BBK S12 : Bigg Boss Kannada 12 ಮನೆಯಲ್ಲಿ ಈಗ ಮಾಳು ನಿಪನಾಳ ಅವರ ನೇರ ನುಡಿಗಳೇ ಚರ್ಚೆಯ ವಿಷಯವಾಗಿವೆ. ಸೀಸನ್ ಆರಂಭದಲ್ಲಿ ಶಾಂತವಾಗಿ ಆಟವಾಡುತ್ತಿದ್ದ ಮಾಳು ಈಗ ಸಖತ್ ಆಕ್ಟಿವ್ ಸ್ಪರ್ಧಿ ಆಗಿದ್ದಾರೆ.

BBK S12 : Bigg Boss Kannada 12 ಮನೆಯಲ್ಲಿ ಈಗ ಮಾಳು ನಿಪನಾಳ ಅವರ ನೇರ ನುಡಿಗಳೇ ಚರ್ಚೆಯ ವಿಷಯವಾಗಿವೆ.
ಸೀಸನ್ ಆರಂಭದಲ್ಲಿ ಶಾಂತವಾಗಿ ಆಟವಾಡುತ್ತಿದ್ದ ಮಾಳು ಈಗ ಸಖತ್ ಆಕ್ಟಿವ್ ಸ್ಪರ್ಧಿ ಆಗಿದ್ದಾರೆ.
ನೇರವಾಗಿ ಮಾತನಾಡುವ ಶೈಲಿಯಿಂದ ವೀಕ್ಷಕರ ಮನ ಗೆದ್ದರೂ, ಮನೆಯೊಳಗಿನ ಸದಸ್ಯರಿಗೆ ಅವರ ನೇರತನ ಅರಗಿಸಿಕೊಳ್ಳೋಕೆ ಆಗ್ತಿಲ್ಲ!
ಮಾಳು ನಿಪನಾಳ ವಿರುದ್ಧ ಅಶ್ವಿನಿ ಗರಂ!
ಬಿಗ್ ಬಾಸ್ ನೀಡಿದ “ಕಸ ಯಾರಿಗೆ ಸೂಕ್ತ?” ಟಾಸ್ಕ್ ವೇಳೆ ಮಾಳು ಅವರು ಅಶ್ವಿನಿ ಗೌಡ ಅವರ ಮೇಲೆ ಕಪ್ಪು ನೀರು ಚೆಲ್ಲಿದ್ರು.
ಅದರ ಕಾರಣ ನೀಡುತ್ತಾ,ಅಶ್ವಿನಿ ಅವರಲ್ಲಿ ಕಲ್ಮಶ ಜಾಸ್ತಿ. ಅವರು ಬೇಕೆಂದು ರಕ್ಷಿತಾ ಅವರನ್ನು ನಿರಂತರವಾಗಿ ಹುರಿಯುತ್ತಾರೆ”
ಎಂದು ಹೇಳಿದರು.
ಈ ಮಾತು ಕೇಳಿ ಅಶ್ವಿನಿ ತೀವ್ರವಾಗಿ ಕೋಪಗೊಂಡರು.ಅವರು ಪ್ರತಿಕ್ರಿಯೆ ನೀಡುತ್ತಾ,“ಕ್ಷಮೆ ಕೇಳಿದರೆ ಅರ್ಥ ನಾನು ಸೋತಂತಲ್ಲ. ಬೇರೆ ಅವರ ಹೆಸರಿನಲ್ಲಿ ಟಾಂಟ್ ಮಾಡಬಾರದು”ಎಂದು ಗರಂ ಆಗಿದ್ದಾರೆ.
ರಾಶಿಕಾ ಕಣ್ಣೀರು ಹಾಕಿದ ಕ್ಷಣ
ಟಾಸ್ಕ್ ವೇಳೆ ಮಾಳು ಅವರು ರಾಶಿಕಾ ಶೆಟ್ಟಿ ಅವರ ಮೇಲೂ ಕಸ ಚೆಲ್ಲಿದರು. ಅವರ ಮಾತುಗಳಿಂದ ಬೇಸರಗೊಂಡ ರಾಶಿಕಾ ಕಣ್ಣೀರು ಹಾಕಿದರು.
