CBSE 10ನೇ ತರಗತಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ; ರಿಸಲ್ಟ್ ಚೆಕ್ ಮಾಡಲು ಈ ವಿಧಾನ ಅನುಸರಿಸಿ.

2025-26ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಸುಮಾರು 25 ಲಕ್ಷ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ಗಳಾದ CBSE Results Portal ಅಧವಾ CBSE Official Website ನಲ್ಲಿ ಪರಿಶೀಲಿಸಬಹುದು.
ಫೆಬ್ರವರಿ 17 ರಿಂದ ಮಾರ್ಚ್ 11ರ ವರೆಗೆ ಪರೀಕ್ಷೆ ನಡೆದಿತ್ತು
ಈ ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 17ರಿಂದ ಮಾರ್ಚ್11 ರವರೆಗೆ ನಡೆದಿದ್ದು, ಉತ್ತೀರ್ಣ ಶೇಕಡಾವಾರು, ಲಿಂಗವಾರು ವಿವರಗಳು, ರಾಜ್ಯವಾರು ಸಾಧನೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಮಂಡಳಿ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
ಡಿಜಿಲಾಕರ್ ಮೂಲಕ ಅಂಕಪಟ್ಟಿ
ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು DigiLocker ಮೂಲಕ ಲಭ್ಯವಾಗಲಿದೆ.
READ THIS : ಅಂಬೇಡ್ಕರ್ ಜಯಂತಿ ಯಾಕೆ ಆಚರಿಸುತ್ತಾರೆ? ಮಹತ್ವವೇನು?

ಡಿಜಿಲಾಕರ್ ಖಾತೆ ತೆರೆಯುವ ವಿಧಾನ
- cbseservices.digilocker.gov.in ಗೆ ಭೇಟಿ ನೀಡಿ
- “Get Started” ಮೇಲೆ ಕ್ಲಿಕ್ ಮಾಡಿ
- ಅಗತ್ಯ ವಿವರಗಳು ಮತ್ತು ಶಾಲೆಯಿಂದ ನೀಡಲಾದ ಪ್ರವೇಶ ಕೋಡ್ ನಮೂದಿಸಿ
- OTP ಮೂಲಕ ಮೊಬೈಲ್ ಸಂಖ್ಯೆ ಪರಿಶೀಲಿಸಿ
- ಖಾತೆ ಸಕ್ರಿಯಗೊಳಿಸಿ
CBSE ಫಲಿತಾಂಶ ಪರಿಶೀಲಿಸುವ ವಿಧಾನ
- cbse.gov.in ನಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
- ಸಿಬಿಎಸ್ಇ Class 10th Result 2026’ ಲಿಂಕ್ ಕ್ಲಿಕ್ ಮಾಡಿ
- ಅಗತ್ಯ ರುಜುವಾತುಗಳನ್ನು ನಮೂದಿಸಿ
- ಶಾಲಾ ಸಂಖ್ಯೆ (School No) ಮತ್ತು ಅಡ್ಮಿಟ್ ಕಾರ್ಡ್ ಐಡಿ ನಮೂದಿಸಿ
- ‘Submit’ ಕ್ಲಿಕ್ ಮಾಡಿ
- ವಿಷಯವಾರು ಅಂಕಗಳೊಂದಿಗೆ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ
MUST WATCH : ಹಣಕ್ಕಾಗಿ ಸ್ನೇಹಿತರಿಂದಲೇ ಕಿಡ್ನಾಪ್ ಐವತ್ತು ಸಾವಿರ ರೂ. ಹಣಕ್ಕೆ ಡಿಮ್ಯಾಂಡ್





