Volvo Bus Fire Accident : ಕರ್ನೂಲು (Andhra Pradesh) ಸಮೀಪ ನಡೆದ ಭೀಕರ ಬಸ್ ಬೆಂಕಿ ದುರಂತದಲ್ಲಿ 22 ಮಂದಿ ಸಜೀವ ದಹನಗೊಂಡಿದ್ದಾರೆ.

Volvo Bus Fire Accident : ಆಂಧ್ರದ ಕರ್ನೂಲು ಬಳಿ ನಡೆದ ಭೀಕರ ಅಪಘಾತ
ಕರ್ನೂಲು (Andhra Pradesh) ಸಮೀಪ ನಡೆದ ಭೀಕರ ಬಸ್ ಬೆಂಕಿ ದುರಂತದಲ್ಲಿ 22 ಮಂದಿ ಸಜೀವ ದಹನಗೊಂಡಿದ್ದಾರೆ. ಹೈದ್ರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿಯಿತು. ಕ್ಷಣಾರ್ಧದಲ್ಲಿ ಬೆಂಕಿ ಬಸ್ನೊಳಗೆ ವ್ಯಾಪಿಸಿತು, ಪ್ರಯಾಣಿಕರು ಜೀವಕ್ಕಾಗಿ ಪರದಾಡಿದರು.
ಬಸ್ನಲ್ಲಿ ಒಟ್ಟು 44 ಮಂದಿ ಇದ್ದು, 12 ಮಂದಿ ಕೆಳಗೆ ಹಾರಿ ಬದುಕುಳಿದರೆ, 10 ಮಂದಿ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದ ಭೀಕರತೆ ನೋಡಿದವರ ಕಣ್ಣು ನೀರಾಗಿದೆ.
ಪಬ್ಲಿಕ್ ಹೀರೋ ನವೀನ್ – 6 ಜನರ ಜೀವ ಉಳಿಸಿದ ಧೈರ್ಯಶಾಲಿ
ಆಪತ್ತಿನ ಹೊತ್ತಿನಲ್ಲಿ ನವೀನ್ ಎಂಬ ಯುವಕ ದೇವದೂತನಂತೆ ಬಂದಿದ್ದಾರೆ. ಹಿಂದೂಪುರದಿಂದ ನಂದ್ಯಾಲ್ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರು ಬಸ್ ಬೆಂಕಿಯಲ್ಲಿ ಕರಗುತ್ತಿರುವ ದೃಶ್ಯ ನೋಡಿ ತಕ್ಷಣ ಕಾರು ನಿಲ್ಲಿಸಿದರು.
ಬಸ್ನ ಗ್ಲಾಸ್ ಒಡೆದು ಪ್ರಯಾಣಿಕರನ್ನು ಹೊರತೆಗೆದರು, ಗಾಯಾಳುಗಳನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು.
ಮತ್ತೊಬ್ಬ ಪ್ರಯಾಣಿಕ ಹೈಮಾರೆಡ್ಡಿಯೂ ಸಹಾಯಕ್ಕಾಗಿ ಮುಂದಾದರು ಮತ್ತು ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಈ ಇಬ್ಬರ ಧೈರ್ಯದಿಂದ 6 ಮಂದಿಯ ಜೀವ ಉಳಿದಿದೆ. ಜನರ ಕಣ್ಣಲ್ಲಿ ನವೀನ್ ನಿಜವಾದ ಪಬ್ಲಿಕ್ ಹೀರೋ ಆಗಿದ್ದಾರೆ.

