BBK12 Bigg Boss Kannada Season 12 Grand Finale ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್ ತೆಗೆದುಕೊಂಡರು. ದೆವ್ವದ ಕತೆ ಕಟ್ಟಿದ ಸ್ಪರ್ಧಿಗಳಿಗೆ ಕಿಚ್ಚ ಸಖತ್ ಕ್ಲಾಸ್ ನೀಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರು.

BBK12 ದೆವ್ವದ ಕಥೆಗಾಗಿ ಕಿಚ್ಚ ಸುದೀಪ್ನ ಕ್ಲಾಸ್!
ಈ ವಾರ ಬಿಗ್ ಬಾಸ್ ಮನೆಯಲ್ಲಿ “ದೆವ್ವದ ಕತೆ” ಎಪಿಸೋಡ್ ಭಾರೀ ಸದ್ದು ಮಾಡಿತ್ತು. ಇದರ ಪರಿಣಾಮವಾಗಿ ಫ್ಯಾನ್ಸ್ ಕೂಡ ಕೋಪಗೊಂಡಿದ್ದರು.
ಸುದ್ದಿಯ ಪ್ರಕಾರ, ಅಶ್ವಿನಿ ಗೌಡ ಮತ್ತು ಜಾಹ್ನವಿ ದೆವ್ವದ ಕಥೆಗೆ ಕಾರಣರಾಗಿದ್ದರಿಂದ, ಕಿಚ್ಚ ಸುದೀಪ್ ವೇದಿಕೆಯ ಮೇಲೆಯೇ ಇವರಿಗೆ ಖಡಕ್ ಕ್ಲಾಸ್ ತೆಗೆದುಕೊಂಡರು.
ಅವರು ರಕ್ಷಿತಾ ಶೆಟ್ಟಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಕ್ಕಾಗಿ ಕ್ಷಮೆ ಕೇಳಿಸಿದರು. ಈ ನಿರ್ಧಾರವನ್ನು ಫ್ಯಾನ್ಸ್ ಮೆಚ್ಚಿದರು.
ಇದನ್ನು ನೋಡಿ : ಜೀವ ಕಳೆದುಕೊಂಡ ಬಾಣಂತಿ.. ವೈದ್ಯರ ವಿರುದ್ಧ ಆಕ್ರೋಶ

ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?
ಫ್ಯಾನ್ಸ್ ಕಾಯುತ್ತಿದ್ದ ಕಿಚ್ಚನ ಚಪ್ಪಾಳೆ ಈ ಬಾರಿ ಗಿಲ್ಲಿಗೆ ಸಿಕ್ಕಿದೆ.ರಕ್ಷಿತಾ ವಿರುದ್ಧ ನಡೆದ ನಿಂದನೆಗಳ ನಡುವೆಯೂ, ಗಿಲ್ಲಿ ಪ್ರತೀ ಹಂತದಲ್ಲೂ ರಕ್ಷಿತಾ ಅವರ ಬೆಂಬಲದಲ್ಲಿದ್ದರು.
ಅದರ ಪರಿಣಾಮವಾಗಿ ಕಿಚ್ಚ ಸುದೀಪ್ ಅವರ “ಕಿಚ್ಚನ ಚಪ್ಪಾಳೆ” ಗಿಲ್ಲಿಗೆ ನೀಡಿ ಮನಸ್ಸು ಗೆದ್ದರು.

ಈ ವಾರ ಯಾರು ಎಲಿಮಿನೇಟ್ ಆದರು?
ಗ್ರ್ಯಾಂಡ್ ಫಿನಾಲೆಯಲ್ಲಿ ನಾಮಿನೇಟ್ ಆಗಿದ್ದ ಸ್ಪರ್ಧಿಗಳು:ಧ್ರುವಂತ್, ಧನುಷ್, ಮಲ್ಲಮ್ಮ, ಅಭಿಷೇಕ್, ಜಾಹ್ನವಿ, ಗಿಲ್ಲಿ ನಟ, ಕಾವ್ಯ, ಸ್ಪಂದನ, ರಕ್ಷಿತಾ, ಅಶ್ವಿನಿ, ಚಂದ್ರಪ್ರಭಾ ಮತ್ತು ಮಂಜು ಭಾಷಿಣಿ.
ಕೊನೆಗೆ ಅಶ್ವಿನಿ, ಮಂಜು ಭಾಷಿಣಿ ಮತ್ತು ಅಭಿಷೇಕ್ ನಡುವೆ ಎಲಿಮಿನೇಷನ್ ತೀರ್ಮಾನ ನಡೆಯಿತು.ಅಭಿಷೇಕ್ ಸೇಫ್ ಆಗಿದ್ದು, ಈ ವಾರ ಅಶ್ವಿನಿ ಮತ್ತು ಮಂಜು ಭಾಷಿಣಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಇದನ್ನು ಓದಿ : ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮದುವೆ..?
MUST WATCH : GUBBI | ಗುಬ್ಬಿಯಲ್ಲಿ1.40 ಲಕ್ಷದ ಅಭಿವೃದ್ಧಿ ಕಾಮಗಾರಿ – ಶಾಸಕ SR SRINIVAS ಗುದ್ದಲಿ ಪೂಜೆ | GUBBI NEWS |




