
Heavy Rains in North Karnataka : ಉತ್ತರ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಅತಿವೃಷ್ಟಿಯಿಂದ ಉಂಟಾಗಿರುವ ಪರಿಸ್ಥಿತಿ ಇದೀಗ ಭೀಕರ ರೂಪಕ್ಕೆ ತಿರುಗಿದ್ದು, ಭೀಮಾ ನದಿ ಪ್ರವಾಹದಿಂದ ನೂರಾರು ಗ್ರಾಮಗಳು ಜಲಾವೃತವಾಗಿದ್ದು, ಲಕ್ಷಾಂತರ ಎಕರೆ ಪ್ರದೇಶದ ಬೆಳೆಗಳು ಸಂಪೂರ್ಣವಾಗಿ ಹಾನಿಗೊಂಡಿವೆ ಎಂದು ಜಿಲ್ಲಾಧಿಕಾರಿಗಳ ವರದಿ ತಿಳಿಸಿದೆ.
ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಭೀಮಾ ನದಿ ಈಗ ತೀವ್ರ ಪ್ರವಾಹದ ಸ್ಥಿತಿಯಲ್ಲಿ ಹರಿಯುತ್ತಿದೆ. ಕಲಬುರಗಿ ಜಿಲ್ಲೆಯ ದೇವಣಗಾಂವ ಇಂದು ಬೆಳಗ್ಗೆ 9 ಗಂಟೆಯಿಂದ ಭೀಮಾ ನದಿ ತೀವ್ರ ಪ್ರವಾಹದ ಸ್ಥಿತಿಗೆ ತಲುಪಿದೆ. ತಗ್ಗು ಪ್ರದೇಶದ ಜನರು ಜಾಗ್ರತೆಯಿಂದ ಇರಬೇಕು ಎಂಬ ಎಚ್ಚರಿಕೆ ಹವಾಮಾನ ಇಲಾಖೆ ನೀಡಿದೆ. ಬೀದರ್ ಜಿಲ್ಲೆಯ ಮಂಜೀರಾ ನದಿ, ವಿಜಯಪುರದ ಡೋನಿ ನದಿಯು ಪ್ರವಾಹ ಉಕ್ಕಿ ಹರಿಯುತ್ತಿದೆ. ರಾಯಚೂರಿನ ಕೃಷ್ಣಾ ನದಿ, ಕಲಬುರಗಿಯ ಕಾಗಿನಾ ನದಿಯು ಸಹ ಪ್ರವಾಹವಾಗ್ತಿದೆ. ಭಾರಿ ಮಳೆಯ ಕಾರಣ, ಹಲವಾರು ರೈತರ ಬೆಳೆಗಳು ನೀರುಪಾಲಾಗಿವೆ. ವಿಶೇಷವಾಗಿ ಈರುಳ್ಳಿ, ಜೋಳ, ಶೇಂಗಾ, ಕಬ್ಬು, ಬಟಾಣಿ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿರುವ ವರದಿ ಇದೆ.
ಇನ್ನು ಕಲಬುರಗಿ ಜಿಲ್ಲೆಯ ದೇವಣಗಾಂವನಲ್ಲಿ ಭೀಮಾ ನದಿ ಇಂದು ಬೆಳಗ್ಗೆ 9 ಗಂಟೆಯಿಂದ ತೀವ್ರ ಪ್ರವಾಹ ಪರಿಸ್ಥಿತಿಯಲ್ಲಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡು ದಂಡೆಗಳಲ್ಲಿರುವ ಜನರು ಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ.ಅ.03 ಮತ್ತು 4ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.




