
VIJAYAPURA NEWS : ಮಾಜಿ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯತ್ನಾಳ್, “ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾ ಯತ, ಕ್ರಿಶ್ಚಿಯನ್ ಒಕ್ಕಲಿಗ ಎಂದು ಮಾಡಿರುವ ವರ್ಗಗಳನ್ನು ಈ ಮೊದಲು ಸೋನಿಯಾ ಗಾಂಧಿ ವ್ಯವಸ್ಥಿತವಾಗಿ ಹೊಸ ಹೊಸ ನಾಮಗಳನ್ನು ಕೊಟಿದ್ದರು.
ಅವರು ಮುಂದಾಗಿ, “ಈ ಮೊದಲು ಸೋನಿಯಾ ಗಾಂಧಿಯವರು ಭಾರತದಲ್ಲಿ ಕ್ರಿಶ್ಚಿಯನ್ ಅಥವಾ ಮುಸ್ಲಿಂ ರಾಷ್ಟ್ರ ರೂಪಿಸುವ ಗುರಿಯೊಂದಿಗೆ ವಿವಿಧ ಜಾತಿಗಳ ಹೆಸರಿನಲ್ಲಿ ಹೊಸ ವಿಭಾಗಗಳನ್ನು ಸೃಷ್ಟಿಸುವ ಸಂಚು ನಡೆಸಿದ್ದರು. ಈಗ ಅದನ್ನೇ ಕರ್ನಾಟಕದಲ್ಲಿ ಪುನರಾವೃತ್ತಿ ಮಾಡಲಾಗುತ್ತಿದೆ. ಇಂಥ ಯಾವ ಜಾತಿಗಳು ನಿಜವಾಗಿ ಭಾರತದಲ್ಲೇ ಇಲ್ಲ. ಕೇವಲ ಸೋನಿಯಾ ಗಾಂಧಿಯ ನಿರ್ದೇಶನದಂತೆ ಸಿದ್ದ ರಾಮಯ್ಯನವರು ಇಂತಹ ಅತ್ಯಂತ ಕೀಳು ಮಟ್ಟದ ವ್ಯವಸ್ಥೆಯನ್ನು ರಾಜ್ಯದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು.




