Hassan News : ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದಂಪತಿ ನೀರುಪಾಲಾದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದಂಪತಿ ನೀರುಪಾಲಾದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದಂಪತಿಗಳನ್ನು ಗೋಪಾಲ್ (27) ಮತ್ತು ದೀಪು (24) ಎಂದು ಗುರುತಿಸಲಾಗಿದೆ.
ನೀರಿನಲ್ಲಿ ಮುಳುಗಿ ದಂಪತಿ ಸಾವು
ಭಾನುವಾರ ದಂಪತಿ ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದರು. ದೀಪು ಕಾಲು ಜಾರಿ ನಾಲೆಗೆ ಬಿದ್ದಿದ್ದಾಳೆ. ಪತ್ನಿಯನ್ನು ರಕ್ಷಿಸಲು ಪತಿ ಗೋಪಾಲ್ ನಾಲೆಗೆ ಇಳಿದಿದ್ದಾರೆ. ಆದರೆ ನಾಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ದಂಪತಿ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : Actor Ambareesh|ರೆಬೆಲ್ ಸ್ಟಾರ್ ಅಂಬರೀಶ್ ಪುಣ್ಯಸ್ಮರಣೆ
ಅಗ್ನಿಶಾಮಕದಳದ ಸಿಬ್ಬಂದಿಯಿಂದ ಶೋಧಕಾರ್ಯ
ದಂಪತಿ ಮನೆಗೆ ಮರಳದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದರು. ನಂತರ ನಾಲೆ ಬಳಿಯಲ್ಲಿದ್ದ ಬಟ್ಟೆಗಳನ್ನು ಕಂಡು, ಪ್ರಕರಣದ ಮಾಹಿತಿಯನ್ನು ಪೋಲಿಸರಿಗೆ ನೀಡಿದ್ದಾರೆ. ಇಂದು ಅಗ್ನಿಶಾಮಕದಳ ಸಿಬ್ಬಂದಿ ಶೋಧಕಾರ್ಯ ನಡೆಸಿದ ವೇಳೆ ಗೋಪಾಲ್ ಮೃತದೇಹವನ್ನು ನಾಲೆಯಲ್ಲಿ ಪತ್ತೆಹಚ್ಚಲಾಗಿದೆ. ದೀಪು ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಯುತ್ತಿದೆ.
ಪೋಲೀಸರಿಂದ ಪರಿಶೀಲನೆ
ಇನ್ನು ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ನೋಡಿ : ಶೇಖ್ ಹಸೀನಾಗೆ ಗಲ್ಲು – ಹಸೀನಾರನ್ನ ಹಸ್ತಾಂತರಿಸುವಂತೆ ಭಾರತಕ್ಕೆ ಬಾಂಗ್ಲಾ ಸರ್ಕಾರ ಪತ್ರ ಬರೆದು ಮನವಿ




