KKR New Assistant Coach : 2026 ರ IPL ಋತುವಿಗೆ ಮುಂಚಿತವಾಗಿ KKR ತಂಡವು ಆಸ್ಟ್ರೇಲಿಯಾದ ದಿಗ್ಗಜ ಶೇನ್ ವ್ಯಾಟ್ಸ ನ್ ಅವರನ್ನು ತಮ್ಮ ಹೊಸ ಸಹಾಯಕ ಕೋಚ್ ಆಗಿ ನೇಮಿಸಿಲಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಋತುವಿಗೆ ಮುನ್ನ ಹೊಸ ಬಲವನ್ನು ಪಡೆದಿದೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವ್ಯಾಟ್ಸನ್ (Shane Watson) ಅವರನ್ನು ತಂಡವು ಹೊಸ ಸಹಾಯಕ ಕೋಚ್ (Assistant Coach) ಆಗಿ ನೇಮಿಸಿದೆ. ಈ ಮೂಲಕ ಕೆಕೆಆರ್ ತನ್ನ ಕೋಚಿಂಗ್ ಬಳಗವನ್ನು ಮತ್ತಷ್ಟು ಬಲಪಡಿಸಿದೆ.
ವ್ಯಾಟ್ಸನ್ – IPLನ ಮೊದಲ ಸೂಪರ್ಸ್ಟಾರ್
ವ್ಯಾಟ್ಸನ್ ಮತ್ತು ಐಪಿಎಲ್ ನಡುವಿನ ಬಂಧವು 2008ರ ಆರಂಭಿಕ ಋತುವಿನಿಂದಲೇ ಆರಂಭವಾಯಿತು. ರಾಜಸ್ಥಾನ ರಾಯಲ್ಸ್ (Rajasthan Royals) ಪರ ಅವರು ಅದ್ಭುತ ಪ್ರದರ್ಶನ ನೀಡಿ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ತಂಡವನ್ನು ಮೊದಲ ಟ್ರೋಫಿ ಗೆಲುವಿನತ್ತ ಕರೆದೊಯ್ದಿದ್ದರು.
ಬಳಿಕ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ಪರ ಆಡಿ ಅನೇಕ ಸ್ಮರಣೀಯ ಅಭಿಯಾನಗಳಲ್ಲಿ ಪಾತ್ರವಹಿಸಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವ್ಯಾಟ್ಸನ್ ದಿಗ್ಗಜತನ
ಆಸ್ಟ್ರೇಲಿಯಾ ಪರ ಎಲ್ಲಾ ಸ್ವರೂಪಗಳಲ್ಲಿ ವ್ಯಾಟ್ಸನ್ ವಿಶಿಷ್ಟ ವೃತ್ತಿಜೀವನವನ್ನು ರೂಪಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟರ್ ಆಗಿಯೂ, ಸೀಮ್ ಬೌಲರ್ ಆಗಿಯೂ ಹೆಸರು ಮಾಡಿದ್ದಾರೆ. ಅವರು 2009ರ ಚಾಂಪಿಯನ್ಸ್ ಟ್ರೋಫಿ, ಹಾಗೂ 2007 ಮತ್ತು 2015ರ ವಿಶ್ವಕಪ್ ವಿಜೇತ ತಂಡಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ವ್ಯಾಟ್ಸನ್ನ ಪ್ರತಿಕ್ರಿಯೆ
ಕೆಕೆಆರ್ ಜೊತೆಗಿನ ತನ್ನ ಹೊಸ ಪಾತ್ರದ ಬಗ್ಗೆ ಮಾತಡಿದ ವ್ಯಾಟ್ಸನ್ “ಕೋಲ್ಕತ್ತಾ ನೈಟ್ ರೈಡರ್ಸ್ನಂತಹ ಐಕಾನಿಕ್ ಫ್ರಾಂಚೈಸಿಯ ಭಾಗವಾಗಿರುವುದು ಒಂದು ದೊಡ್ಡ ಗೌರವ. ಕೆಕೆಆರ್ ಅಭಿಮಾನಿಗಳ ಉತ್ಸಾಹ ಮತ್ತು ತಂಡದ ಶ್ರೇಷ್ಠತೆಯ ಬದ್ಧತೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ.
