Bike Accident : ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಐದು ವರ್ಷದ ಮಗು ಸೇರಿದಂತೆ ಮೂವರು ಮೃತಪಟ್ಟ ಘಟನೆ ಬೀದರ್ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಚಾಂಬೋಳ್–ಬೆನಕನಹಳ್ಳಿ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ವರ್ಷದ ಬಾಲಕಿ ಸೇರಿದಂತೆ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
5 ವರ್ಷದ ಬಾಲಕಿ ಸೇರಿದಂತೆ ಮೂವರು ಮೃತ್ಯು
ಇನ್ನು ಬೀದರ್ನ ಭಾಲ್ಕಿ ತಾಲೂಕಿನ ಜೋಳದಾಪಕಾ ಗ್ರಾಮದ ಮಲ್ಲಿಕಾರ್ಜುನ (35), ಅವರ ಪುತ್ರಿ ಮಹಾಲಕ್ಷ್ಮಿ (5) ಹಾಗೂ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಪವನ್ (28) ಮೃತ ದುರ್ದೈವಿಗಳಾಗಿದ್ದಾರೆ.
ಇದನ್ನು ಓದಿ : Dina Bhavishya : ದಿನ ಭವಿಷ್ಯ 23 ನವೆಂಬರ್ 2025

ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತ
ಮಲ್ಲಿಕಾರ್ಜುನ ಅವರು ತನ್ನ ಪತ್ನಿ, ಅತ್ತೆ ಮತ್ತು ಮಕ್ಕಳೊಂದಿಗೆ ಬೀದರಿನಿಂದ ಔರಾದ್ ತಾಲೂಕಿನ ಖಾನಾಪುರ ಗ್ರಾಮದ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪವನ್ ಅವರು ಔರಾದ್ ಕಡೆಯಿಂದ ಬೀದರ್ ಕಡೆ ಬರುತ್ತಿದ್ದಾಗ ಎರಡು ಬೈಕ್ಗಳು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಪವನ್ ಸ್ಥಳದಲ್ಲೇ ಸಾವು
ಅಪಘಾತದ ತೀವ್ರತೆಗೆ ಮಲ್ಲಿಕಾರ್ಜುನ ಹಾಗೂ ಪವನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮಹಾಲಕ್ಷ್ಮಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇನ್ನು ಮಲ್ಲಿಕಾರ್ಜುನ ಅವರ ಪತ್ನಿ ಮತ್ತು ಅತ್ತೆಗೆ ಗಾಯಗಳಾಗಿದ್ದು, ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಸಂಬಂಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನು ನೋಡಿ : ಅಶ್ವಿನಿ ಗೌಡ ಎದುರಲ್ಲೇ ಕಿಚ್ಚನ ಚಪ್ಪಾಳೆ ಪಡೆದ ರಕ್ಷಿತಾ ಶೆಟ್ಟಿ: ಸುದೀಪ್ ಮೆಚ್ಚಿದ್ದು ಏನು?




