Sivasri Skandaprasad : ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸತತ 2ನೇ ವರ್ಷ ಗೋವಾದಲ್ಲಿ ನಡೆದ ಐರನ್ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಗೋವಾದಲ್ಲಿ ನಡೆದ ಐರನ್ಮ್ಯಾನ್ 70.3 ಸ್ಪರ್ಧೆಯನ್ನು ಸತತ ಎರಡನೇ ವರ್ಷವೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ತಮ್ಮ ದೃಢ ನಿಶ್ಚಯ ಮತ್ತು ಶಾರೀರಿಕ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಪತ್ನಿ ಶಿವಶ್ರೀ ಅವರ ಪೋಸ್ಟ್

ತೇಜಸ್ವಿ ಸೂರ್ಯ (Tejasvi Surya) ಅವರ ಪತ್ನಿ ಶಿವಶ್ರೀ, ಪತಿಗೆ ಅಭಿನಂದನೆ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮಾಡಿದ್ದಾರೆ.
“ಎರಡನೇ ಬಾರಿ ಐರನ್ಮ್ಯಾನ್ 70.3 ಯಶಸ್ವಿಯಾಗಿ ಪೂರ್ಣಗೊಳಿಸಿದ ನನ್ನ ‘ಮ್ಯಾನ್ ಆಫ್ ಸ್ಟೀಲ್’ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು. ಈ ಬಾರಿ ಹಿಂದಿನ ಬಾರಿ ಹೋಲಿಸಿದರೆ 40 ನಿಮಿಷ ಕಡಿಮೆ ಸಮಯದಲ್ಲಿ ಗುರಿ ತಲುಪಿದ್ದೀರಿ ಎನ್ನುವುದು ಹೆಮ್ಮೆಯ ವಿಚಾರ.”
“ನನ್ನ ವೈಯಕ್ತಿಕ ಕೋಚ್ ಮತ್ತು ಪ್ರೇರಣಾದಾಯಕ ಪತಿಯಾಗಿ, ನನ್ನ ಐರನ್ಮ್ಯಾನ್ ಪ್ರಯಾಣದಲ್ಲಿ ಬೆಂಬಲಿಸಿದಕ್ಕಾಗಿ ಧನ್ಯವಾದಗಳು. ನೀವು ನನಗೆ ದೊರೆತ ಅತ್ಯುತ್ತಮ ವ್ಯಕ್ತಿ,” ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನು ಓದಿ : Bengaluru : ಗ್ರೇಟರ್ ಬೆಂಗಳೂರು ಅಥಾರಿಟಿ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ!
ಶಿವಶ್ರೀ ಅವರೂ ಸ್ಪರ್ಧೆಯಲ್ಲಿ ಪಾಲ್ಗೊಂಡರು
ಇನ್ನು ಶಿವಶ್ರೀ ತಾವೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 90 ಕಿಲೋಮೀಟರ್ ಸೈಕ್ಲಿಂಗ್ ಪೂರೈಸಿ ಎಲ್ಲರ ಗಮನ ಸೆಳೆದಿದ್ದಾರೆ.
ತೇಜಸ್ವಿ ಸೂರ್ಯ ಪ್ರದರ್ಶನ:
- 1.9 ಕಿ.ಮೀ ಈಜು,
- 90 ಕಿ.ಮೀ ಸೈಕ್ಲಿಂಗ್, ಮತ್ತು
- 21.1 ಕಿ.ಮೀ ಓಟವನ್ನು ಒಟ್ಟು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದರು.
ಈಜಲು 44 ನಿಮಿಷ, ಸೈಕ್ಲಿಂಗ್ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷ ತೆಗೆದುಕೊಂಡರು.
ಈ ಸ್ಪರ್ಧೆಯಲ್ಲಿ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಸಹ ಭಾಗವಹಿಸಿದ್ದರು. ಅವರು 8 ಗಂಟೆ 13 ನಿಮಿಷಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದರು.

ಇದನ್ನು ನೋಡಿ : Dhruvanth: ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್; ಈ ವಾರವೇ ನಟ ಔಟ್?




