
MANTRALAYA HUNDI COUNTING : ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂಬ ಪ್ರಸಿದ್ಧಿಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದು ಬಂದಿದೆ. ಕಳೆದ 27 ದಿನಗಳಲ್ಲಿ ಮಠದ ಹುಂಡಿಯಲ್ಲಿ ಒಟ್ಟು ₹3.5 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಇನ್ನು ಹುಂಇ ಎಣಿಕೆಯಲ್ಲಿ ₹3,39,12,143 ರೂ. ನಗದು ನೋಟುಗಳು, ₹11.05 ಲಕ್ಷ ರೂ. ನಾಣ್ಯಗಳು, ಜೊತೆ ಗೆ 138 ಗ್ರಾಂ ಚಿನ್ನ ಮತ್ತು 950 ಗ್ರಾಂ ಬೆಳ್ಳಿ ಕಾಣಿಕೆಯಾಗಿ ಭಕ್ತರು ಸಮರ್ಪಿಸಿದ್ದಾರೆ.

ಈ ಎಣಿಕೆ ಕಾರ್ಯವನ್ನು ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಮತ್ತು ಸೇವಕರು ಸಹಕರಿಸಿ ಯಶಸ್ವಿಯಾಗಿ ಮುಗಿಸಿದರು. ಭಕ್ತರ ಆಶ್ರಯದಿಂದ ಮಠಕ್ಕೆ ಈ ರೀತಿಯ ಧಾರ್ಮಿಕ ಕೊಡುಗೆ ಗಳು ನಿರಂತರವಾಗಿ ಹರಿದು ಬರುತ್ತಿರುವುದು ಗಮನಾರ್ಹ. ಮಂತ್ರಾಲಯದ ಈ ಆದಾಯವನ್ನು ಮಠದ ವಿವಿಧ ಧಾರ್ಮಿಕ ಸೇವೆಗಳಿಗೆ, ಅನಾಥಾಶ್ರಮ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಬಳಸಲಾಗುತ್ತದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ತುಂಗಾತೀರದಲ್ಲಿ ನೆಲೆಸಿರುವ ರಾಯರ ಮಠಕ್ಕೆ ರಾಜ್ಯ, ಅಂತಾರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಭೇಟಿ ನೀಡಿ, ಶ್ರೀ ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನದ ದರ್ಶನ ಪಡೆಯುತ್ತಾರೆ.




