GUBBI: ಗುಬ್ಬಿಯ ವಿದ್ಯಾರ್ಥಿನಿಯೋರ್ವಳು ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಗುಡ್ಡಗಾಡು ಓಟ (Cross Country Race) ಸ್ಪರ್ಧೆಯಲ್ಲಿ 10 ಕಿಲೋಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಗುಬ್ಬಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

GUBBI: ಗುಬ್ಬಿ ತಾಲೂಕಿನ ಒಬಳ್ಳಿ ಗ್ರಾಮದ ಕವನ ಎಂಬ ವಿದ್ಯಾರ್ಥಿನಿ ತುಮಕೂರು ಶ್ರೀ ಸಿದ್ದಗಂಗಾ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ B.Sc ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಗುಡ್ಡಗಾಡು ಓಟ (Cross Country Race) ಸ್ಪರ್ಧೆಯಲ್ಲಿ 10 ಕಿಲೋಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಗುಬ್ಬಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಇನ್ನು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯನ್ನೂ ಮೈಗೂಡಿಸಿಕೊಂಡಿರುವ ಕವನ ಚಿಕ್ಕಂದಿನಿಂದಲೇ ಹೋಬಳಿ ಮತ್ತು ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಸತತವಾಗಿ ಮೊದಲ ಸ್ಥಾನಗಳನ್ನು ಗಳಿಸುತ್ತಾ ಬಂದಿದ್ದಾರೆ. ಈಗ ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಗುಬ್ಬಿ ತಾಲೂಕಿನ ಹೆಮ್ಮೆಯ ವಿಷಯವಾಗಿದೆ ಎಂದು ಕ್ರೀಡಾ ಪ್ರೋತ್ಸಾಹಕ ಸಿ.ಆರ್. ಶಂಕರ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: Accident: ಕಳ್ಳಂಬೆಳ್ಳ ಬಳಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಇಬ್ಬರ ಸಾವು..!
ಈ ಹಿನ್ನೆಲೆಯಲ್ಲಿ ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಲಾ ಮಕ್ಕಳು, ಕ್ರೀಡಾ ತರಬೇತುದಾರರು ಹಾಗೂ ಗುಬ್ಬಿ ಶ್ರೀ ಚನ್ನಬಸವೇಶ್ವರ ಕ್ರೀಡಾ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಕವನ ಅವರಿಗೆ ಸನ್ಮಾನ ಮಾಡಲಾಯಿತು.
MUST WATCH: PAVAGADA | ಪಾವಗಡದಲ್ಲಿ ಕನ್ನಡ ಮಾತೆಗೆ ಅವಮಾನ- ಸರ್ಕಾರಿ ಶಾಲೆ, ಕಚೇರಿಗಳಲ್ಲಿ ಆಟಕ್ಕುಂಟು ಲೆಕ್ಕಕಿಲ್ಲ




