H.Y Meti : ಮಾಜಿ ಸಚಿವ ಎಚ್.ವೈ ಮೇಟಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಇಹಲೋಕ ತ್ಯಜಿಸಿದ್ದಾರೆ.

ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಮತ್ತು ಹಾಲಿ ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ (H.Y Meti) ಇಂದು ನಿಧನರಾದಿದ್ದಾರೆ. 81 ವರ್ಷ ವಯಸ್ಸಿನ ಮೇಟಿ ಅವರು ಜಯನಗರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಾರ್ಡಿಯಾಕ್ ಅರೆಸ್ಟ್ ನಿಂದ ಕೊನೆಯುಸಿರೆಳೆದರು.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮಾಜಿ ಸಚಿವ ಹಾಲಿ ಶಾಸಕ ಹೆಚ್.ವೈ. ಮೇಟಿ ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವಾರವೇ ಸಿಎಂ ಸಿದ್ದರಾಮಯ್ಯ ಅವರು ಅವರನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದ್ದರು. ಮೇಟಿಯವರ ನಿಧನದ ನಂತರ, ಸಿಎಂ ನೇರವಾಗಿ ಮೈಸೂರಿನಿಂದ ಜಯನಗರ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದಾರೆ.
ಇದನ್ನು ಓದಿ : 2026ರ ಮೇನಲ್ಲಿ ಶುರುವಾಗುತ್ತಾ ಪಿಂಕ್ ಮೆಟ್ರೋ?
ಐದು ಬಾರಿ ಶಾಸಕರಾಗಿದ್ದ ಹೆಚ್.ವೈ ಮೇಟಿ!
ಹೆಚ್.ವೈ.ಮೇಟಿ ಅಕ್ಟೋಬರ್ 9, 1946 ರಲ್ಲಿ ಜನಿಸಿದ್ದರು. ಮೂರು ಬಾರಿ ಗುಳೇದ ಗುಡ್ಡ ಕ್ಷೇತ್ರದಿಂದ ಶಾಸಕರಾಗಿದ್ದರು. ಮತ್ತು ಎರಡು ಬಾರಿ ಬಾಗಲಕೋಟೆ ಕ್ಷೇತ್ರದಿಂದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಎರಡು ಬಾರಿ ಸಚಿವರಾಗಿದ್ದು, 2016 ರಲ್ಲಿ ಲೈಂಗಿಕ ಹಗರಣದಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮೇಟಿ ಅವರ ಅಂತ್ಯಕ್ರಿಯೆ
ಇನ್ನು ಎಚ್.ವೈ. ಮೇಟಿಯ ಅಂತ್ಯಕ್ರಿಯೆ ನಾಳೆ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ.
ಇದನ್ನು ನೋಡಿ : H.Y Meti: ಕಾಂಗ್ರೆಸ್ ಹಿರಿಯ ನಾಯಕ ಎಚ್.ವೈ ಮೇಟಿ ಇನ್ನಿಲ್ಲ




