Accident : ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ – ರಾಷ್ಟ್ರೀಯ ಹೆದ್ದಾರಿಯಲ್ಲೆಲ್ಲಾ ಚೆಲ್ಲಿದ ಪೈಂಟ್

ರಸ್ತೆಗೆ ಬಳಿಯುವ ಪೈಂಟ್ ತುಂಬಿಕೊಂಡು ಸಾಗುತ್ತಿದ್ದ ಟೆಂಪೋ ಪಲ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಪೈಂಟ್ ಚೆಲ್ಲಿರೋ ಘಟನೆ ಚಿಕ್ಕಬಳ್ಳಾಪುರ ನಗರದ ಗೌರಿಬಿದನೂರು ರಸ್ತೆಯ ಡಿವೈನ್ ಸಿಟಿ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಗೆ ಫ್ರೀ ಪೈಂಟ್ ಬಳೆದ ಟೆಂಪೋ.!
ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿಗೆ ಮಾರ್ಕಿಂಗ್ಗೆ ಬಳಸುವ ಪೈಂಟ್ ತುಂಬಿಕೊಂಡು ಸಾಗುತ್ತಿದ್ದ ಟೆಂಪೋ ವಾಹನ, ಇದ್ದಕ್ಕಿದ್ದ ಹಾಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇದ್ದ ಬ್ಯಾರಿಕೇಡ್ಗಳು ಸಂಪೂರ್ಣ ನಜ್ಜುಗುಜ್ಜಾಗಿದೆ. Accident ನ ಪರಿಣಾಮ ಟೆಂಪೋದಲ್ಲಿದ್ದ ಪೈಂಟ್ ಡಬ್ಬಿಗಳು ಸಿಡಿದು ರಸ್ತೆ ತುಂಬ ಬಣ್ಣ ಹರಡಿಕೊಂಡಿದೆ. ಅಪಘಾತದ ಬಳಿಕ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಟೆಂಪೋ ಚಾಲಕನ ಅಜಾಗರೂಕತೆ ಅಥವಾ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನುವ ಅನುಮಾನ ವ್ಯಕ್ತವಾಗಿದೆ.
READ THIS : ರೈಲ್ವೆ ಇಲಾಖೆಯಲ್ಲಿ ಬೃಹತ್ ಉದ್ಯೋಗಾವಕಾಶ!

ಚಾಲಕನಿಗೆ ಸಣ್ಣಪುಟ್ಟ ಗಾಯ
ಇನ್ನು ಅಪಘಾತದಿಂದ ಟೆಂಪೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ರಸ್ತೆಯೆಲ್ಲಾ ಬಣ್ಣ ಚೆಲ್ಲಿಕೊಂಡಿದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
Accident – ರಸ್ತೆಯೆಲ್ಲಾ ಬಣ್ಣ ಬಣ್ಣ.!
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ರಸ್ತೆಯಲ್ಲಿ ಪೈಂಟ್ ಚೆಲ್ಲಾಡಿದ್ದು, ಕೆಲ ಕಾಲ ಸಂಚಾರಕ್ಕೆ ಅಡಚಣೆ ಆಗಿದ್ದು, ಹೆದ್ದಾರಿಯೇ ಬಣ್ಣ ಬಣ್ಣವಾಗಿ ಮಾರ್ಪಟ್ಟಿದ್ದು, ಕೆಲಕಾಲ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು.

MUST WATCH : SUB REGISTRAR OFFICEನಲ್ಲಿ ಇದೆಂಥಾ ಅಕ್ರಮ- ಡೀಲ್ಗಳಲ್ಲಿ ಅಧಿಕಾರಿಗಳು ಶಾಮೀಲು..?




