ಕೇರಳದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ Modi , ‘ಧುರಂಧರ್’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಬಗ್ಗೆ ಮಾತನಾಡಿ ಟೀಕಿಸಿದ್ದಾರೆ.

ಕೇರಳದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಪ್ರಧಾನಿ ನರೇಂದ್ರ Modi ಅವರು ಕೆಲವು ವಿವಾದಾತ್ಮಕ ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ವಿಶೇಷವಾಗಿ ‘ಧುರಂಧರ್’, ‘ದಿ ಕೇರಳ ಸ್ಟೋರಿ’, ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರು ಈ ಸಿನಿಮಾಗಳಲ್ಲಿ ತೋರಿಸಿರುವ ವಿಷಯಗಳನ್ನು ಸುಳ್ಳು ಎಂದು ಟೀಕಿಸುವವರ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
MUST READ : RCB vs CSK ಐಪಿಎಲ್ ಟಿಕೆಟ್ ನೀಡುವುದಾಗಿ ವಂಚನೆ ..!!

‘ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಆರೋಪ
ಚುನಾವಣಾ ಭಾಷಣದ ವೇಳೆ ನರೇಂದ್ರ ಮೋದಿ ಅವರು, ಈ ಸಿನಿಮಾಗಳ ಬಗ್ಗೆ ಕೆಲವರು ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
‘ಕೇರಳ ಸ್ಟೋರಿ ಬಂದಾಗ ಅದರಲ್ಲಿ ಇರುವುದೆಲ್ಲಾ ಸುಳ್ಳು ಅಂತ ಹೇಳಿದರು. ಕಾಶ್ಮೀರ್ ಫೈಲ್ಸ್ ಬಂದಾಗಲೂ ಸುಳ್ಳು ಎಂದರು. ಧುರಂಧರ್ ಸಿನಿಮಾ ಬಂದಾಗಲೂ ಅದೇ ರೀತಿಯ ಆರೋಪ ಮಾಡಿದರು’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಇದರ ಜೊತೆಗೆ, ಎಫ್ಸಿಆರ್ಎ ಕಾಯ್ದೆ ಹಾಗೂ ಯೂನಿಫಾರ್ಮ್ ಸಿವಿಲ್ ಕೋಡ್ (ಯುಸಿಸಿ) ವಿಷಯಗಳಲ್ಲಿಯೂ ಇದೇ ರೀತಿಯ ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ವೈರಲ್ ಆದ ವಿಡಿಯೋ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ
ನರೇಂದ್ರ ಮೋದಿ ಅವರ ಈ ಭಾಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಪರಿಣಾಮವಾಗಿ ‘ಧುರಂಧರ್’, ‘ದಿ ಕೇರಳ ಸ್ಟೋರಿ’, ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಬಗ್ಗೆ ಮತ್ತೆ ಚರ್ಚೆ ಹೆಚ್ಚಾಗಿದೆ.
ಅನೇಕ ನೆಟ್ಟಿಗರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ನರೇಂದ್ರ ಮೋದಿ ಅವರ ಮಾತಿಗೆ ಬೆಂಬಲ ನೀಡಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
MUST WATCH : ಖಾಸಗಿ ಕಂಪನಿಗಳಿಂದ ಇದೆಂಥಾ ಒತ್ತುವರಿ – ಒತ್ತುವರಿಗೆ ರೋಷಾವೇಶಗೊಂಡ ಗ್ರಾಮಸ್ಥರು..? | PAVAGADA NEWS |




