
Chikkaballapur Burkha Gang Arrested for Gold Robbery : ಇತ್ತೀಚಿನ ದಿನಗಳಲ್ಲಿ ಕಳ್ಳರು ಕಳ್ಳತನ ಮಾಡಲು ಖತರ್ನಾಕ್ ಐಡಿಯಾಗಳನ್ನೇ ಬಳಸ್ತಿದ್ದಾರೆ. ಸಿಸಿ ಟಿವಿಗಳು ಇರುತ್ವೇ ಅನ್ನೋದು ತಿಳಿದಿದ್ರೂ ಕೂಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಆರಾಮಾಗಿ ಟಿಪ್ ಟಾಪ್ ಆಗಿ ಬಂದು ಕಳ್ಳತನ ಮಾಡಿ ಸಲೀಸಾಗಿ ಹೋಗಿ ಬಿಡ್ತಾರೆ. ಇತ್ತ ಚಿನ್ನದಂಗಡಿಗೆ ಚಿನ್ನ ಖರೀದಿಸುವ ನೆಪದಲ್ಲಿ ಮಹಿಳೆಯರ ಗುಂಪೊಂದು ಬಂದು ಚಿನ್ನ ದೋಚಿ ಎಸ್ಕೇಪ್ ಆಗಿತ್ತು. ಸತತ ಒಂದು ವರ್ಷ ದವರೆಗೆ ಪೊಲೀಸರ ಬಲೆಗೆ ಸಿಗದೆ ಎಸ್ಕೇಪ್ ಆಗಿದ್ದರು. ಇದೀಗ ಖತರ್ನಾಕ್ ಕಳ್ಳಿಯರ ಗ್ಯಾಂಗ್ ಅನ್ನ ಒಂದು ವರ್ಷದ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಿ ಈ ಬುರ್ಖಾ ಗ್ಯಾಂಗ್ ಇರೋದು ಅಂತೀರಾ ಈ ಸ್ಟೋರಿ ನೋಡಿ…
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಇರುವುದೇ ಈ ಬುರ್ಖಾ ಗ್ಯಾಂಗ್. ಸೌಂದರ್ಯ ಫ್ಯಾಷನ್ ಅಂಡ್ ಜ್ಯುವೆಲರ್ಸ್ ಅಂಗಡಿಯಲ್ಲಿ ಒಂದು ವರ್ಷದ ಹಿಂದೆ ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದು., ಚಿನ್ನದ ಓಲೆ ಇದ್ದ ಬಾಕ್ಸ್ ಅನ್ನ ಕದ್ದು, ಐದು ಜನ ಮಹಿಳೆಯರು ಎಸ್ಕೇಪ್ ಆಗಿದ್ರು. ಇತ್ತ ಈ ಖತರ್ನಾಕ್ ಬುರ್ಕಾ ಗ್ಯಾಂಗ್ ಚಿನ್ನದ ಬಾಕ್ಸ್ ಕದ್ದಿದ್ದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ವಿಡಿಯೋ ಆಧರಿಸಿ ಬುರ್ಖಾ ಗ್ಯಾಂಗ್ ಗೆ ಬಲೆ ಬೀಸಿದ್ದ ಖಾಕಿ, ಬುರ್ಖಾ ಗ್ಯಾಂಗ್ ಬರೋಬ್ಬರಿ ಒಂದು ವರ್ಷದ ನಂತರ ಪೊಲೀಸರ ಅತಿಥಿಗಳಾಗಿದ್ದಾರೆ. ಇನ್ನು ಬಂಧಿತ ಮಹಿಳೆ ಯರನ್ನು ಕೋಲಾರ ಮೂಲದ ನಗ್ಮಾ, ಜರೀನಾ,ನಗೀನಾ, ನಬೀನಾ, ಮುಬೀನಾ ಎನ್ನಲಾಗಿದೆ.
ಇನ್ನು ಚಿಂತಾಮಣಿ ನಗರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆರೋಪಿಗಳಿಂದ 70 ಗ್ರಾಂ ತೂಕದ ಸುಮಾರು 7 ಲಕ್ಷ ಬೆಲೆ ಬಾಳುವ ಓಲೆ ಬಾಕ್ಸ್ ಅನ್ನು ವಶಪಡಿಸಿಕೊಂಡು, ಕಳುವಾಗಿದ್ದ ಚಿನ್ನಾಭರಣಗಳನ್ನ ಅಂಗಡಿ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.




