California Car Accident: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯಿಂದ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

California Car Accident: ಮಾದಕ ವಸ್ತುಗಳ ಸೇವನೆ ಬಳಿಕ ಕಾರ್ ಚಾಲನೆ
ಅಪಘಾತ ಕ್ಯಾಲಿಫೋರ್ನಿಯಾದ ಒಂಟಾರಿಯೊ (Ontario) ಬಳಿಯ ಐ-10 ಫ್ರೀವೇ (I-10 Freeway) ಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಯುಬಾ ನಗರದ 21 ವರ್ಷದ ಜಶನ್ಪ್ರೀತ್ ಸಿಂಗ್ (Jashanpreet Singh) ಮಾದಕ ವಸ್ತುಗಳ ಸೇವನೆ ಮಾಡಿದ ಬಳಿಕ ಕಾರ್ ಚಲಾಯಿಸಿದ್ದಾನೆ.
ಮತ್ತಿನಲ್ಲಿದ್ದ ಕಾರಣದಿಂದ ಬ್ರೇಕ್ ಹಾಕಲು ವಿಫಲನಾಗಿದ್ದು, ಎದುರಿಗೆ ಬಂದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಸರಣಿ ಡಿಕ್ಕಿಯಿಂದ ಎಂಟು ವಾಹನಗಳ ಪೆಟ್ಟು
ಈ ಡಿಕ್ಕಿಯಿಂದ ಸುಮಾರು ಎಂಟು ವಾಹನಗಳು ಒಂದರ ಮೇಲೊಂದು ಹತ್ತಿ, ಭೀಕರ ದೃಶ್ಯ ಉಂಟಾಗಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೃಶ್ಯಗಳು ಹೃದಯ ಕಲುಕುವಂತಿವೆ.
ಇದನ್ನೂ ಓದಿ : Recruitment 2025: ಶೀಘ್ರವೇ 4600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ..!
ಪೊಲೀಸರ ತನಿಖೆ ಮತ್ತು ಆರೋಪಿ ಹಿನ್ನೆಲೆ
ಘಟನೆ ನಂತರ ಕ್ಯಾಲಿಫೋರ್ನಿಯಾ ಪೊಲೀಸರು ಸ್ಥಳಕ್ಕಾಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ತನಿಖೆಯಲ್ಲಿ ಜಶನ್ಪ್ರೀತ್ ಸಿಂಗ್ 2022ರಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದಾನೆ ಎಂಬುದು ಬಹಿರಂಗವಾಗಿದೆ. ಆತ ವಲಸೆ ಪ್ರಕ್ರಿಯೆಯಡಿ ತನಿಖೆಗೊಳಗಾಗಿದ್ದನು ಎಂದು ಮೂಲಗಳು ಹೇಳಿವೆ.
ಮಾದಕ ಸೇವನೆಯ ಅಪಾಯ ಮತ್ತು ಎಚ್ಚರಿಕೆ
ಪೊಲೀಸರು ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆ ಬಳಿಕ ವಾಹನ ಚಲಾಯಿಸುವುದು ಜೀವಘಾತಕ ಅಪಾಯ ಎಂದು ಎಚ್ಚರಿಕೆ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ವಿವರಗಳು ಮತ್ತು ಗಾಯಾಳುಗಳ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.
MUST WATCH: TUMAKURU | AMBULANCE ಸಿಗದೆ ಯುವಕ ಸಾವು – ಒಂದೇ ಸುದ್ದಿಗೆ ಕೋಳಾಲಕ್ಕೆ ಬಂದೇ ಬಿಡ್ತು AMBULANCE




