Chikkanayakanahalli News : ಚಿಕ್ಕನಾಯಕನಹಳ್ಳಿ ತಾಲೂಕಿನ ನಿರುವಗಲ್ ಗ್ರಾಮದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಾಣಕ್ಕೆ 2.58 ಲಕ್ಷ ರೂ. ಅನುದಾನ ಬಿಡುಗಡೆ. ಆದರೆ ಗುತ್ತಿಗೆದಾರರು ಕೋರ್ಟ್ ನಿರ್ಮಿಸದೇ ಹಣ ದೋಚಿದ್ದಾರೆ ಎಂಬ ಗಂಭೀರ ಆರೋಪ ಕ್ರೀಡಾಪಟುಗಳಿಂದ ಬಂದಿದೆ.

Chikkanayakanahalli News : ನಿರುವಗಲ್ ಗ್ರಾಮದಲ್ಲಿ ವಾಲಿಬಾಲ್ ಕೋರ್ಟ್ ಅಕ್ರಮ ಆರೋಪ!
ಚಿಕ್ಕನಾಯಕನಹಳ್ಳಿ ತಾಲೂಕಿನ ನಿರುವಗಲ್ ಗ್ರಾಮದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಾಣಕ್ಕಾಗಿ 2 ಲಕ್ಷ 58 ಸಾವಿರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಗುತ್ತಿಗೆದಾರರು ಕ್ರೀಡಾಂಗಣ ನಿರ್ಮಿಸದೇ, ಕೇವಲ ಜಾಗದಲ್ಲಿದ್ದ ಗಿಡ-ಗಂಟೆಗಳನ್ನು ತೆಗೆದು, “ಕೋರ್ಟ್ ನಿರ್ಮಾಣ ಮಾಡಲಾಗಿದೆ” ಎಂಬ ನೆಪದಲ್ಲಿ ನಾಮಫಲಕ ಅಳವಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
MUST READ : Tumakuru News : ಗೋಡೆಕೆರೆ ಗ್ರಾಮದಲ್ಲಿ ಸಾರಿಗೆ ಸೌಲಭ್ಯವಿಲ್ಲದೆ ಜನ ಪರದಾಟ
ಕ್ರೀಡಾಪಟುಗಳ ಅಕ್ರೋಶ – “ಹಣ ದೋಚಿದ್ದಾರೆ!”
ಗ್ರಾಮದಲ್ಲಿ ವಾಲಿಬಾಲ್ ಆಟಗಾರರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ, ಕ್ರೀಡಾಪಟುಗಳು ಬೆಳಗುಲಿ ಗ್ರಾಮ ಪಂಚಾಯಿತಿಗೆ ಒಂದು ವರ್ಷ ಹಿಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ನಂತರ ಅನುದಾನವೂ ಬಿಡುಗಡೆ ಆಯಿತು.
ಆದರೆ ಗುತ್ತಿಗೆದಾರರು ಯಾವುದೇ ಕಾಮಗಾರಿಯನ್ನೂ ನಡೆಸದೇ, ಕೇವಲ ಗಿಡಗಳನ್ನು ಕಿತ್ತು ಹಾಕಿ ನಾಮಫಲಕ ಹಾಕಿದ್ದಾರೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.
“ಕಳೆದ ಒಂದು ವರ್ಷದಿಂದ ಕೆಲಸ ನಡೆಯುತ್ತಿಲ್ಲ. ನಾಮಫಲಕದಲ್ಲಿ 2.58 ಲಕ್ಷ ರೂ. ಖರ್ಚಾಗಿದೆ ಅಂತ ಬರೆದಿದ್ದಾರೆ, ಆದರೆ ಕ್ರೀಡಾಂಗಣ ನಿರ್ಮಾಣದ ಇಲ್ಲ,” ಎಂದು ಕ್ರೀಡಾಪಟುಗಳು ಅಕ್ರೋಶ ವ್ಯಕ್ತಪಡಿಸಿದರು.
ಧಿಕಾರಿಗಳು ತನಿಖೆ ನಡೆಸಬೇಕೆಂದು ಕೋರಿಕೆ
ಗ್ರಾಮದ ಯುವ ಕ್ರೀಡಾಪಟುಗಳು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುತ್ತಾ, ತನಿಖೆ ನಡೆಸಿ ಅಕ್ರಮ ಬಯಲಿಗೆಳೆಯಬೇಕು, ಹಾಗೂ ನಿಜವಾದ ಕ್ರೀಡಾಪಟುಗಳಿಗೆ ಕೋರ್ಟ್ ನಿರ್ಮಾಣ ಮಾಡುವಂತೆ ಬೇಡಿಕೊಂಡಿದ್ದಾರೆ.
“ನಿರ್ಮಾಣದ ಹೆಸರಿನಲ್ಲಿ ಅಕ್ರಮ ನಡೆದಿದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು,” ಎಂದು ಸ್ಥಳೀಯರು ಒತ್ತಾಯಿಸಿದರು.
WATCH NOW : VOLLEYBALL COURT ನಿರ್ಮಾಣದಲ್ಲಿ ಅಕ್ರಮ ಅನುದಾನ ಬಂದಿದ್ರು ನಿರ್ಮಾಣ ಮಾತ್ರ ಆಗ್ತಿಲ್ಲ |NAMMA NADE NEMMOORA KADE




