ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆ Siddaramaiah ಸೋಲುವ ಭೀತಿ ಎದುರಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಇದೇ ವೇಳೆ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಿಎಂ Siddaramaiah ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಉಪಚುನಾವಣೆ ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋದರೆ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ ಎಂದು ಭವಿಷ್ಯ ನುಡಿದರು.
MUST READ : Haveri : ಟ್ರ್ಯಾಕ್ಟರ್ ಹರಿದು 2 ವರ್ಷದ ಪುಟ್ಟ ಕಂದಮ್ಮ ಸಾವು..!!

ಕಾಂಗ್ರೆಸ್ ಸೋಲುವ ಭೀತಿ – ನಾರಾಯಣಸ್ವಾಮಿ ಆರೋಪ
ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸೋಲುವ ಭೀತಿ ಕಾಡುತ್ತಿದೆ ಎಂದು ಆರೋಪಿಸಿದರು. ಜೊತೆಗೆ, ಮತದಾರರಿಗೆ ಹಣ ನೀಡುವ ಬಗ್ಗೆ ಗಂಭೀರ ಆರೋಪಗಳನ್ನು ಕೂಡ ಮಾಡಿದರು.
ಅವರ ಪ್ರಕಾರ, ಹಿಂದೂಗಳ ಮತಕ್ಕೆ 7,000 ರೂ. ಮತ್ತು ಮುಸ್ಲಿಮರ ಮತಕ್ಕೆ 10,000 ರೂ. ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು.

ಅಹಿಂದ ವಿಚಾರದಲ್ಲಿ ರಾಜಕೀಯ ಟೀಕೆ
ಇನ್ನೂ ಮುಂದೆ, ಸಿದ್ದರಾಮಯ್ಯ ಅವರಿಗೆ ಆಪತ್ತು ಬಂದಾಗ ಮಾತ್ರ ಅಹಿಂದ ನೆನಪಾಗುತ್ತದೆ ಎಂದು ನಾರಾಯಣಸ್ವಾಮಿ ಟೀಕಿಸಿದರು. ದಾವಣಗೆರೆಗೆ ಬಂದಾಗ ಅಹಿಂದ ಮತ ನೀಡಬೇಡಿ ಎನ್ನುತ್ತಾರೆ, ಆದರೆ ಬಾಗಲಕೋಟೆಗೆ ಹೋದಾಗ ಅಹಿಂದಗೆ ಮತ ಹಾಕಿ ಎನ್ನುತ್ತಾರೆ ಎಂದು ಹೇಳಿದರು.

ನಮ್ಮ ಅಭ್ಯರ್ಥಿ ಬಲಿಷ್ಠ – ಪ್ರತಿಪಕ್ಷ ವಿಶ್ವಾಸ
ಕೊನೆಗೆ, ನಮ್ಮ ಅಭ್ಯರ್ಥಿ ಇಲ್ಲಿ ಬಲಿಷ್ಠವಾಗಿ ನಿಂತಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ತೀವ್ರ ಸವಾಲ್ ಆಗಿದ್ದಾರೆ. ಆದ್ದರಿಂದ, ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಜಯ ಖಚಿತ ಎಂದು ಛಲವಾದಿ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
MUST WATCH : DAVANAGERE BY ELECTION | ಜಮೀರ್ಗಾಗಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮನೆಯಲ್ಲಿ ಭರ್ಜರಿ ಔತಣ ಕೂಟ |




