Vijayapura ಜಿಲ್ಲೆಯ ಸಿಂದಗಿಯಲ್ಲಿ ಬಸ್ಗೆ ಬೈಕ್ ಡಿಕ್ಕಿಯಾಗಿ 25 ವರ್ಷದ ಯುವಕ ಸಜೀವ ದಹನವಾಗಿದ್ದಾನೆ.

Vijayapura ಪ್ರಕರಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್ಗೇಟ್ ಬಳಿ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 25 ವರ್ಷದ ಯುವಕ ಸಜೀವ ದಹನವಾಗಿದ್ದಾನೆ.
ಮೃತ ಯುವಕನನ್ನು ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ ನಾಗರಾಳ (25) ಎಂದು ಗುರುತಿಸಲಾಗಿದೆ.
ಡಿಕ್ಕಿ ಸಂಭವಿಸಿದ ತಕ್ಷಣ ಬೈಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
MUST READ : ತೀವ್ರ ಗತಿಯಲ್ಲಿ ಕುಸಿದ ‘ Dhurandhar 2 ’ ಗಳಿಕೆ ..!!

ಈ ದುರ್ಘಟನೆಯ ವೇಳೆ ಬಸ್ನ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬಸ್ನಿಂದ ಕೆಳಗೆ ಇಳಿದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಆದರೆ, ಬೆಂಕಿಯ ತೀವ್ರತೆಯಿಂದ ಬಸ್ ಕೂಡ ಭಾಗಶಃ ಸುಟ್ಟುಹೋಗಿದೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಇದರಿಂದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲು ಗುರುತು ಪತ್ತೆಯಾಗದೆ ಗೊಂದಲ
ಅಪಘಾತದ ತೀವ್ರತೆಯಿಂದ ಆರಂಭದಲ್ಲಿ ಬೈಕ್ ಸವಾರನ ಗುರುತು ಪತ್ತೆಯಾಗಿರಲಿಲ್ಲ. ಆದರೆ, ನಂತರ ತನಿಖೆ ನಡೆಸಿದ ಪೊಲೀಸರು ಮೃತನನ್ನು ಅಭಿಷೇಕ ನಾಗರಾಳ ಎಂದು ಖಚಿತಪಡಿಸಿದ್ದಾರೆ.
ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಶಂಕೆಗೆ ಕಾರಣವಾದ ಇನ್ಸ್ಟಾಗ್ರಾಮ್ ವಿಡಿಯೋ
ಇನ್ನು ಮೇಲ್ನೋಟಕ್ಕೆ ಇದು ಸಾಮಾನ್ಯ ಅಪಘಾತದಂತೆ ಕಂಡುಬಂದರೂ, ಇದೀಗ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಮೃತ ಯುವಕ ಅಭಿಷೇಕ್ ಪ್ರೇಮ ವೈಫಲ್ಯದಿಂದ ಬೇಸರಗೊಂಡಿದ್ದನು ಎನ್ನಲಾಗಿದೆ. ಅವನು ತನ್ನ ಸಾವಿಗೆ ಕೆಲವರನ್ನು ಹೊಣೆಮಾಡಿ,
“ನನ್ನನ್ನು ಪ್ರೀತಿಸಿದ ಯುವತಿಯನ್ನು ನನ್ನಿಂದ ದೂರ ಮಾಡಿದ್ದಾರೆ, ಹೀಗಾಗಿ ನಾನು ಬದುಕಲ್ಲ”
ಎಂದು ಹೇಳಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆ, ಯುವಕ ಬೇಕಂತಲೇ ಬಸ್ಗೆ ಬೈಕ್ ಡಿಕ್ಕಿ ಹೊಡೆದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
MUST WATCH : ವೀರಭದ್ರಸ್ವಾಮಿ ಜಾತ್ರೆಗೆ ಕೌಂಟ್ಡೌನ್ – ಜಾತ್ರೆಗೆ BIG BOSS ಖ್ಯಾತಿ GILLI ಬರ್ತಾರೆ..! | GUBBI NEWS |




