ಚಿಕ್ಕಬಳ್ಳಾಪುರದಲ್ಲಿ ಅದ್ದೂರಿಯಾಗಿ ನಡೆದ ಬನ್ನಿ ಉತ್ಸವ

ನಾಡಿನಾದ್ಯಂತ ವಿಜಯದಶಮಿ ಸಂಭ್ರಮ ಸಡಗರ ಜೋರಾಗಿದ್ದು, ಇತ್ತ ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿ ದಸರಾ ಬನ್ನಿ ಉತ್ಸವ ವೈಭವಕ್ಕೆ ಸಾಕ್ಷಿಯಾಯ್ತು. ಚಿಕ್ಕಬಳ್ಳಾಪುರ ತಹಶೀಲ್ದಾರ್ ರಶ್ಮಿ ದಂಪತಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ್ದು, ಬನ್ನಿ ಪೂಜಾ ಕಾರ್ಯಕ್ರಮ ವೈಭವದಿಂದ ಜರುಗಿತು.
ಶಕ್ತಿಯ ಸಂಕೇತವಾಗಿ ಬನ್ನಿ ಮರಕ್ಕೆ ಬಿಲ್ಲು–ಬಾಣವಿಟ್ಟು ಉತ್ಸವಕ್ಕೆ ಚಾಲನೆಯನ್ನ ನೀಡಲಾಯ್ತು. ಇನ್ನು ಬನ್ನಿ ಪೂಜೆ ನೇರವೇರಿಸಿ ಬಳಿಕ ತಹಶೀಲ್ದಾರ್ ರಶ್ಮಿ ಮಾತನಾಡಿ, ತಾಲೂಕಿನ ಎಲ್ರಿಗೂ ಶುಭಾಶಯ ತಿಳಿಸಿ ರೈತರೆಲ್ರಿಗೂ ಒಳ್ಳೇದಾಗಲಿ ಎಂದ್ರು. ಅಲ್ದೇ ಇಂದು ಮೊದಲ ಬಾರಿಗೆ ನಾನು ಈ ಪೂಜೆಯನ್ನ ನೇರವೇರಿಸಿದ್ದು, ಇಂತಹ ವಿಶೇಷ ಕಾರ್ಯಕ್ರಮವನ್ನ ಎಲ್ಲೂ ನೋಡಿಲ್ಲ ಅಂದ್ರು.
ಇನ್ನು ಉತ್ಸವದಲ್ಲಿ 30ಕ್ಕೂ ಹೆಚ್ಚು ಗ್ರಾಮದ ಗ್ರಾಮದೇವತೆಗಳ ಮೆರವಣಿಗೆಗಳು ನಗರದಲ್ಲಿ ಸಂಚರಿಸಿ, ವಾಪಸಂದ್ರದ ಬನ್ನಿ ಮರದವರೆಗೆ ಸಾಗಿದ್ವು. ಅಲ್ದೇ ಮೆರವಣಿಗೆಯೊಂದಿಗೆ ನಾದಸ್ವರ ಸೇರಿದಂತೆ ಕಲಾತಂಡಗಳು, ಬಂಗಾರದ ಶಿಕಾರಿಗಳು ಸಹ ಭಕ್ತರ ಕಣ್ಮನ ಸೆಳೆದವು. ಇನ್ನ ಈ ಭವ್ಯ ಉತ್ಸವವನ್ನು ನೋಡಲು ದೇವಾಲಯ ಸಮಿತಿಯವರು ಸೇರಿದಂತೆ ಸಾವಿರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ರು.