ಸಾವನ್ನು ಗೆದ್ದ ಜಯಸೂರ್ಯ – ಅದೃಷ್ಟದ ಬಲದಿಂದ ಪಾರಾದ ವಿದ್ಯಾರ್ಥಿ
23 ವರ್ಷದ ಜಯಸೂರ್ಯ, ಬಿ.ಟೆಕ್ ವಿದ್ಯಾರ್ಥಿ, ಬೆಂಗಳೂರಿನಲ್ಲಿ ಇಂಟರ್ವ್ಯೂಗಾಗಿ ಹೊರಟಿದ್ದನು. ಅವನು ಕಾವೇರಿ ಟ್ರಾವೆಲ್ಸ್ ಬಸ್ ಬುಕ್ ಮಾಡಿದ್ದರೂ ಮೊದಲಿಗೆ ಬಸ್ ಮಿಸ್ ಆಗಿತ್ತು.
ಆದರೆ ಧೈರ್ಯ ಕಳೆದುಕೊಳ್ಳದೇ ಮೂಸಾಪೇಟೆವರೆಗೂ ಬೈಕ್ನಲ್ಲಿ ಚೇಸ್ ಮಾಡಿ ಬಸ್ ಹತ್ತಿದ.
ಕರ್ನೂಲು ಬಳಿ ಬಂದಾಗ ಬಸ್ ಹೊತ್ತಿ ಉರಿಯಿತು. ಜಯಸೂರ್ಯ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡನು.
ಅವನ ಕಥೆ ನಿಜಕ್ಕೂ ರೋಚಕ ಮತ್ತು ಅದೃಷ್ಟದ ಉದಾಹರಣೆ.
ತಾಯಿ–ಮಗಳ ದುಃಖದ ಕಥೆ: ಸಂಧ್ಯಾರಾಣಿ ಮತ್ತು ಚಂದನಾ
ಮೃತರ ಪೈಕಿ ಮೇಡಕ್ ಜಿಲ್ಲೆಯ ಸಂಧ್ಯಾರಾಣಿ ಮತ್ತು ಅವರ ಮಗಳು ಚಂದನಾ ಅವರ ಕಥೆ ಹೃದಯವಿದ್ರಾವಕವಾಗಿದೆ.
ಸಂಧ್ಯಾರಾಣಿ ಅವರ ಪತಿ ಮಸ್ಕಟ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಮಗಳು ಚಂದನಾ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ದೀಪಾವಳಿ ಹಬ್ಬದ ಪ್ರಯುಕ್ತ ಹೈದ್ರಾಬಾದ್ಗೆ ಬಂದಿದ್ದ ಕುಟುಂಬವು ಹಬ್ಬದ ಬಳಿಕ ವಾಪಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿತು.
ಜ್ವರದಿಂದ ಕೆಲವು ದಿನ ಹೈದ್ರಾಬಾದ್ನಲ್ಲಿ ಉಳಿದ ತಾಯಿ–ಮಗಳು ಬಳಿಕ ಕಾವೇರಿ ಬಸ್ನಲ್ಲಿ ಬೆಂಗಳೂರಿಗೆ ಹೊರಟಿದ್ದರು.
ಆದರೆ ಯಮನ ಕರೆದ ಸವಾರಿ ಅವರು ಹೋಗಬೇಕಾದ ಸ್ಥಳ ತಲುಪದಂತೆ ಮಾಡಿತು. ತಾಯಿ–ಮಗಳು ಇಬ್ಬರೂ ಸಜೀವ ದಹನಗೊಂಡರು.
MUST READ : BREAKING: ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ!

ಬಸ್ ಬೆಂಕಿ ಹೇಗೆ ಹೊತ್ತಿಕೊಂಡಿತು? ತನಿಖೆ ಮುಂದುವರೆಯುತ್ತಿದ
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.
ಬಸ್ನಲ್ಲಿ 22 ಮಂದಿ ಸಾವನ್ನಪ್ಪಿದ್ದು, 19 ಮಂದಿಯ ಗುರುತು ಪತ್ತೆಯಾಗಿದೆ.
ಉಳಿದವರ ಶವ ಗುರುತಿಸಲು ಡಿಎನ್ಎ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದೆ.
ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಬೈಕ್ಗೆ ಡಿಕ್ಕಿಯೇ ಪ್ರಾಥಮಿಕ ಕಾರಣ ಎನ್ನಲಾಗಿದೆ.
ದೀಪಾವಳಿ ಹಬ್ಬದ ಸಂಭ್ರಮದ ಬಳಿಕ ನಡೆದ ಈ ಕರಾಳ ಶುಕ್ರವಾರದ ದುರಂತ ಅನೇಕ ಕುಟುಂಬಗಳ ಜೀವನವನ್ನೇ ಕಳೆದುಕೊಂಡಿದೆ.
ನವೀನ್, ಜಯಸೂರ್ಯ ಮೊದಲಾದವರ ಧೈರ್ಯವೇ ಉಳಿದವರಿಗೆ ಹೊಸ ಜೀವ ನೀಡಿದೆ. ಈ ದುರಂತವು ಭವಿಷ್ಯದಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನೂ ಎಚ್ಚರಿಸುತ್ತಿದೆ.
MUST WATCH: TUMAKURU | AMBULANCE ಸಿಗದೆ ಯುವಕ ಸಾವು – ಒಂದೇ ಸುದ್ದಿಗೆ ಕೋಳಾಲಕ್ಕೆ ಬಂದೇ ಬಿಡ್ತು AMBULANCE