ಕೋಲ್ಕತ್ತಾಗೆ ಮತ್ತೊಂದು ಪ್ರಶಸ್ತಿಯನ್ನು ತರಲು ಸಹಾಯ ಮಾಡಲು ಕೋಚಿಂಗ್ ಗುಂಪು ಮತ್ತು ಆಟಗಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ” ಎಂದರು.
ಕೆಕೆಆರ್ ಸಿಇಒ ವೆಂಕಿ ಮೈಸೂರು ಪ್ರತಿಕ್ರಿಯೆ
ಕೆಕೆಆರ್ ಸಿಇಒ ವೆಂಕಿ ಮೈಸೂರು ವಾಟ್ಸನ್ ತಂಡ ಸೇರಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, “ವ್ಯಾಟ್ಸನ್ ಫ್ರಾಂಚೈಸಿಗೆ ಏನು ತರುತ್ತಾರೆ ಎಂಬುದನ್ನು ನಾವು ಈಗಾಗಲೇ ಕಂಡಿದ್ದದೇವೆ. ಅವರನ್ನು ಕೆಕೆಆರ್ ಕುಟುಂಬಕ್ಕೆ ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ.
ಉನ್ನತ ಮಟ್ಟದಲ್ಲಿ ಆಟಗಾರ ಮತ್ತು ತರಬೇತುದಾರರಾಗಿ ಅವರ ಅನುಭವವು ನಮ್ಮ ತಂಡದ ಸಂಸ್ಕೃತಿ ಮತ್ತು ಸಿದ್ಧತೆಗೆ ಅಪಾರ ಮೌಲ್ಯವನ್ನು ನೀಡುತ್ತದೆ. ಟಿ20 ಸ್ವರೂಪದ ಬಗ್ಗೆ ಅವರ ತಿಳುವಳಿಕೆ ವಿಶ್ವ ದರ್ಜೆಯದ್ದಾಗಿದೆ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ಅವರ ಕೊಡುಗೆಗಳನ್ನು ನಾವು ಎದುರು ನೋಡುತ್ತಿದ್ದೇವೆ” ಎಂದರು.
ಕೆಕೆಆರ್ ಹೊಸ ಕೋಚಿಂಗ್ ತಂಡ
ಇತ್ತೀಚೆಗೆ ಅಭಿಷೇಕ್ ನಾಯರ್ (Abhishek Nayar) ಅವರನ್ನು ಕೆಕೆಆರ್ ಮುಖ್ಯ ಕೋಚ್ (Head Coach) ಆಗಿ ನೇಮಿಸಲಾಗಿದೆ. ಈಗ ವ್ಯಾಟ್ಸನ್ ಅವರ ತಂಡಕ್ಕೆ ಸೇರಿಕೊಳ್ಳುವುದರಿಂದ, ಕೆಕೆಆರ್ ಚಾಂಪಿಯನ್ಶಿಪ್ ಯಶಸ್ಸಿಗೆ ಮರಳುವ ಕನಸನ್ನು ಮತ್ತಷ್ಟು ಬಲಪಡಿಸಿದೆ.
ಸ್ಥಳೀಯ ಪ್ರತಿಭೆಗಳೊಂದಿಗೆ ಜಾಗತಿಕ ಅನುಭವದ ಸಂಯೋಜನೆಗೆ ಹೆಮ್ಮೆಪಡುವ ಕೆಕೆಆರ್, ಈ ಹೊಸ ನೇಮಕಾತಿಯನ್ನು ಐಪಿಎಲ್ ಕಿರೀಟದತ್ತ ಮತ್ತೊಂದು ಪ್ರಮುಖ ಹೆಜ್ಜೆಯಾಗಿ ನೋಡಿದೆ.
ಇದ್ನನು ನೋಡಿ :




