BBK : ಬಿಗ್ಬಾಸ್ (Bigg Boss Season 12) ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಮತ್ತೊಮ್ಮೆ ಜಗಳವಾಗಿದೆ.

BBK : ಬಿಗ್ಬಾಸ್ (Bigg Boss Season 12) ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಮತ್ತೊಮ್ಮೆ ಜಗಳವಾಗಿದೆ. ಬಿಗ್ ಬಾಸ್ ನೀಡಿದ ಶಿಕ್ಷೆಯನ್ನು ಗಿಲ್ಲಿ ಬಳಸಿಕೊಂಡು ಅಶ್ವಿನಿ ಗೌಡ ಅವರನ್ನು ಮತ್ತಷ್ಟು ಉರಿಸಿದ್ದಾರೆ.
ನಿಯಮ ಉಲ್ಲಂಘನೆ ಪ್ರಶ್ನಿಸಿದ ಬಿಗ್ಬಾಸ್
ಲೀವಿಂಗ್ ಏರಿಯಾದಲ್ಲಿ ಎಲ್ಲರನ್ನು ಸೇರಿಸಿಕೊಂಡ ಪದೇ ಪದೇ ಮೂಲ ನಿಯಮಗಳನ್ನು ಉಲ್ಲಂಘಿಸುತ್ತಿರುವವರು ಯಾರು ಎಂದು ಬಿಗ್ ಬಾಸ್ ಪ್ರಶ್ನಿಸಿದರು. ಹೆಚ್ಚಿನ ಸ್ಪರ್ಧಿಗಳಂತೆ ಗಿಲ್ಲಿಯೂ ಅಶ್ವಿನಿ ಗೌಡರ ಹೆಸರನ್ನೇ ಹೇಳಿದರು.
ಅದಕ್ಕೆ ಕಾರಣ ನೀಡಿರುವ ಗಿಲ್ಲಿ, ಬಿಗ್ಬಾಸ್ ನನ್ನ ಆಯ್ಕೆ ಕೂಡ ಅಶ್ವಿನಿ ಅವರು. ಅವರಿಗೆ ನಾಮಿನೇಷನ್ ಮೇಲೂ ಸಿರೀಯಸ್ನೆಸ್ ಇಲ್ಲ. ರೂಲ್ಸ್ ಮೇಲೂ ಸಿರೀಯಸ್ನೆಸ್ ಇಲ್ಲ. ಬಿಗ್ಬಾಸ್ ಅವರಿಗೆ ಕಠಿಣವಾದ ಶಿಕ್ಷೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಇದನ್ನು ಓದಿ : Sabarimala : ಶಬರಿಮಲೆಯ ಯಾತ್ರೆ ಶುರು – ಹರಿದುಬಂದ ಭಕ್ತ ಸಾಗರ
ಗಿಲ್ಲಿಯ ಪೋಸ್ಗೆ ಅಶ್ವಿನಿಯ ಆಕ್ರೋಶ
ಗಾರ್ಡನ್ ಏರಿಯಾದಲ್ಲಿ ಚೇರ್ ಮೇಲೆ ಕುಳಿತಿದ್ದ ಗಿಲ್ಲಿಯ ಕಡೆ ಅಶ್ವಿನಿ ಬಸ್ಕಿ ಹೊಡೆಯಲು ಬಂದಾಗ, ಗಿಲ್ಲಿ ಕಾಲ್ಮೇಲೆ ಕಾಲು ಹಾಕಿಕೊಂಡು ಪೋಸ್ ಕೊಡುವ ಮೂಲಕ ಅಶ್ವಿನಿಯನ್ನು ಉರಿಸಿದರು.
ಕೋಪಗೊಂಡ ಅಶ್ವಿನಿ “ಕಾಲು ಇಳ್ಸು! ನೀನು ಓವರ್ ಆಗಿ ಆಡಬೇಡ” ಎಂದು ಗಿಲ್ಲಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಗಿಲ್ಲಿ “ನಾನು ಹೆಂಗಾದರೂ ಕುಳಿತುಕೊಳ್ಳಬಹುದು” ಎಂದು ಪ್ರತಿಕ್ರಿಯಿಸಿದರೆ, ಮತ್ತಷ್ಟು ಸಿಡಿದ ಅಶ್ವಿನಿ “ನಿನ್ನ ದೌಲು, ಧಿಮಿಕಾ ನಿನ್ನ ಹತ್ತಿರವೇ ಇಟ್ಟುಕೋ, ನನ್ನ ಬಳಿ ಬೇಡ” ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಇಬ್ಬರ ನಡುವಿನ ಸಂಭಾಷಣೆ ಇಂದು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಇದನ್ನು ನೋಡಿ : ಸರ್ಕಾರಿ ಶಾಲೆಯಲ್ಲಿ ಇದೆಂಥಾ ಅವ್ಯವಸ್ಥೆ.! – ಅನೈತಿಕ ಚಟುವಟಿಕೆಗಳ ತಾಣವಾಗ್ತಿದೆ




