OTT : ಒಟಿಟಿಯಲ್ಲಿ ಪ್ರತಿ ವಾರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕನ್ನಡಕ್ಕಿಂತ ಪರಭಾಷಾ ಸಿನಿಮಾಗಳು ಒಟಿಟಿಗೆ ಕಾಲಿಡೋದು ಹೆಚ್ಚು.

ಒಟಿಟಿಯಲ್ಲಿ ಪ್ರತಿ ವಾರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕನ್ನಡಕ್ಕಿಂತ ಪರಭಾಷಾ ಸಿನಿಮಾಗಳು ಒಟಿಟಿಗೆ ಕಾಲಿಡೋದು ಹೆಚ್ಚು. ಈಗ ಒಂದೇ ದಿನ ಕನ್ನಡದ ಎರಡು ಸೂಪರ್ ಹಿಟ್ ಚಿತ್ರಗಳು ಒಟಿಟಿಗೆ ಕಾಲಿಟ್ಟಿವೆ. ಇದು ಪ್ರೇಕ್ಷಕರ ಪಾಲಿಗೆ ನಿಜಕ್ಕೂ ವಿಶೇಷ. ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಅಥವಾ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸಿ ಮತ್ತೊಮ್ಮೆ ನೋಡಬೇಕು ಎಂದುಕೊಂಡವರು ಸಿನಿಮಾನ ಮನೆಯಲ್ಲೇ ಕುಳಿತು ವೀಕ್ಷಿಸಬಹುದು.
ಏಳುಮಲೆ – ಈಗ Zee 5 ನಲ್ಲಿ
ಸೆಪ್ಟೆಂಬರ್ 5 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದ ‘ಏಳುಮಲೆ’ ಸಿನಿಮಾ ಇದೀಗ ಓಟಿಟಿಯಲ್ಲಿ ಲಭ್ಯವಾಗಿದೆ. ರಾಣಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಈ ಥ್ರಿಲ್ಲರ್ ಸಿನಿಮಾಗೆ ಪುನೀತ್ ರಂಗಸ್ವಾಮಿ ನಿರ್ದೇಶಕರು. ತರುಣ್ ಸುಧೀರ್ ತಮ್ಮದೇ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರವು ಒಂದು ರಾತ್ರಿಯಲ್ಲಿ ನಡೆಯುವ ನೈಜ ಘಟನೆಗಳನ್ನು ಆಧರಿಸಿದ ಕಥೆಯನ್ನೊಳಗೊಂಡಿದ್ದು, ಪ್ರಿಯಾಂಕಾ, ಜಗಪತಿ ಬಾಬು, ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್ನಲ್ಲಿ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಬಂದಿದ್ದರೂ, ಬಹುಜನರ ತನಕ ತಲುಪಿಲ್ಲ ಎಂಬ ಆತಂಕ ನಿರ್ಮಾಪಕರಿಗೆ ಇದ್ದಿತು. ಇದೀಗ ಜೀ5 ಒಟಿಟಿ ಮೂಲಕ ಚಿತ್ರ ಮತ್ತಷ್ಟು ಪ್ರೇಕ್ಷಕರಿಗೆ ತಲುಪಲಿದೆ.
ಇದನ್ನು ಓದಿ : ಬಿಗ್ ಬಾಸ್ ಟಿಆರ್ಪಿ ಔಟ್

ಅಂದೊಂದಿತ್ತು ಕಾಲ – ಈಗ Amazon Prime Videoನಲ್ಲಿ
ವಿನಯ್ ರಾಜ್ಕುಮಾರ್ ಹಾಗೂ ಅಧಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಅಂದೊಂದಿತ್ತು ಕಾಲ’ ಚಿತ್ರವೂ ಇದೇ ದಿನ (ಅಕ್ಟೋಬರ್ 17) ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ. ಆಗಸ್ಟ್ 19 ರಂದು ಥಿಯೇಟ ರ್ಗಳಲ್ಲಿ ಬಿಡುಗಡೆಯಾಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದ ಈ ಸಿನಿಮಾಗೆ ಕೀರ್ತಿ ಕೃಷ್ಣಪ್ಪ ನಿರ್ದೇಶನ ಮಾಡಿದ್ದಾರೆ.

ಇದನ್ನು ನೋಡಿ : ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಲೇಬೇಡಿ




