Smriti Mandhana wedding : 6 ವರ್ಷಗಳ ಪ್ರೇಮಕಥೆಗೆ ಇಂದು ಮದುವೆ ಮುದ್ರೆ. ಸ್ಮೃತಿ–ಪಲಾಶ್ ಸಂಗೀತ ಸಂಭ್ರಮ, ಹಳದಿ, ಮದುವೆ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಇಲ್ಲಿ ಓದಿ.

Smriti Mandhana wedding : ಟೀಮ್ ಇಂಡಿಯಾ ತಾರೆಯಾದ ಸ್ಮೃತಿ ಮಂದಾನ, ಆರ್ಸಿಬಿ ವುಮೆನ್ಸ್ ತಂಡದ ನಾಯಕಿ ಹಾಗೂ ಕೋಟ್ಯಂತರ ಅಭಿಮಾನಿಗಳ ಹೃದಯದ ರಾಣಿ, ಇಂದು ಜೀವನದ ಹೊಸ ಇನ್ನಿಂಗ್ಸ್ಗೆ ಕಾಲಿಡುತ್ತಿದ್ದಾರೆ. 6 ವರ್ಷಗಳ ಪ್ರೀತಿ ಇಂದು ಮದುವೆ ಎಂಬ ಸಿಹಿ ಮುದ್ರೆಯಾಗಿ ಮಾರ್ಪಡುತ್ತಿದೆ.
6 ವರ್ಷಗಳ ಪ್ರೇಮಕಥೆ – ಈಗ ಮದುವೆಯ ಮಂಗಳಧ್ವನಿ
ಸ್ಮೃತಿ ಮಂದಾನ ಮತ್ತು ಸಂಗೀತ ಸಂಯೋಜಕ, ಗಾಯಕ ಪಲಾಶ್ ಮುಚ್ಚಲ್ ಅವರ ಪ್ರೇಮಕಥೆ 2019ರಲ್ಲಿ ಆರಂಭವಾದರೂ, ಇಬ್ಬರೂ ಇದನ್ನು ಹಲವು ವರ್ಷಗಳ ಕಾಲ ಖಾಸಗಿ ಮಾಡಿಕೊಂಡಿದ್ದರು.
ಆದರೆ 2024ರಲ್ಲಿ ಈ ಸಂಬಂಧ ಅಧಿಕೃತವಾಗಿ ಬಹಿರಂಗವಾಯಿತು.

ಸಂಗೀತ ಸಂಭ್ರಮ
ಮದುವೆ ಕಾರ್ಯಕ್ರಮಗಳ ಅಂಗವಾಗಿ ನಡೆದ ಸಂಗೀತಾ ನೈಟ್ ಬಣ್ಣ-ಬಣ್ಣದ ಸಂಭ್ರಮದಿಂದ ಕಂಗೊಳಿಸಿತು.ಸ್ಮೃತಿ ಮತ್ತು ಪಲಾಶ್ ಜೋಡಿಯ ರೊಮ್ಯಾಂಟಿಕ್ ಡ್ಯಾನ್ಸ್ ಎಲ್ಲರ ಮನಸೆಳೆಯಿತು.
ಕನ್ನಡತಿ ಶ್ರೇಯಾಂಕಾ ಪಾಟೀಲ್, ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಸೇರಿದಂತೆ ಹಲವಾರು ಕ್ರಿಕೆಟಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಸ್ತ್ ಆಗಿ ಹೆಜ್ಜೆ ಹಾಕಿದರು.
ಇದನ್ನೂ ಓದಿ :ಕುರ್ಚಿ ಕದನ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್
ಹಳದಿ ಸಂಭ್ರಮದಲ್ಲಿ ಮಿಂದಿದ ಸ್ಮೃತಿ
ಮದುವೆಗೆ ಮುನ್ನ ನಡೆದ ಹಳದಿ ಕಾರ್ಯಕ್ರಮ (Haldi Ceremony) ನಲ್ಲಿ ಸ್ಮೃತಿ ಮಂದಾನ ಮಿಂಚಿದ್ದು, ಕಾರ್ಯಕ್ರಮದಲ್ಲಿ ಕುಟುಂಬದವರು, cricket fraternity ಮತ್ತು najdeekದ ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು.

ಇಂದು ಸಾಂಗ್ಲಿಯಲ್ಲಿ ಅದ್ಧೂರಿ ಮದುವೆ
ಸ್ಮೃತಿ ಮಂದಾನ–ಪಲಾಶ್ ಮುಚ್ಚಲ್ ಮದುವೆ ಸಾಂಗ್ಲಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸ್ಮೃತಿ — ಕ್ರಿಕೆಟ್ ಲೋಕದ ಕ್ವೀನ್ , ಪಲಾಶ್ — ಬಾಲಿವುಡ್ ಸಂಗೀತ ಲೋಕದ rising composer , ಇಬ್ಬರ ಮಿಲನ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿದೆ.
ಆರ್ಸಿಬಿ ಫ್ಯಾನ್ಸ್ ಹರ್ಷೋತ್ಸಾಹ
ಆರ್ಸಿಬಿ ವುಮೆನ್ಸ್ ತಂಡಕ್ಕೆ ಮೊದಲ ಟ್ರೋಫಿ ತಂದುಕೊಟ್ಟ ನಾಯಕಿ ಸ್ಮೃತಿ, ಈಗ ಜೀವನದ ನಿಜವಾದ ಕಪ್ ಗೆಲ್ಲುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
MUST WATCH : TB JAYACHANDRA ಸಿಎಂ ಬದಲಾವಣೆ ವಿಚಾರ -ಶಾಕಿಂಗ್ ಹೇಳಿಕೆ ಕೊಟ್ಟ ಟಿ.ಬಿ.ಜಯಚಂದ್ರ




