
BIDAR : ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಾತು ಬಾರದ ಮಹಿಳೆಯೊಬ್ಬಳ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದೆ. ಆರೋಪಿಯನ್ನು ಅಬು ಪಾಷಾ ಎಂದು ಗುರುತಿಸಲಾಗಿದೆ.
ಹೌದು.. ಮಹಿಳೆಯ ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದಾಗ, ಈ ಘಟನೆ ಸಂಭವಿಸಿದೆ. ಆರೋಪಿಯು ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ, ಆಕೆಯ ಬಟ್ಟೆ ಹರಿದು ಮಾನಭಂಗ ಮಾಡಲು ಯತ್ನಿಸಿದಾನೆ ಎನ್ನಲಾಗಿದೆ. ಇನ್ನು ಸಂತ್ರಸ್ತೆಯ ತಾಯಿ ಮನೆಗೆ ವಾಪಸ್ಸು ಬಂದಾಗ, ಆಕೆಯನ್ನ ತಳ್ಳಿ ಆರೋಪಿ ಓಡಿಹೋಗಿದ್ದಾನೆ. ಬಳಿಕ ಸಂತ್ರಸ್ತೆ ನಡೆದ ವಿಷಯವನ್ನ ಸನ್ನೆ ಮಾಡಿ ತಿಳಿಸಿದ್ದಾಳೆ.
ಇನ್ನು ಕುರಿತು ಸಂತ್ರಸ್ತೆಯ ತಾಯ್ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು (BNS) ಸೆಕ್ಷನ್ 329(4), 79 ಮತ್ತು ಸೆಕ್ಷನ್ 3(1)(w), 3(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.




