BBK S12 : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಹೊಸ ಡ್ರಾಮಾ ಬೆಳಕಿಗೆ ಬಂದಿದೆ. ಸ್ಪರ್ಧಿ ಸೂರಜ್ ಸಿಂಗ್ (Suraj Singh) ಅವರ ಮತ್ತೊಂದು ಮುಖ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

BBK S12 : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಹೊಸ ಡ್ರಾಮಾ ಬೆಳಕಿಗೆ ಬಂದಿದೆ. ಸ್ಪರ್ಧಿ ಸೂರಜ್ ಸಿಂಗ್ (Suraj Singh) ಅವರ ಮತ್ತೊಂದು ಮುಖ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ. ರಿಷಾ ಗೌಡ (Risha Gowda) ವಿರುದ್ಧ ಸೂರಜ್ ಸಿಂಗ್ ರೆಬಲ್ ಆಗಿದ್ದು, ಮನೆಯಲ್ಲಿ ಭಾರಿ ಗಲಾಟೆ ಉಂಟಾಗಿದೆ.
“ಮಳ್ಳನ್ ಮಗನ ನಂಬಲ್ಲ ನಾನು” ರಿಷಾ ಹೇಳಿಕೆ ಸೂರಜ್ಗೆ ಕಿಚ್ಚು
ಬಿಗ್ ಬಾಸ್ ಮನೆಯಲ್ಲಿ ನಡೆದ ಚಟುವಟಿಕೆಯಲ್ಲಿ ರಿಷಾ ಗೌಡ ಹೇಳಿದ “ಮಳ್ಳನ್ ಮಗನ ನಂಬಲ್ಲ ನಾನು” ಎಂಬ ಮಾತು ಸೂರಜ್ ಸಿಂಗ್ ಅವರ ಮನಸ್ಸಿಗೆ ತುಂಬಾ ನೋವು ತಂದಿದೆ. ಇದೇ ಹೇಳಿಕೆ ಇಬ್ಬರ ನಡುವೆ ಬಿರುಕು ಮೂಡಿಸಿದ್ದು, ಮನೆಯಲ್ಲಿ ವಾತಾವರಣ ಉಗ್ರಗೊಂಡಿದೆ.
ಸೂರಜ್-ರಿಷಾ ನಡುವೆ ಮುಖಾಮುಖಿ ತೀವ್ರಗೊಂಡಿತು
ಸೋಮವಾರ ಬಿಗ್ ಬಾಸ್ ನೀಡಿದ್ದ ಟಾಸ್ಕ್ ವೇಳೆ ಸೂರಜ್ ಸಿಂಗ್, ರಿಷಾ ಮುಖಕ್ಕೆ ಮಷಿ ಬಳಿದಿದ್ದರು. ಅದರಿಂದ ಬೇಸತ್ತ ರಿಷಾ, ಸೂರಜ್ಗೆ ಮನೆಯಿಂದ ಬಂದಿದ್ದ ಪತ್ರವನ್ನು ಮಷಿನ್ಗೆ ಹಾಕಿ ಧ್ವಂಸ ಮಾಡಿದಳು. ಈ ಘಟನೆ ಸೂರಜ್ಗೆ ಭಾವನಾತ್ಮಕವಾಗಿ ನೋವು ತಂದಿದೆ.
ನಂತರ ಇಬ್ಬರೂ ಮುಖಾಮುಖಿಯಾಗಿದ್ದು, ಸೂರಜ್ ಪ್ರಶ್ನಿಸಿದರು —“ನನ್ನನ್ನ ‘ಮಳ್ಳ’ ಅಂತಾ ಕರೆಯೋಷ್ಟು ನಾನು ಏನು ಮಾಡಿದ್ದೆ?”
ಅದಕ್ಕೆ ರಿಷಾ ತಿರುಗೇಟು ನೀಡುತ್ತಾ —“ನಿನ್ನ ನಂಬಲ ಆಗಲ್ಲ,” ಎಂದು ದೃಷ್ಟಿ ತಪ್ಪಿಸಿ ಉತ್ತರಿಸಿದರು.
