Nandini Ghee Price Hike : ಭಾರೀ ಬೇಡಿಕೆಯ ನಡುವೆ ಬೆಲೆ ಏರಿಕೆಯಾಗಿದ್ದು, ಕೆಎಂಎಫ್ ತುಪ್ಪ ಈಗ ಬಲು ದುಬಾರಿ ಆಗಿದೆ.

ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಇದೀಗ ಕೆಎಂಎಫ್ ಗ್ರಾಹಕರಿಗೆ ಶಾಕ್ ನ್ಯೂಸ್ ಬಂದಿದೆ. ಇನ್ನು ಹಾಲು, ಮೊಸರು ಬೆಲೆ ಏರಿಕೆಯಾದ ನಂತರ ನಂದಿನಿ ತುಪ್ಪ (Nandini Ghee) ದರವೂ ಹೆಚ್ಚಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರುತ್ತದೆ.
ಭಾರೀ ಬೇಡಿಕೆ ನಡುವೆಯೇ ಬೆಲೆ ಏರಿಕೆ
ಕೆಎಂಎಫ್ (KMF) ತುಪ್ಪ ಈಗ ಬಲು ದುಬಾರಿ ಆಗಿದ್ದು, ಒಂದು ಲೀಟರ್ ತುಪ್ಪದ ದರ 90 ರೂ. ಏರಿಕೆಯಾಗಿದೆ. ಇದೀಗ ಒಂದು ಲೀಟರ್ KMF ತುಪ್ಪ 700 ರೂ. ನಿಗದಿ ಮಾಡಲಾಗಿದೆ.
ತುಪ್ಪದ ಬೆಲೆ ಇತಿಹಾಸ
- ಹಿಂದಿನ ದರ: 1 ಲೀಟರ್ – ₹610
- GST ಸುಧಾರಣೆಗೆ ಮೊದಲು: ₹650
- GST ಸುಧಾರಣೆ ಬಳಿಕ 40 ರೂ. ಇಳಿಕೆ
ಇದನ್ನು ಓದಿ : ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ಬೆಲೆ ಏರಿಕೆ ಕಾರಣದಿಂದ ಈ ದರ ಬದಲಾವಣೆ ಅನಿವಾರ್ಯವಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ನಂದಿನಿ ತುಪ್ಪದ ಹೊಸ ಬೆಲೆ ಪಟ್ಟಿ
- 50 ml – ₹47
- 100 ml – ₹75
- 200 ml – ₹155–165
- 500 ml – ₹350–360
- 1 ಲೀಟರ್ (1000 ml) – ₹700–720
- 5 ಲೀಟರ್ – ₹3,525
- 15 ಲೀಟರ್ (ಬೃಹತ್ ಪ್ಯಾಕ್) – ₹11,475
ಇದನ್ನು ನೋಡಿ : ಕೆಎಂಎಫ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ನಂದಿನಿ ತುಪ್ಪದ ಬೆಲೆಯಲ್ಲಿ ಭಾರೀ ಏರಿಕೆ




