kundapura, Trivikrama – ಅತಿಥಿಗಳಾಗಿ ಬಂದಿದ್ದಾರೆ.
ಬಿಗ್ ಬಾಸ್ ಗಿಲ್ಲಿಗೆ ಅತಿಥಿಗಳನ್ನು ರೋಸ್ಟ್ ಮಾಡುವ ಅವಕಾಶ ಕೊಟ್ಟಿದ್ದರು.ಆದರೆ ಅತಿಥಿಗಳ ಆಗಮನದಿಂದಲೇ ಮಂಜು ಮತ್ತು ಗಿಲ್ಲಿ ನಡುವೆ ಜಗಳಗಳು ಹೆಚ್ಚಾಗುತ್ತಿದ್ದರೂ,ನಿನ್ನೆ ನಡೆದ ಕೆಲಸ ಹಂಚಿಕೆ ವೇಳೆ ಮಂಜು ಗಿಲ್ಲಿ ಮೇಲೆ ತಮ್ಮ ಸಿಟ್ಟನ್ನು ಹೊರಹಾಕಿದಂತಿದೆ.
ಫ್ಯಾನ್ಸ್ ಕೆಂಡ – “ಗಿಲ್ಲಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ!”
ಸೋಶಿಯಲ್ ಮೀಡಿಯಾದಲ್ಲಿ ಉಗ್ರಂ ಮಂಜುವಿನ ನಡೆಗೆ ಫ್ಯಾನ್ಸ್ ಕಿರಿಕ್ ಆಗಿದ್ದಾರೆ.
ಅವರ ಪ್ರತಿಕ್ರಿಯೆ:
- “ಅತಿಥಿ ಮನೆಗೆ ಬಂದು ಈ ರೀತಿ ವರ್ತನೆ ಮಾಡ್ತಾನಾ?”
- “ಎಲ್ಲರೂ ಸೇರಿ ಗಿಲ್ಲಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ”
- “ಕೆಲಸ ಕೊಡೋಕೆ ಓಕೆ, ಆದರೆ ಇದರಲ್ಲಿ ಇಷ್ಟು ಕೆಟ್ಟ ವರ್ತನೆ ಕೊಡೋದು ಸರಿಯಾ?”
ಫ್ಯಾನ್ಸ್ ಅಭಿಪ್ರಾಯ, ಮಂಜುವಿನ ವರ್ತನೆ ಅತಿಯಾಗಿ ಆಕ್ರಮಣಕಾರಿ ಎಂದು.




