Chamarajanagar News : ಚಾಮರಾಜನಗರ ಹೊಂಗನೂರು ಗ್ರಾಮದಲ್ಲಿ ಎರಡು ವರ್ಷಗಳಿಂದ ಸಂಬಳ ಸಿಗದೆ ಬೇಸತ್ತ ವಾಟರ್ಮ್ಯಾನ್ ಚಿಕ್ಕಸು ನಾಯಕ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲು ಬಳಿ ನೇಣಿಗೆ ಶರಣಾದರು. ಗ್ರಾ.ಪಂ ಅಧ್ಯಕ್ಷೆ ಮತ್ತು ಪಿಡಿಓ ವಿರುದ್ಧ ಆರೋಪ.

ಸಂಬಳ ನೀಡಿಲ್ಲವೆಂದು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ವಾಟರ್ಮ್ಯಾನ್ ನೇಣಿಗೆ ಶರಣು
ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಜನರನ್ನು ಕಳಕಳಿಗೊಳಿಸಿದೆ.
ಎರಡು ವರ್ಷಗಳಿಂದ ಸಂಬಳ ಸಿಗದೆ ಬೇಸತ್ತ ವಾಟರ್ಮ್ಯಾನ್ ಒಬ್ಬರು ಗ್ರಾಮ ಪಂಚಾಯಿತಿ ಕಚೇರಿ ಬಾಗಿಲು ಬಳಿ ನೇಣಿಗೆ ಶರಣಾಗಿದ್ದಾರೆ.
ಈ ದುರ್ಘಟನೆ ಬೆಳಿಗ್ಗೆ ಗ್ರಾಮಸ್ಥರು ಕಚೇರಿಯ ಬಳಿ ಬಂದಾಗ ಬೆಳಕಿಗೆ ಬಂದಿದೆ.ಈ ಕುರಿತು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST READ : Murder Case : ಹೆತ್ತ ತಾಯಿಯನ್ನೇ ಕತ್ತು ಸೀಳಿ ಕೊಂದ ಇಬ್ಬರು ಪುತ್ರರು
Chamarajanagar News :ಎರಡು ವರ್ಷಗಳಿಂದ ಸಂಬಳ ಸಿಗದೆ ಸಂಕಷ್ಟ
ಮೃತರನ್ನು ಚಿಕ್ಕಸು ನಾಯಕ (65) ಎಂದು ಗುರುತಿಸಲಾಗಿದೆ.ಅವರು ಕಳೆದ 27 ತಿಂಗಳಿನಿಂದ ಸಂಬಳ ಪಡೆಯದೇ ಬದುಕಿನ ಕಷ್ಟದಲ್ಲಿದ್ದರು. ತಿಂಗಳ ಸಂಬಳ ಕೇವಲ ₹5,000 ಆಗಿದ್ದರೂ ಅದು ಸಿಗದೆ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು.
ಚಿಕ್ಕಸು ಅವರಿಗೆ ಮಕ್ಕಳಿದ್ದರೂ, ಅವರಿಂದ ಯಾವುದೇ ಸಹಾಯ ಸಿಗುತ್ತಿರಲಿಲ್ಲ.ತಮ್ಮ ಹೊಟ್ಟೆ ಪಾಡಿಗಾಗಿ ಕೆಲಸ ಮುಂದುವರೆಸಿದರೂ, ಗ್ರಾಮ ಪಂಚಾಯಿತಿಯಿಂದ ಸಂಬಳ ನೀಡದಿದ್ದರಿಂದ ಅವರು ಮನನೊಂದಿದ್ದರು.
ಗ್ರಾ.ಪಂ ಅಧ್ಯಕ್ಷೆ ಮತ್ತು ಪಿಡಿಓ ವಿರುದ್ಧ ಆರೋಪ
ಸ್ಥಳೀಯರ ಪ್ರಕಾರ, ಚಿಕ್ಕಸು ನಾಯಕ ಸಂಬಳಕ್ಕಾಗಿ ಹಲವಾರು ಬಾರಿ ಗ್ರಾ.ಪಂ ಅಧ್ಯಕ್ಷೆ ರೂಪಾ ಮತ್ತು ಪಿಡಿಓ ರಾಮೇಗೌಡ ಅವರ ಬಳಿ ಮನವಿ ಮಾಡಿದ್ದರು.
ಆದರೆ ಅವರು ಪ್ರತಿ ಬಾರಿ ಗದರಿಸಿ ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.ಅವರು ಸಂಬಳ ಕೇಳಿದರೆ ‘ಹೊರಗೆ ಹೋಗು’ ಎಂದು ಹೇಳುತ್ತಿದ್ದರು,” ಎಂದು ಸ್ಥಳೀಯರ ಆಕ್ರೋಶವನು ವ್ಯಕ್ತಪಡಿಸಿದಾರೆ.
ಮನನೊಂದು ಚಿಕ್ಕಸು ಡೆತ್ ನೋಟ್ ಬರೆದಿಟ್ಟು, ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲು ಮುಂದೆ ನೇಣು ಬಿಗಿದುಕೊಂಡಿದ್ದಾರೆ.
ಬೆಳಿಗ್ಗೆ ಹೊಂಗನೂರು ಗ್ರಾಮಸ್ಥರು ಕಚೇರಿಗೆ ಬಂದಾಗ ಚಿಕ್ಕಸು ಅವರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು.
ಈ ಘಟನೆ ಗ್ರಾಮದಲ್ಲಿ ಶೋಕದ ಛಾಯೆ ಹರಡಿಸಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಡೆತ್ ನೋಟ್ನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ತನಿಖೆ ಆರಂಭ
ಈ ಕುರಿತು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದು,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಪಿಡಿಓ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
MUST READ : MBBS ಸೀಟಿಗಾಗಿ ವಿದ್ಯಾರ್ಥಿ ಎಂತಹ ಖತರ್ನಾಕ್ ಐಡಿಯಾ ಮಾಡ್ದಾ ಗೊತ್ತಾ ? | SIRA NEWS |




