Karnataka Politics : ಕರ್ನಾಟಕ ಕಾಂಗ್ರೆಸ್ (Congress) ಪಾಳೆಯದಲ್ಲಿ ನವೆಂಬರ್ ಆರಂಭದಲ್ಲೇ “ಡೆಡ್ಲೈನ್ ಬಾಂಬ್” ಸಿಡಿದಿದೆ.

Karnataka Politics : ಕರ್ನಾಟಕ ಕಾಂಗ್ರೆಸ್ (Congress) ಪಾಳೆಯದಲ್ಲಿ ನವೆಂಬರ್ ಆರಂಭದಲ್ಲೇ “ಡೆಡ್ಲೈನ್ ಬಾಂಬ್” ಸಿಡಿದಿದೆ.
ಪದಗ್ರಹಣ, ನಾಯಕತ್ವ ಬದಲಾವಣೆ, ಕ್ರಾಂತಿ—ಈ ಮೂರು ಪದಗಳು ಈಗ ಕಾಂಗ್ರೆಸ್ ಮನೆಯಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಯ ಕಿಡಿಯನ್ನು ಎಬ್ಬಿಸುತ್ತಿವೆ.
ಅಕ್ಟೋಬರ್ ಮುಗಿದು ನವೆಂಬರ್ ಆರಂಭವಾದಂತೆಯೇ, ಪದಗ್ರಹಣ ಮತ್ತು ಡೆಡ್ಲೈನ್ ಚರ್ಚೆ ಪಕ್ಷದೊಳಗೆ ಭಾರೀ ಸದ್ದು ಮಾಡುತ್ತಿದೆ.
ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಗರಂ ಆಗಿರುವ ಮಾಹಿತಿ ದೊರೆತಿದೆ.
“ಡೆಡ್ಲೈನ್” ಬಗ್ಗೆ ಸಿಎಂ ಸಿದ್ದರಾಮಯ್ಯ ಗರಂ ಪ್ರತಿಕ್ರಿಯೆ
ಮಾಧ್ಯಮಗಳು “ಡಿಕೆ ಶಿವಕುಮಾರ್ ಡೆಡ್ಲೈನ್ ಕೊಟ್ಟಿದ್ದಾರೆ” ಎಂಬ ವದಂತಿ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ, ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು.“ನಿನಗೆ ಹೇಗೆ ಗೊತ್ತು? ಯಾವ ಪೇಪರ್ನಲ್ಲಿ ಬರೆದಿದೆ? ನಾನು ಎಲ್ಲಾ ಪತ್ರಿಕೆ ಓದುತ್ತೇನೆ, ಎಲ್ಲೂ ನೋಡಿಲ್ಲ!”
ಎಂದು ಸಿಎಂ ಸಿದ್ದರಾಮಯ್ಯ ಗರಂ ಧಾಟಿಯಲ್ಲಿ ಪ್ರತಿಕ್ರಿಯಿಸಿದರು.
“ಅದು ದೊಡ್ಡವರ ವಿಷಯ” – ಸಚಿವ ಮಹದೇವಪ್ಪ
ಡೆಡ್ಲೈನ್ ವಿಚಾರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ಮಹದೇವಪ್ಪ ಸ್ಪಷ್ಟವಾಗಿ ಹೇಳಿದರು —ಅದು ದೊಡ್ಡವರ ವಿಷಯ. ನಮಗೆ ಹೇಗೆ ಗೊತ್ತಾಗುತ್ತದೆ?”ಇದರ ಮೂಲಕ ಅವರು ಈ ಚರ್ಚೆಗೆ ದೂರ ಉಳಿಯುವ ಪ್ರಯತ್ನ ಮಾಡಿದರು. “ಸಿಎಂ ಆಗಬೇಕು ಎಂಬ ಆಸೆ ಇದೆ” – ಸಚಿವ ಜಮೀರ್ ಅಹ್ಮದ್
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾತುಗಳು ಮತ್ತೆ ಚರ್ಚೆಗೆ ಆಹಾರ ಒದಗಿಸಿವೆ.ಅವರು ಹೇಳಿದರು —ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ ಕುರ್ಚಿ ಖಾಲಿ ಇಲ್ಲ.ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಎಂದು ಹೇಳಿದ್ದಾರೆ.”
ಇದರಿಂದ ಸರ್ಕಾರದ ಒಳಸಂಚಾರ ಮತ್ತು ಅಧಿಕಾರ ಹಂಚಿಕೆ ಕುರಿತು ಊಹಾಪೋಹಗಳು ಮತ್ತಷ್ಟು ತೀವ್ರಗೊಂಡಿವೆ.
ಚಿತ್ರದುರ್ಗದಲ್ಲಿ “ಮುಂದಿನ ಡಿಸಿಎಂ ಜಮೀರ್” ಘೋಷಣೆ
ಚಿತ್ರದುರ್ಗದಲ್ಲಿ ಜಮೀರ್ ಅಹ್ಮದ್ ಖಾನ್ ಅಭಿಮಾನಿಗಳು ಹೊಸ ಘೋಷಣೆ ನೀಡಿದ್ದು ಗಮನಸೆಳೆದಿದೆ —“ಮುಂದಿನ ಡಿಸಿಎಂ ಜಮೀರ್!”ಭಿತ್ತಿಪತ್ರ ಪ್ರದರ್ಶನೆಯ ಮೂಲಕ ಅವರ ಬೆಂಬಲಿಗರು ಹೊಸ ರಾಜಕೀಯ ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ಏನೂ ಆಗುತ್ತಿಲ್ಲವೇ?
ಹೊರಗೆ ನೋಡಲು “ಎಲ್ಲ ಶಾಂತ” ಎಂಬಂತೆ ತೋರುತ್ತಿದ್ದರೂ,ಅಂತರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ನಾಯಕರ ಹೇಳಿಕೆಗಳು
ಕಾಂಗ್ರೆಸ್ ಕೋಟೆಯೊಳಗಿನ ರಾಜಕೀಯ ಕಿಚ್ಚನ್ನು ಮತ್ತಷ್ಟು ಉಸಿರುಗಟ್ಟಿಸುತ್ತಿವೆ.
ಕ್ರಾಂತಿನಾ ಅಥವಾ ಭ್ರಾಂತಿನಾ?
ನವೆಂಬರ್ ಆರಂಭದಲ್ಲೇ ಕಾಂಗ್ರೆಸ್ನಲ್ಲಿ ಸದ್ದು ಮಾಡುತ್ತಿರುವ “ಡೆಡ್ಲೈನ್”ವಾಸ್ತವಿಕ ಕ್ರಾಂತಿಯಾಗುತ್ತದೆಯಾ ಅಥವಾ ಕೇವಲ ಭ್ರಾಂತಿಯಾಗುತ್ತದೆಯಾ ಎಂಬ ಕುತೂಹಲ ಗರಿಗೆದರುತ್ತಿದೆ.ರಾಜಕೀಯ ವಲಯದಲ್ಲಿ ಎಲ್ಲರ ಕಣ್ಣುಗಳು ಈಗ ಸಿಎಂ–ಡಿಕೆ ಸಮೀಕರಣದತ್ತ ನೆಟ್ಟಿವೆ




