Koratagere : ಇಬ್ಬರು ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

ಇಬ್ಬರು ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ತೋವಿನಕೆರೆ ಗ್ರಾಮ ಪಂಚಾಯಿತಿಯ ಮಹಮದ್ ಅಲಿ ಎಂಬುವವರ ಬಳಿ ಖಾತೆ ಬದಲಾವಣೆ ಮಾಡಿಕೊಡಲು 8 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತಾತಿ ಮಹಮದ್ ಅಲಿ ಅವರು ಲೋಕಾಯುಕ್ತಕ್ಕೆ ವಿಷಯ ಮುಟ್ಟಿಸಿದ್ದರು.
ಇದನ್ನು ಓದಿ : ಒಂದೇ ದಿನ ಒಟಿಟಿಗೆ ಕಾಲಿಟ್ಟ ಎರಡು ಹಿಟ್ ಚಿತ್ರಗಳು

ಅದರಂತೆ ಇಂದು ಮಹಮದ್ ಅಲಿಯಿಂದ ಬಿಲ್ ಕಲೆಕ್ಟರ್ ಮಾರುತಿ ಹಾಗೂ ಕಾರ್ಯದರ್ಶಿ ಸುಮಾಗೆ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಮಾರುತಿ ಹಾಗೂ ಸುಮಾರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಖಾತೆ ಬದಲಾವಣೆಗೆ 8 ಸಾವಿರ ಲಂಚ – ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಲೋಕ ಬಲೆಗೆ!