ಅದೇ ವೇಳೆ ಕಾಕ್ರೋಚ್ ಸುಧಿ ಹಾಗೂ ರಾಶಿಕಾ ನಡುವೆ ತೀವ್ರ ವಾಕ್ಸಮರ ನಡೆಯಿತು.
ರಾಶಿಕಾ ಹೇಳಿದ “ಥೂ” ಶಬ್ದದಿಂದ ಮನೆಯಲ್ಲಿ ವಾತಾವರಣ ಗರಂ ಆಯ್ತು.
ಮಾಳು ಮತ್ತು ಗಿಲ್ಲಿ ಇಬ್ಬರೂ ಶಾಂತಗೊಳಿಸಲು ಪ್ರಯತ್ನಿಸಿದರು.
ಸೂರಜ್ ಬಳಿ ಅಳಲು ತೋಡಿಕೊಂಡ ರಾಶಿಕಾ
ಟಾಸ್ಕ್ ಬಳಿಕ ರಾಶಿಕಾ ಸೂರಜ್ ಬಳಿ ಅಳುತ್ತಾ, ತಮ್ಮ ಮನದ ಮಾತು ಹೇಳಿದರು:ಈ ಮನೆಯಲ್ಲಿ ನಾನು ತುಂಬಾ ಸುಲಭವಾಗಿ ಟಾರ್ಗೆಟ್ ಆಗ್ತೀನಿ. ಮುಖವಾಡ ಹಾಕಿಕೊಂಡು ಬದುಕೋದು ನನಗೆ ಬರುವುದಿಲ್ಲ. ಮಾಳು ಅವರು ನನ್ನ ಹೆಸರು ತೆಗೆದುಕೊಂಡರೆ ಅವರ ಆಟಕ್ಕೆ ತೊಂದರೆ ಆಗೋದಿಲ್ಲ”
ಎಂದು ಹೇಳಿದರು.
ಸೂರಜ್ ಅವರು ರಾಶಿಕಾವನ್ನು ಸಮಾಧಾನಪಡಿಸಿದರು.
ಬಕೆಟ್ ಗ್ಯಾಂಗ್ಗೆ ಮಾಳು ಟಾರ್ಗೆಟ್!
ಈ ವಾರ ಮಾಳು ಅವರು ಬಕೆಟ್ ಗ್ಯಾಂಗ್ ವಿರುದ್ಧ ನೇರವಾಗಿ ಮಾತನಾಡಿ ವೀಕ್ಷಕರ ಗಮನ ಸೆಳೆದಿದ್ದಾರೆ. ಜಾಹ್ನವಿ ಬಗ್ಗೆ ಹೇಳಿದ ಮಾತುಗಳು ಸಹ ಟ್ರೋಲ್ ಆಗುತ್ತಿವೆ.“ಅವರು ಅಡುಗೆ ಕೆಲಸ ಸರಿಯಾಗಿ ಮಾಡಲ್ಲ.
ಕ್ಯಾಮೆರಾ ನನ್ನನ್ನು ನೋಡಲಿ, ನನ್ನ ಮೇಕಪ್ ನೋಡಲಿ ಅನ್ನೋದೇ ಅವರ ಗುರಿ”ಎಂದು ಮಾಳು ಟೀಕಿಸಿದರು.
ಮನೆ ಒಳಗಿನ ಹೊಸ ದಿಕ್ಕು
ಈ ಎಲ್ಲದರಿಂದ Bigg Boss Kannada 12 ಮನೆಯಲ್ಲಿ ಹೊಸ ರಾಜಕೀಯ ನಿರ್ಮಾಣವಾಗುತ್ತಿದೆ. ಮಾಳು ಅವರ ನೇರ ನುಡಿಗಳು ಒಬ್ಬರ ಮನ ಗೆಲ್ಲುತ್ತಿವೆ ಆದರೆ, ಮತ್ತೊಬ್ಬರ ಹೃದಯಕ್ಕೆ ಹಚ್ಚಿನಂತಾಗಿವೆ.
ವೀಕ್ಷಕರ ಅಭಿಪ್ರಾಯ ಪ್ರಕಾರ — “ಮಾಳು ನಿಪನಾಳ ಈಗ ಆಟದ ನಿಜವಾದ ಗೇಮ್ ಚೇಂಜರ್!”