ತಾಳ್ಮೆ ಕಳೆದುಕೊಂಡ ಸೂರಜ್ ಸಿಂಗ್
ಸೂರಜ್ ರಿಷಾಗೆ ಕಣ್ಣಲ್ಲಿ ಕಣ್ಣಿಟ್ಟು ಹೇಳುವಂತೆ ಹೇಳಿದಾಗ, ರಿಷಾ ಕೋಪದಿಂದ —“ಏನು ಇಲ್ಲ ನೋಡ್ಕೊಂಡು ಹೇಳೋದು! ಎಲ್ಲಿ ಬೇಕಾದರೂ ನೋಡ್ತೀನಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸೂರಜ್ ತಾಳ್ಮೆ ಕಳೆದುಕೊಂಡು,ಇದನ್ನೆಲ್ಲ ನಿನ್ನ ಮನೆಯಲ್ಲಿ ಇಟ್ಕೋ, ಬರೀ ಏಏಏ ಅಂದ್ರೆ ಆಗಲ್ಲ,” ಎಂದು ಗಟ್ಟಿಯಾಗಿ ಪ್ರತಿಕ್ರಿಯಿಸಿದರು.
MUST READ : BBK S12: ಸೂರಜ್ ಕೌಂಟರ್ಗೆ ಸೈಲೆಂಟ್ ಆದ ರಿಷಾ!
ಲವ್ ಟ್ರಾಕ್ನಿಂದ ಫೈಟ್ ಟ್ರಾಕ್ಗೆ ಸೂರಜ್ ಸಿಂಗ್!
ಇದುವರೆಗೆ ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ರೋಮ್ಯಾಂಟಿಕ್ ಮತ್ತು ಲವ್ ಟ್ರಾಕ್ಗಾಗಿ ಸುದ್ದಿಯಾಗಿದ್ದರು. ವಿಶೇಷವಾಗಿ ರಾಶಿಕಾ ಮತ್ತು ಸೂರಜ್ ನಡುವಿನ ಸಂಭಾಷಣೆ ವೀಕ್ಷಕರ ಗಮನ ಸೆಳೆಯುತ್ತಿತ್ತು. ಆದರೆ ಇದೀಗ ಸೂರಜ್ ಅವರ ಹೊಸ ಮತ್ತು ಕೋಪದ ಮುಖ ಕಾಣಿಸಿಕೊಂಡಿದೆ.
ಇದು ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಅವರ ಮೊದಲ ಬಾರಿಗೆ ನಡೆದ ಮುಖ್ಯ ಘರ್ಷಣೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ಈ ವಿಷಯದ ಬಗ್ಗೆ ಚರ್ಚೆ ಜೋರಾಗಿದೆ.
ಪ್ರೇಕ್ಷಕರ ಪ್ರತಿಕ್ರಿಯೆ
ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸೂರಜ್ನ ಕೋಪವನ್ನು ಸಹಜ ಎಂದು ಹೇಳುತ್ತಿದ್ದರೆ, ಇತರರು ರಿಷಾ ಗೌಡ ಅವರ ವರ್ತನೆಯನ್ನೇ ಪ್ರಶ್ನಿಸುತ್ತಿದ್ದಾರೆ.
Bigg Boss Kannada ಪ್ರತಿ ಎಪಿಸೋಡ್ ಈಗ ಹೆಚ್ಚು ಕುತೂಹಲ ಹುಟ್ಟಿಸುತ್ತಿದೆ.
MUST READ : ತುಮಕೂರಿನಲ್ಲಿ ಕಿಡಿಗೇಡಿಗಳಿಂದ ಇದೆಂಥಾ ಅಟ್ಟಹಾಸ- ಗೋ ಮಾತೆಯ ಮೇಲೆ ಕ್ರೌರ್ಯತೆ ಮೆರೆದಿದ್ದು ಯಾರು..? | TUMKUR NEWS




