IPL 2026 : ಏ.15, ಏ.18 ಹಾಗೂ ಏ.24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

IPL 2026 : ಟಾಟಾ ಐಪಿಎಲ್ ಪಂದ್ಯಗಳ ಹಿನ್ನೆಲೆ ನಗರದಲ್ಲಿ ಸಂಚಾರ ಸೌಲಭ್ಯವನ್ನು ಸುಧಾರಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 15 ಮತ್ತು 24ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ‘ನಮ್ಮ ಮೆಟ್ರೋ’ ಸೇವೆಯನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗುತ್ತಿದೆ.
ಅನುಕೂಲಕರ ಸಂಚಾರಕ್ಕಾಗಿ ವಿಶೇಷ ವ್ಯವಸ್ಥೆ
ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕರ ಸಂಚಾರಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಎರಡು ದಿನಗಳಲ್ಲಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲುಗಳು ಸಾಮಾನ್ಯ ವೇಳಾಪಟ್ಟಿಗಿಂತ ವಿಸ್ತರಿಸಿಕೊಂಡು ರಾತ್ರಿ 11:00ರಿಂದ ಮುಂಜಾನೆ 2:00ರವರೆಗೆ ಸಂಚರಿಸಲಿವೆ.
READ THIS : ಸಿಎಂ, ಡಿಸಿಎಂನ ಭೇಟಿಯಾದ ಮಿಸ್ ಯುನಿವರ್ಸ್!

ವಿಶೇಷವಾಗಿ:
- ವೈಟ್ಫೀಲ್ಡ್ (ಕಾಡುಗೋಡಿ)ನಿಂದ ರಾತ್ರಿ 12:30ಕ್ಕೆ
- ಚಲ್ಲಘಟ್ಟದಿಂದ ರಾತ್ರಿ 12:45ಕ್ಕೆ
- ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ ರಾತ್ರಿ 12:45ಕ್ಕೆ
- ಬೊಮ್ಮಸಂದ್ರದಿಂದ ರಾತ್ರಿ 12:30ಕ್ಕೆ
- ಆರ್.ವಿ ರಸ್ತೆದಿಂದ ರಾತ್ರಿ 2:00ಕ್ಕೆ ರೈಲುಗಳ ಸೇವೆ ಲಭ್ಯವಿರಲಿದೆ
- ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್)ದಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1:30ಕ್ಕೆ ಕೊನೆಯ ರೈಲುಗಳು ಹೊರಡಲಿವೆ.
ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚಾರ
ಇನ್ನು ಏಪ್ರಿಲ್ 18ರಂದು ನಡೆಯಲಿರುವ ಪಂದ್ಯ ದಿನದಂದು ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆ ದಿನ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
MUST WATCH : ಅಂಬೇಡ್ಕರ್ ಅಂದ್ರೆ ಕೇವಲ ಹೆಸರಲ್ಲ ಶಕ್ತಿ – ಅವರನ್ನು ದೇವರಂತೆ ಪೂಜಿಸ್ತಾರೆ ಯಾಕೆ?





