ಮೇ 15ರೊಳಗೆ ಡಿಕೆ ಶಿವಕುಮಾರ್ CM ಆಗುತ್ತಾರೆ ಎಂದು ಶಾಸಕ Iqbal Hussain ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ದೆಹಲಿಗೆ ಭೇಟಿ ನೀಡಿರುವ ವಿಚಾರಕ್ಕೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮೇ 15ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗೋದು ಫಿಕ್ಸ್, ಇದೇ ನನ್ನ ಅಂತಿಮ ದಿನಾಂಕ ಎಂದು ಶಾಸಕ Iqbal Hussain ಹೇಳಿದ್ದಾರೆ. ಡಿಕೆಶಿ ಸಿಎಂ ಆಗಲು ಈ ಹಿಂದೆ ಎರಡು-ಮೂರು ದಿನಾಂಕಗಳನ್ನು ನೀಡಿದ್ದ ಇಕ್ಬಾಲ್ ಹುಸೇನ್, ಇದೀಗ ಮೇ 15ನೇ ತಾರೀಖನ್ನು ಅಂತಿಮ ದಿನಾಂಕ ಎಂದು ಘೋಷಿಸಿದ್ದಾರೆ. ಈ ಅವಧಿಯಲ್ಲೇ DK Shivakumar ಸಿಎಂ ಆಗೇ ಆಗುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಸಿಗಬೇಕು ಅನ್ನೋದು ಎಲ್ಲರ ಬಯಕೆ. ಅವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆ. ಅವರ ಮಾರ್ಗದರ್ಶನದಲ್ಲಿ ನಾವು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಅವರ ನೇತೃತ್ವದಲ್ಲಿ ಈ ರಾಜ್ಯದ ಅಭಿವೃದ್ಧಿ ನೋಡಬೇಕು ಎಂಬುದು ಸಾಕಷ್ಟು ಶಾಸಕರ ಆಶಯವಾಗಿದೆ. ಮೇ 15ರೊಳಗೇ ಅವರಿಗೆ ಅಧಿಕಾರ ಸಿಗುತ್ತದೆ ಎನ್ನುವ ಅಭಿಲಾಷೆ ಇದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.
MUST READ : Kollur ಮೂಕಾಂಬಿಕೆ ದೇವಿಯ ದರ್ಶನ ಪಡೆದ Nirmala Sitharaman..!!

ಇನ್ನೂ ಹಿರಿಯ ನಾಯಕರುಗಳಾದ Satish Jarkiholi ಹಾಗೂ H. C. Mahadevappa ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಬಗ್ಗೆ ಮಾತನಾಡಿದ ಅವರು, ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ತಮ್ಮ ಕಷ್ಟ-ಸುಖಗಳ ಬಗ್ಗೆ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ಮಾಡಲು ಅವರು ತೆರಳಿರಬಹುದು ಎಂದು ಹೇಳಿದ್ದಾರೆ.
MUST WATCH : BENGALURU | ರಾಜ್ಯದಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ – ಧಗ ಧಗನೇ ಹೊತ್ತಿ ಉರಿದ ಶೆಡ್ ಗಳು..!




