Chikkamagaluru : ಚಿಕ್ಕಮಗಳೂರು ನಗರದ ಪಿಯುಸಿ ಕಾಲೇಜೊಂದರ 25 ವಿದ್ಯಾರ್ಥಿಗಳ (Students) ಮೇಲೆ ಹೆಜ್ಜೇನು (Honey Bee Attack) ದಾಳಿ ನಡೆಸಿದೆ. ಅದರಲ್ಲಿ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Chikkamagaluru : ಚಿಕ್ಕಮಗಳೂರು ನಗರದ ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜೊಂದರಲ್ಲಿ ಇಂದು ಮಧ್ಯಾಹ್ನ ಜೇನುನೊಣಗಳ ದಾಳಿಯಿಂದ 25 ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ.
ಪಿಯುಸಿ ಕಾಲೇಜಿನಲ್ಲಿ ಜೇನುನೊಣ ಹಾವಳಿ – ಮಧ್ಯಾಹ್ನ ಊಟ ಸಮಯದಲ್ಲಿ ಅನಾಹುತ
ಮಧ್ಯಾಹ್ನ ಊಟಕ್ಕೆ ಬಿಡುವು ನೀಡಿದ ವೇಳೆ, ವಿದ್ಯಾರ್ಥಿಯೊಬ್ಬ ಶಾಲಾ ಆವರಣದ ಮರದಲ್ಲಿದ್ದ ಜೇನಿನ ಗೂಡಿಗೆ ಕಲ್ಲು ಹೊಡೆದಿದ್ದು, ಕೆರಳಿದ ಜೇನುನೊಣಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ.
25 ವಿದ್ಯಾರ್ಥಿಗಳಿಗೆ ಗಾಯ, ವಿದ್ಯಾರ್ಥಿನಿಯ ಸ್ಥಿತಿ ಗಂಭೀರ
ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿಗಳಿಗೆ ತಕ್ಷಣ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ : Chikkamagaluru | Murder News | ಆಸ್ತಿ ಆಸೆಗೆ ಮಗಳಿಂದಲೇ ತಾಯಿಯ ಬಲಿ.!
ಹಾಸನ ಆಸ್ಪತ್ರೆಗೆ ವಿದ್ಯಾರ್ಥಿನಿ ರವಾನೆ – ಜೇನುನೊಣ ದಾಳಿಯಿಂದ ಸ್ಥಿತಿ ಗಂಭೀರ
ಮಾಹಿತಿಯ ಪ್ರಕಾರ, ಆ ವಿದ್ಯಾರ್ಥಿನಿಯ ಮೇಲೆ ನೂರಕ್ಕೂ ಹೆಚ್ಚು ಜೇನುಗಳು ದಾಳಿ ನಡೆಸಿದ್ದವು. ಮತ್ತೋರ್ವ ವಿದ್ಯಾರ್ಥಿಯನ್ನೂ ಹಾಸನಕ್ಕೆ ಕಳುಹಿಸಲಾಗಿದೆ.
ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ
ಪೋಷಕರು ಹಾಗೂ ಸ್ಥಳೀಯರು ಶಾಲಾ ಆಡಳಿತದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಆವರಣದ ಮರದಲ್ಲಿ ದೊಡ್ಡ ಜೇನಿನ ಗೂಡು ಇದ್ದರೂ ಮುಂಚಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ. ಈ ನಿರ್ಲಕ್ಷ್ಯವೇ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಂದಿದೆ.
ಶಾಲಾ ಆವರಣದಲ್ಲಿ ಜೇನುನೊಣಗಳ ದಾಳಿ!
ಶಾಲಾ ಆಡಳಿತ ಮಂಡಳಿ ಈಗ ಗೂಡನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವರದಿ ಕೋರಿದ್ದಾರೆ.
MUST WATCH: CHIKKABALLAPUA | ದೇವಸ್ಥಾನಕ್ಕೆ ಹೋಗಿದ್ದವರ ಮೇಲೆ ಹೆಜ್ಜೇನು ದಾಳಿ




