
Cauvery Aarti in KRS : ಬಹು ನಿರೀಕ್ಷಿತ ಕಾವೇರಿ ಆರತಿ ಕಾರ್ಯಕ್ರಮ ಶ್ರೀರಂಗಪಟ್ಟಣದ ಕೆಆರ್ಎಸ್ ಜಲಾಶಯದ ಬೃಂದಾವನದ ಬಳಿ ನಿನ್ನೆಯಿಂದ ಶುಭಾರಂಭವಾಯಿತು. ಈ ಐತಿಹಾಸಿಕ ಕ್ಷಣಕ್ಕೆ ಸಂಜೆ 6 ಗಂಟೆ ಸುಮಾರಿಗೆ, ಗಂಗಾ ಆರತಿಗೆ ಮಾದರಿಯಾದಂತೆ, ಕಾವೇರಿ ನದಿಗೆ ವಿಶಿಷ್ಟ ಮಂಗಳಾರತಿ ಸಲ್ಲಿಸಲಾಯಿತು.
ಇನ್ನು ಕಾರ್ಯಕ್ರಮಕ್ಕಾಗಿ ಬೃಂದಾವನದ ಬೋಟಿಂಗ್ ಪಾಯಿಂಟ್ ಬಳಿ ವಿಶೇಷ ವೇದಿಕೆ ಸಿದ್ಧಪಡಿಸಲಾಗಿತ್ತು. ಕಾವೇರಿ ಮಾತೆಯ ಪ್ರತಿಮೆ ಮುಂದೆ ಸುಮಾರು 14 ಮಂದಿ ವೈದಿಕರ ತಂಡ ವೇದಘೋಷಗಳೊಂದಿಗೆ ಆರತಿ ನೆರವೇರಿಸಿದರು. ಬೆಳಿಗ್ಗೆಯೇ ಸ್ತೋತ್ರ, ಮಂತ್ರ ಪಾರಾಯಣದೊಂದಿಗೆ ಪೂಜೆ ಆರಂಭವಾಗಿದ್ದು, ಸಂಜೆ ವಿವಿಧ ಬಣ್ಣದ ದೀಪಗಳ ಬೆಳಕಿನಲ್ಲಿ ಅಲಂಕರಿಸಲಾಗಿದೆ.

ಇನ್ನು ದಿನ್ನು ನೋಡಲೂ ಮಂಡ್ಯ ಜಿಲ್ಲೆಯ ಜನತೆ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಬಂದು ಈ ದೇವಿ ಆರತಿಯನ್ನು ಕಣ್ತುಂಬಿಕೊಂಡರು. ಜೊತೆಗೆ ಎಲ್ಲಾ ವೀಕ್ಷಕರಿಗೂ ಉಚಿತವಾಗಿ ಲಡ್ಡು ಪ್ರಸಾದ ನೀಡಲು ವ್ಯವಸ್ಥೆ ಮಾಡಲಾಗಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಆರತಿಯಲ್ಲಿ ಪ್ರತಿದಿನ 1 ಲಕ್ಷ ಲಡ್ಡುಗಳಂತೆ, ಒಟ್ಟು 5 ಲಕ್ಷ ಲಡ್ಡುಗಳು ವಿತರಣೆ ಆಗಲಿದೆ. ಆರತಿಯ ಮೊದಲ ದಿನದ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು.




