BBK : ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ ಹತ್ತು ಹಲವು ಡ್ರಾಮಾಗಳು ನಡೆಯುತ್ತವೆ.

BBK : ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಪ್ರಸಾರವಾಗುತ್ತಿದ್ದಂತೆಯೇ, ಮನೆಯೊಳಗಿನ ಡ್ರಾಮಾ ಹೊರಗೂ ಸಾಕಷ್ಟು ವಿವಾದಗಳು ಕಾಣಿಸಿಕೊಂಡಿವೆ. ಸ್ಪರ್ಧಿಗಳ ನಡೆ-ನುಡಿಗೆ ಟೀಕೆ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು, ಈಗ ಪೊಲೀಸ್ ಠಾಣೆಗೂ ದೂರುಗಳು ದಾಖಲಾಗುತ್ತಿರುವ ಸ್ಥಿತಿ ಉಂಟಾಗಿದೆ.
ಸುದೀಪ್ ವಿರುದ್ಧ ಎಸ್.ಪಿ ಕಚೇರಿಯಲ್ಲಿ ದೂರು
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಗೆ ತರಾಟೆ ತೆಗೆದುಕೊಳ್ಳುವ ವೇಳೆ ನಿರೂಪಕ ಕಿಚ್ಚ ಸುದೀಪ್ “ಪಿತ್ತ ನೆತ್ತಿಗೆ ಏರುತ್ತದೆ” ಎಂಬ ಪದಗಳನ್ನು ಬಳಸಿದ್ದರು. ಈ ಹೇಳಿಕೆಯನ್ನು ಆಕ್ಷೇಪಿಸಿರುವ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಅವರು ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ ಕಚೇರಿಗೆ ಸುದೀಪ್ ವಿರುದ್ಧ ದೂರು ಸಲ್ಲಿಸಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಅವರು ದೂರು ನೀಡಿದ್ದಾರೆ. ಡಿವೈಎಸ್ಪಿಗೆ ದೂರು ಸಲ್ಲಿಕೆ ಮಾಡಲಾಗಿದೆ. ‘ಸ್ಪರ್ಧಿ ರಕ್ಷಿತಾಗೆ ಸುದೀಪ್ ನಿಂದಿಸಿದ್ದಾರೆ. ಸುದೀಪ್ ಜೊತೆಗೆ ಅಶ್ವಿನಿ ಗೌಡ ವಿರುದ್ಧವೂ ದೂರು ನೀಡಿದ್ದೇನೆ. ಸುದೀಪ್ ಅವರು ಪಿತ್ತ ನೆತ್ತಿಗೇರಲಿದೆ ಎಂಬ ಪದ ಬಳಕೆ ಮಾಡಿದ್ದು ಎಷ್ಟು ಸರಿ? ಇಂತಹ ಪದವನ್ನು ಬಳಕೆ ಮಾಡಿದ್ದು ಸರಿನಾ? ಜೊತೆಗೆ ಅಶ್ವಿನಿ ಗೌಡ ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ. ಹಾಗಾಗಿ ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ’ ಎಂದು ಸಂಧ್ಯಾ ಹೇಳಿದ್ದಾರೆ. ರಿಷಾ ವಿರುದ್ಧವೂ ದೂರು ನೀಡಲಾಗಿದೆ.
ಇದನ್ನು ಓದಿ : Madhugiri : ವ್ಯಕ್ತಿಯೋರ್ವನ ಮೇಲೆ ಚಾಕು ಇರಿದು ಕೊಲೆಗೆ ಯತ್ನ

ಗಿಲ್ಲಿ ನಟನ ಮೇಲೂ ಮಹಿಳಾ ಆಯೋಗಕ್ಕೆ ದೂರು
ಇತ್ತೀಚೆಗೆ ಬಿಗ್ ಬಾಸ್ನ ಮತ್ತೊಬ್ಬ ಸ್ಪರ್ಧಿ ಗಿಲ್ಲಿ ವಿರುದ್ಧವೂ ದೂರು ದಾಖಲಾಗಿದೆ. ಹೆಣ್ಮಕ್ಕಳಿಗೆ ಮನೆಯಲ್ಲಿ ಗಿಲ್ಲಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಕುಶಲಾ ಎಂಬುವವರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇನ್ನು ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮಹಿಳಾ ಆಯೋಗವು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.
ಶೋ 50 ದಿನ ಪೂರೈಸಿದರೂ ವಿವಾದ ಮುಂದುವರಿಕೆ
ಈ ನಡುವೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗಾಗಲೇ 50 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಮಲ್ಲಮ್ಮ, ಚಂದ್ರಪ್ರಭ, ಸತೀಶ್, ಮಂಜು ಭಾಷಿಣಿ, ಅಮಿತ್, ಕರಿಬಸಪ್ಪ, ಅಶ್ವಿನಿ ಎಸ್ ಮತ್ತು ಕಾಕ್ರೋಚ್ ಸುಧಿ ಈಗಾಗಲೇ ಎಲಿಮಿನೇಟ್ ಆಗಿದ್ದಾರೆ.
ಶೋ ಕುರಿತು ಹೊರಗಡೆಯ ವಿವಾದಗಳು ಹೆಚ್ಚಾಗುತ್ತಿರುವ ಕಾರಣ, ಈ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಈ ಕುರಿತು ಏನು ವಿವರಿಸುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

ಇದನ್ನು ನೋಡಿ : SBI ಬ್ಯಾಂಕ್ ಮ್ಯಾನೇಜರ್ ದರ್ಪ ಆರೋಪ – ಬ್ಯಾಂಕ್ ಮುಂದೆ ರೈತರು, ಜನರ ಆಕ್ರೋಶ




